ಖಾನಾಪೂರ-ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಧಾರಾಕಾರ ಮಳೆ ಮುಂದುವರೆದಿದೆ.
ಖಾನಾಪೂರ ಪೋಲಿಸ್ ತರಬೇತಿ ಕೇಂದ್ರಕ್ಕೂ ಪ್ರವಾಹದ ಭೀತಿ ಎದುರಾಗಿದೆ.
ಪೊಲೀಸ್ ತರಬೇತಿ ಕೇಂದ್ರದ ಪಕ್ಕದಲ್ಲಿರುವ ಕುಂಬಾರಹಳ್ಳ ನೀರು ನುಗ್ಗುವ ಭೀತಿ ಎದುರಾಗಿದೆ.ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ತರಬೇತಿ ಕೇಂದ್ರದಿಂದ ತಾಲೂಕು ಆಡಳಿತಕ್ಕೆ ಪತ್ರ ಬರೆಯಲಾಗಿದೆ.
ಖಾನಾಪುರ ತಹಶಿಲ್ದಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ತರಬೇತಿ ಕೇಂದ್ರದ ಪ್ರಾಂಶುಪಾಲರು ಪತ್ರ ಬರೆದು,ಕೇಂದ್ರ ಜಲಾವೃತವಾಗುವ ಆತಂಕವಿದೆ ಪ್ರವಾಹ ಪರಿಸ್ಥಿತಿ ಎದುರಾದರೆ,ಎರಡು ಸಮುದಾಯ ಭವನಗಳ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.
ಸ್ಥಳಾಂತರಗೊಳ್ಳುವ ಪರಿಸ್ಥಿತಿ ಬಂದರೆ ಸ್ಥಳಾಂತರಕ್ಕೆ ಕಲ್ಯಾಣ ಮಂಟಪ ಸೇರಿ ಕೆಲ ಕಟ್ಟಡ ಕಾಯ್ದಿರಿಸಲು ಖಾನಾಪೂರ ತಹಶೀಲದಾರರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಲಪ್ರಭಾ ಪ್ರವಾಹಕ್ಕೆ ತುತ್ತಾಗಿದ್ದ ತರಬೇತಿ ಶಾಲೆ ಈ ವರ್ಷವೂ ಪ್ರವಾಹಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ.
ಸದ್ಯಕ್ಕೆ ಪೊಲೀಸ್ ತರಬೇತಿ ಶಾಲೆಗೆ ನೀರು ನುಗ್ಗುವ ಆತಂಕ ಇಲ್ಲ,ಇದೇ ರೀತಿ 15 ದಿನ ಮಳೆ ಬಂದ್ರೆ ಪೊಲೀಸ್ ತರಬೇತಿ ಶಾಲೆಗೆ ನೀರು ನುಗ್ಗಬಹುದು,ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ.
ಖಾನಾಪುರ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಆಮಸಿದ್ಧ ಗೋಂಧಳೆ ಅವರು ಪತ್ರ ಬರೆದು ಖಾನಾಪೂರ ತಾಲ್ಲೂಕಾ ಆಡಳಿತದ ಗಮನ ಸೆಳೆದಿದ್ದಾರೆ.