ಬೆಳಗಾವಿ.
ಸಿದ್ದರಾಮಯ್ಯ ನವರ ಬಜೇಟ ನಲ್ಲಿ ಗ್ರಾಮಿಣ ಭಾಗದವರನ್ನು ಗಂಭಿರವಾಗಿ ಪರಿಗಣಿಸಿಲ್ಲ.
ಇಲ್ಲಿ ಕೃಷಿಕರನ್ನ ಕೈ ಬಿಟ್ಟಿದ್ದಾರೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತ ಸಮುದಾಯವನ್ನು ಕಡೆಗೆಣಿಸಿವೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ. ಕೂಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿ. ನಡೆಸಿ ಈ ಭಾಗದ ರೈತರಿಗೆ ಅನೂಲುವಾಗುವಂತೆ ಆವೃತ್ತ ನಿಧಿ ಸ್ಥಾಪಿಸಲಿ. ಈ ಬಗ್ಗೆ ಆವೃತ್ತ ನಿಧಿ ಮನವಿ ಮಾಡಲಾಗಿತ್ತು. ಆದ್ರೂ ಇದರ ಬಗ್ಗೆ ಕೆಲಸ ಆಗಿಲ್ಲ. ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ವಿಫಲವಾಗಿದೆ. ಎಂದು ಕೋಡಿಹಳ್ಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದರು
ಸಿದ್ದರಾಮಯ್ಯ ನವರು ಚುನಾವಣಾ ದೃಷ್ಟಿಯಲ್ಲಿ ಇಟ್ಟುಕೊಂಡು ಬಜೇಟ ಮಂಡನೆ ಮಾಡಿದ್ದಾರೆ.
ದುಡಿಯುವಂತ ರೈತರು ಹಳ್ಳಿಗರು ಶ್ರಮಿಕರು ಜಾತಿವಿಂಗಡನೆ ಮಾಡುತ್ತಿದ್ದಾರೆ. ಜಾತಿವಾರು ಅಪಾಯಕಾರಿಯಾಗಿದೆ.ಎಂದು ಕೋಡಿಹಳ್ಳಿ ಕಳವಳ ವ್ಯೆಕ್ತಪಡಿಸಿರು
ಸರ್ಕಾರ ರೈತರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿತ್ತು ಆದ್ರೆ ಮಾಡಿಲ್ಲಾ. ರೈತರನ್ನು ಕಡೆಗಡೆಸುವ ಕೆಲಸ ಕೇಂದ್ರದಿಂದಲೂ ಆಗಿದೆ ರಾಜ್ಯ ಸರ್ಕಾರದಿಂದಲೂ ಆಗುತ್ತಿದೆ.ಎಂದರು
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ದಿಸವ ಇಂಗಿತವನ್ನು ವ್ಯಕ್ತಪಡಿಸಿದ ಕೂಡಿಹಳ್ಳಿ ಚಂದ್ರಶೇಖರ್. ರೈತ ಸಂಘಟನೆಗಳು ಚುನಾವಣೆಯಲ್ಲಿ ಸ್ಪರ್ದಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ತೀರ್ಮಾಣ ಮಾಡಿಲ್ಲ. ಎಂದು ಕೋಡಿಹಳ್ಳಿ ತಿಳಿಸಿದರು