Breaking News

ಕಾರ್ಮಿಕರಿಗೆ ಸಹಾಯಧನ: ಬ್ಯಾಂಕ್ ವಿವರ ಸಲ್ಲಿಸಲು ಸೂಚನೆ

 

ಬೆಳಗಾವಿ,  ಕೋರೋನ ವೈರಸ್ ಹರುಡುತ್ತಿರುವ ಹಿನ್ನಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.೧,೦೦೦/-ಗಳ ಸಹಾಯ ಧನ ಬಿಡುಗಡೆಗಾಗಿ ಕಾರ್ಮಿಕರ ಬ್ಯಾಂಕ್ ಖಾತೆಯ ವಿವರವನ್ನು ಸಲ್ಲಿಸುವಂತೆ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ವೈರಸ್ ಎಲ್ಲಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ದಿನಾಂಕ: ೨೫/೦೩/೨೦೨೦ ರಂದು ರಾಜ್ಯಾದ್ಯಾಂತ ಲಾಕಡೌನ್ ಘೋಷಿಸಿರುವುದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳು ಸ್ಥಗಿತ ಗೊಂಡಿದ್ದು, ಇಲ್ಲಿ ಕೆಲಸ ನಿರ್ವಹಿಸುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕೆಲಸ ನಿರ್ವಹಿಸಲು ಸಾಧ್ಯವಾಗದಿವುದರಿಂದ ಅವರ ಅವಶ್ಯಕ ನಿರ್ವಹಣೆಗಾಗಿ ರೂ.೧,೦೦೦/- ಗಳ ಸಹಾಯ ಧನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ.

ಬೆಳಗಾವಿ ಜಿಲ್ಲೆಯಲ್ಲಿ ೨೦೦೭ ರಿಂದ ೨೦೧೬ ವರಗೆ ನೋಂದಣಿಯಾದ ಕಾರ್ಮಿಕರಲ್ಲಿ ಈ ಕಛೇರಿಯಲ್ಲಿ ಲಭ್ಯವಿರುವ ಸುಮಾರು ೧೬,೯೦೦ ಫಲಾನುಭವಿಗಳ ಖಾತೆ ರೂ. ೧,೦೦೦/- ಗಳ ಜಮೆ ಮಾಡಲು ಕೆನರಾ ಬ್ಯಾಂಕ ಬೆಂಗಳೂರು ಇವರಿಗೆ ಸಲ್ಲಿಸಲಾಗಿರುತ್ತದೆ.

ಬಾಕಿ ಉಳಿದ ಫಲಾನುಭವಿಗಳು ತಾವು ನೋಂದಣಿಯಾದ ತಾಲೂಕ ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೧ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ ೯೪೪೮೬೯೩೫೫೩, ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೨ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ: ೯೪೮೨೨೧೪೫೪೦, ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೩ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ: ೯೪೪೮೭೭೬೩೬೬, ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೪ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ: ೯೯೪೫೪೮೬೬೮೯, ಕಾರ್ಮಿಕ ನಿರೀಕ್ಷಕರವರ ಬೈಲಹೊಂಗಲ ಮತ್ತು ಖಾನಾಪೂರ ವೃತ್ತ ರವರ ದೂರವಾಣಿ ಸಂಖ್ಯೆ: ೯೯೦೧೧೯೮೮೦೪, ಕಾರ್ಮಿಕ ನಿರೀಕ್ಷಕರವರ ಸವದತ್ತಿ ಮತ್ತು ರಾಮದುರ್ಗ ವೃತ್ತ ರವರ ದೂರವಾಣಿ ಸಂಖ್ಯೆ: ೭೦೨೨೦೫೪೦೯೪, ಕಾರ್ಮಿಕ ನಿರೀಕ್ಷಕರವರ ಗೋಕಾಕ ಮತ್ತು ರಾಯಭಾಗ ವೃತ್ತ ರವರ ದೂರವಾಣಿ ಸಂಖ್ಯೆ: ೯೮೪೫೨೫೧೫೪೫, ಕಾರ್ಮಿಕ ನಿರೀಕ್ಷಕರವರ ಚಿಕ್ಕೋಡಿ, ಹುಕ್ಕೇರಿ ಮತ್ತು ನಿಪ್ಪಾಣಿ ವೃತ್ತ ರವರ ದೂರವಾಣಿ ಸಂಖ್ಯೆ: ೯೯೦೦೪೨೮೭೬೦, ಕಾರ್ಮಿಕ ನಿರೀಕ್ಷಕರವರ ಅಥಣಿ ವೃತ್ತ ರವರ ದೂರವಾಣಿ ಸಂಖ್ಯೆ: ೯೭೪೩೫೦೮೨೯೫, ಈ ದೂರವಾಣಿ ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ತಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಫಲಾನುಭವಿಯ ನೋಂದಣಿ ಗುರುತಿನ ಚೀಟಿ ಸಲ್ಲಿಸಲು ಸೂಚಿಸಲಾಗಿದೆ.

ನೋಂದಾಯಿತ ಕಾರ್ಮಿಕ ಸಂಘದ ಪದಾಧಿಕಾರಿಗಳು ತಮ್ಮ ಸಂಘಟಣೆಯಿಂದ ನೋಂದಾಯಿಸಿದ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳನ್ನು ಲಿಸ್ಟ್ ಮಾಡಿ ಸಂಬಂಧಪಟ್ಟ ಹಿರಿಯ ಕಾರ್ಮಿಕ ನಿರೀಕ್ಷಕರ/ ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಸಲ್ಲಿಸಬೇಕು ಎಂದು ಬೆಳಗಾವಿ ಉಪ ವಿಭಾಗ -೧ ಮತ್ತು ಉಪ ವಿಭಾಗ-೨ರ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *