Breaking News
Home / Breaking News / ಬೆಳಗಾವಿ ಜಿಲ್ಲೆಯಲ್ಲಿ ಹನ್ನೊಂದು ತಾಲೂಕುಗಳು, ಐತಿಹಾಸಿಕ ನೆಲಕ್ಕೆ ತಾಲೂಕಿನ ಮಾನ್ಯತೆ..

ಬೆಳಗಾವಿ ಜಿಲ್ಲೆಯಲ್ಲಿ ಹನ್ನೊಂದು ತಾಲೂಕುಗಳು, ಐತಿಹಾಸಿಕ ನೆಲಕ್ಕೆ ತಾಲೂಕಿನ ಮಾನ್ಯತೆ..

ಬೆಳಗಾವಿ-ಬೆಳಗಾವಿ ಜಿಲ್ಲೆಯ ಐತಿಹಾಸಿಕ ನೆಲಕ್ಕೆ ರಾಜ್ಯ ಸರ್ಕಾರ ಕೊನೆಗೂ ತಾಲೂಕಿನ ಮಾನ್ಯತೆ ನೀಡಿದೆ ವೀರ ರಾಣಿಯ ಕಿತ್ತೂರು ಈಗ ಅಧಿಕೃತ ತಾಲೂಕು ಆಗಿದ್ದು ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಕಿತ್ತೂರು ತಾಲೂಕಿಗೆ ಗ್ರೇಡ್-೧ ತಹಶೀಲ್ದಾರ ಸೇರಿದಂತೆ ತಾಲೂಕಿಗೆ ಅಗತ್ಯವಿರುವ ಎಲ್ಲ ಹುದ್ದೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ವಿಶೇಷ ಕಾಳಜಿಯಿಂದಾಗಿ ಕಿತ್ತೂರಿಗೆ ತಾಲೂಕಿನ ಮಾನ್ಯತೆ ದೊರೆತಿದೆ ಬೆಳಗಾವಿ ಜಿಲ್ಲೆ ಈಗ ಹನ್ನೊಂದು ತಾಲೂಕುಗಳನ್ನು ಹೊಂದಿದ ಅತೀ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಿದೆ

ಬೆಳಗಾವಿಯಲ್ಲಿ ಪಾಟೀಲ ಪುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಸ್ ಎಂ ಕೃಷ್ಣಾ ಅವರು ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ್ದರೂ ಈ ಸಂಧರ್ಛದಲ್ಲಿ ಪಾಟೀಲ ಪುಟ್ಟಪ್ಪ ಅವರು ಐತಿಹಾಸಿಕ ಚನ್ನಮ್ಮನ ಕಿತ್ರೂರನ್ನು ತಾಲೂಕು ಎಂದು ಘೋಷಿಸುವಂತೆ ಪಟ್ಟು ಹಿಡಿದ ಕಾರಣ ಆಗಿನ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣಾ ಚನ್ನಮ್ಮನ ಕಿತ್ತೂರು ನಿಯೋಜಿತ ತಾಲೂಕು ಎಂದು ಘೋಷಿಸಿ ವಿಶೇಷ ತಹಶೀಲ್ದಾರರನ್ನು ನೇಮಕ ಮಾಡಿದ್ದರು

ಅಂದಿನಿಂದ ಆರಂಭವಾದ ಕಿತ್ತೂರು ತಾಲೂಕಿನ ಹೋರಾಟ ಮುಂದುವರೆದು ನಂತರ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಜಗದೀಶ ಶೆಟ್ಟರ್ ಅವರು ಕಿತ್ತೂರು ತಾಲೂಕು ಎಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದರು ಮಾಜಿ ಶಾಸಕ ಸುರೇಶ ಮಾರಿಹಾಳ ಅವರು ಕೀತ್ತೂರಿಗೆ ಅನೇಕ ತಾಲೂಕಾ ಕಚೇರಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು

ಹಾಲಿ ಶಾಸಕ ಡಿಬಿ ಇನಾಮದಾರ ಈಗ ಕಿತ್ತೂರಿಗೆ ಗ್ರೇಡ್೧  ತಹಶೀಲ್ದಾರನನ್ನು ನೇಮಿಸುವಲ್ಲಿ ಯಶಸ್ವಿಯಾಗಿದ್ದು ಶುಕ್ರವಾರ ಕಿತ್ತೂರಿನಲ್ಲಿ ತಹಶೀಲ್ದಾರ ಕಚೇರಿಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ

ಕಾಗೋಡು ತಿಮ್ಮಪ್ಪ ಅವರು ಕೊಟ್ಟ ಮಾತಿನಂತೆ ನಡೆದು ಕಿತ್ತೂರಿಗೆ ಮಿನಿ ವಿಧಾನ ಸೌಧವನ್ನು ಮಂಜೂರು ಮಾಡಿ ಕಿತ್ತೂರಿನ ಕೋಟೆ ಮಾದರಿಯಲ್ಲಿ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ

 

Check Also

Banking & SSC Competitive Exam Coaching New Batch*

*Banking & SSC Competitive Exam Coaching New Batch* IBPS (Institute for Banking personal selection) has …

Leave a Reply

Your email address will not be published. Required fields are marked *