Breaking News

ಕೊರೋನಾ ಝಿರೋ…ರಾಜ್ಯೋತ್ಸವದ ಮೆರವಣಿಗೆ ಮಾಡಿದವನೇ ಹಿರೋ…!!!

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿ,ಆರೋಗ್ಯ ಇಲಾಖೆಯ ನಿರಂತರ ಪರಿಶ್ರಮ,ಸ್ಥಳೀಯ ಶಾಸಕರ ಕೋವೀಡ್ ಲಸೀಕಾ ಅಭಿಯಾನದ ಪರಿಣಾಮ ಇವತ್ತು ಬೆಳಗಾವಿ ಜಿಲ್ಲೆಯ ಹೆಲ್ತ್ ಬುಲೆಟಿನ್ ಸಿಹಿ ಸುದ್ದಿ ನೀಡಿದ್ದು ಇವತ್ತು ಬೆಳಗಾವಿ ಜಿಲ್ಲೆಯಲ್ಲಿ ಕೋವೀಡ್ ರಿಪೋರ್ಟ್ ಝಿರೋ….

ಒಂದು ವಾರದಲ್ಲಿ ಎರಡನೇಯ ಬಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಕೋವೀಡ್ ರಿಪೋರ್ಟ್ ಶೂನ್ಯ ಬಂದಿದೆ ಕಳೆದ ಸೋಮವಾರ ಶೂನ್ಯ ರಿಪೋರ್ಟ್ ಬಂದಿತ್ತು ಇವತ್ತೂ ಕೂಡಾ ರಿಪೋರ್ಟ್ ಶೂನ್ಯವಾಗಿದೆ.

ಗಣೇಶ ಹಬ್ಬ,ದಸರಾ ಮೆರವಣಿಗೆ ಬೆಳಗಾವಿ ಮಹಾನಗರ ಪಾಲಿಕೆ ಚನಾವಣೆಗೆ ಅನುಮತಿ ನೀಡಿರುವ ಸರ್ಕಾರ ಬೆಳಗಾವಿ ರಾಜ್ಯೋತ್ಸವದ ಮೆರವಣಿಗೆಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿದೆ.ಸರ್ಕಾರದ ಕನ್ನಡದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತ್ರತ್ವದಲ್ಲಿ ಸರ್ಕಾರದ ವಿರುದ್ದ ಸಮರ ಸಾರಿದ್ದಾರೆ.

ದೀಪಕ ಗುಡಗಮಟ್ಟಿ ಅವರ ಜೊತೆ ಉತ್ತಮ ಒಡನಾಟ ಹೊಂದಿರುವ ಬೆಳಗಾವಿ ಫೇಸ್ ಬುಕ್ ಪೇಜ್ ಅಡ್ಮಿನ್ ಕಿರಣ ಮಾಳಣ್ಣವರ ಅವರು ಕರವೇ ಜಿಲ್ಲಾಧ್ಯಕ್ಷ ದೀಪಕ ಸೂಚನೆ ಮೇರೆಗೆ ಬೆಳಗಾವಿ ರಾಜ್ಯೋತ್ಸವದ ಮೆರವಣೆಗೆಗೆ ಅನುಮತಿ ನೀಡುವಂತೆ ನಡೆಸಿದ ಟ್ವೀಟ್ ಅಭಿಯಾನ ರಾಷ್ಟ್ರಮಟ್ಟದಲ್ಲಿ ಟಾಪ್ 1 ಟ್ರೆಂಡ್ ನಲ್ಲಿ ಬಂದಿದೆ.

ಬೆಳಗಾವಿ ಫೇಸ್ ಬುಕ್ ಪೇಜ್ ಅಡ್ಮೀನ್ ಕಿರಣ ಮಾಳಣ್ಣವರ ಅವರು ಈಗ ಕನ್ನಡ ಸಂಘಟನೆಗಳ ಸಹಕಾರ ಮತ್ತು ಕರವೇ ಜಿಲ್ಲಾಧ್ಯಕ್ಚ ದೀಪಕ ಗುಡಗನಟ್ಟಿ ಅವರ ವಿಶೇಷ ಬೆಂಬಲ, ಕರುನಾಡ ಸೇವಕರ ಸಂಘಟನೆಯ ನಿರ್ಧಾರದಿಂದಾಗಿ,ರಾಜ್ಯೋತ್ಸವ ಮೆರವಣೆಗೆಗೆ ಸರ್ಕಾರ ಅನುಮತಿ ನೀಡುವಂತೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಲು ಮುಂದಾಗಿದ್ದಾರೆ.

ಉಪವಾಸ ಸತ್ಯಾಗ್ರಹಕ್ಕೆ ದೀಪಕ ಗುಡಗನಟ್ಟಿ ಅವರು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ,ಬೆಳಗಾವಿ ಜಿಲ್ಲೆಯಲ್ಲಿ ಈಗ ಕೊರೋನಾ ಕಂಟ್ರೋಲ್ ಆಗಿದ್ದು ಸರ್ಕಾರ ಚರ್ಚೆ,ವಿಮರ್ಶೆ,ಅಭಿಪ್ರಾಯಕ್ಕೆ ಅವಕಾಶ ಕೊಡದೇ ಬೆಳಗಾವಿ ರಾಜ್ಯೋತ್ಸವದ ಮೆರವಣಿಗೆಗೆ ಅನುಮತಿ ಕೊಟ್ಟು ,ಬೊಮ್ಮಾಯಿ ಸರ್ಕಾರ ಕನ್ನಡದ ಸರ್ಕಾರ ಎಂದು ಸಾಭೀತು ಮಾಡಲು ಇದು ಸುವರ್ಣ ಅವಕಾಶ…

ಸರ್ಕಾರ ಅನುಮತಿ ಕೊಡದೇ ಇದ್ದರೂ ಕನ್ಮಡದ ಅಭಿಮಾನಿಗಳು ಬೆಳಗಾವಿಯಲ್ಲಿ ರಾಜ್ಯೋತ್ಸವದ ಮೆರವಣೆಗೆ ಮಾಡೇ ಮಾಡ್ತಾರೆ.ಯಾಕಂದ್ರೆ ಬೆಳಗಾವಿಯಲ್ಲಿ ಕೊರೋನಾ ಝಿರೋ ರಾಜ್ಯೋತ್ಸವ ಮೆರವಣೆಗೆ ಮಾಡಿದವನೇ ಹಿರೋ…!!

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *