ಚ,ಕಿತ್ತೂರ-ಪ್ರತಿ ವರ್ಷ ಆಚರಿಸುವ ಕಿತ್ತೂರು ಉತ್ಸವ ಜನೋತ್ಸವವಾಗಿ ಮಾರ್ಪಟ್ಟಿದ್ದು, ಇದಕ್ಕೆ ನೀಡಲಾಗುವ ರೂ. 30ಲಕ್ಷ ಅನುದಾನವನ್ನು ರೂ. 1ಕೋಟಿಗೆ ಹೆಚ್ಚಿಸಬೇಕು ಎಂದು ಕಲ್ಮಠದ ಸ್ವಾಮೀಜಿ ನೇತೃತ್ವದ ತಂಡದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಳ್ಳಲಾಯಿತು.
ಚನ್ನಮ್ಮನ ಕಿತ್ತೂರಿಗೆ ತಾಲ್ಲೂಕು ಕಚೇರಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಮನವಿ ಪತ್ರ ನೀಡಲಾಯಿತು. ಪಂಚಾಕ್ಷರಿ ಸ್ವಾಮೀಜಿ ಇತರರು ಇದ್ದರು.
ಚನ್ನಮ್ಮನ ಕಿತ್ತೂರು: ಈಗಾಗಲೇ ಘೋಷಣೆಯಾಗಿ ಅಧಿಸೂಚನೆ ಹೊರ ಬಿದ್ದಿರುವ ನೂತನ ಕಿತ್ತೂರು ತಾಲ್ಲೂಕಿಗೆ ಕಚೇರಿಗಳ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.
ಮಹಾದ್ವಾರದಲ್ಲಿ ಮನವಿ ಪತ್ರ ನೀಡಿದ ನಂತರ ಮರಳಿ ಕಲ್ಮಠಕ್ಕೆ ಸ್ವಾಮೀಜಿಗಳಿಬ್ಬರು ಆಗಮಿಸಿದರು. ಇದನ್ನರಿತಿದ್ದ ಸಚಿವರು ಅನಂತರ ಶ್ರೀಮಠಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು.
ಕಂದಾಯ ಸಚಿವರೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದ ತಾಲ್ಲೂಕು ರಚನೆಗೆ ಪ್ರಯತ್ನಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಭರವಸೆ ನೀಡಿದರು
ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ನಿವೃತ್ತ ತಹಶೀಲ್ದಾರ್ ಯ. ರು. ಪಾಟೀಲ, ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಜಗದೀಶ ವಸ್ತ್ರದ, ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ಕೆಪಿಸಿಸಿ ಸದಸ್ಯ ಶಂಕರ ಹೊಳಿ, ಗುರುಸಿದ್ಧಯ್ಯ ಕಲ್ಮಠ ಇತರರು ಇದ್ದರು.
Check Also
ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??
ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …