ಬೆಳಗಾವಿ-ಬೆಳಗಾವಿ ಜಿಲ್ಲೆಯ ಲಂಭಾನಿ ಸಮಾಜದ ಜನರಿಗೆ ಸಮಾಜದ ಕಾರ್ಯಕ್ರಮಗಳನ್ನು ನಡೆಸಲು ಸೇವಾಲಾಲ ಭವನ ನಿರ್ಮಿಸಲು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಇಪ್ಪತ್ತು ಗುಂಟೆ ಜಾಗೆಯನ್ನು ಮಂಜೂರು ಮಾಡಿಸಿ ಕೊಡುವಲ್ಲಿ ಯಶಸ್ವಿಯಾದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಬಂಜಾರಾ ಸಮಾಜದ ಮಹಿಳೆಯರು ಸತ್ಕರಿಸಿ ಗೌರವಿಸಿದರು
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬೆಳಗಾವಿ ನಗರದ ಸಮೀಪದಲ್ಲಿರುವ ಕಂಗ್ರಾಲಿ ಕೆಎಚ್ ಗ್ರಾಮದಲ್ಲಿ ಇಪ್ಪತ್ತು ಗುಂಟೆ ಜಾಗೆ ಮಂಜೂರಾಗಿದ್ದು ಜಿಲ್ಲಯ ಲಂಭಾನಿ ಸಮಾಜದ ಜನರಿಗೆ ಸಮಾಜದ ಕಾರ್ಯಕ್ರಮ ನಡೆಸಲು ಅನಕೂಲವಾಗಿದೆ ಭವನ ನಿರ್ಮಿಸಲು ಲಂಭಾನಿ ಸಮಾಜ ಅನೇಕ ವರ್ಷಗಳಿಂದ ಹೊರಾಟ ಮಾಡುತ್ತ ಬಂದಿತ್ತು ಆದರೆ ಲಕ್ಷ್ಮೀ ಹೆಬ್ಬಾಳಕರ ಅವರು ನಿರಂತರವಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಮಾಜಕ್ಕೆ ಜಾಗೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಮಾಜದ ಮಹಿಲೆಯರು ಹರ್ಷ ವ್ಯೆಕ್ತಪಡಿಸಿದರು
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹೆಬ್ಬಾಳಕರ ಅವರನ್ನು ಭೇಟಿಯಾದ ಲಂಭಾನಿ ಸಮಾಜದ ಮಹಿಳೆಯರು ಅವರನ್ನು ಸತ್ಕರಿಸಿ ಗೌರವಿಸಿದರು ಇದೇ ಸಂಧರ್ಭದಲ್ಲಿ ಮಾಜಿ ಬುಡಾ ಅಧ್ಯಕ್ಷ ಯುವರಾಜ ಕದಂ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು
ಈ ಸಂಧರ್ಭದಲ್ಲಿ ಶೈಲಜಾ ಅಶೋಕ ಚವ್ಹಾಣ, ರಾಮಪ್ಪಾ ಭೋಜಪ್ಪಾ ಲಮಾನಿ,ಸುರೇಶ ಭೀಮಪ್ಪ ರಾಠೋಡ,ಮಾರುತಿ ಹಿರಪ್ಪ ಲಮಾನಿ,ಸುಭಾಷ ಗೌಡರ,ಸೋಮಪ್ಪ ಗೋಪಾಲ ಲಮಾನಿ,ಸೋಮಪ್ಪ ಯಂಕಪ್ಪ ಲಮಾನಿ ಸೇರಿದಂತೆಅಖಿಲ ಭಾರತ ಬಂಜಾರಿ ಸೇವಾ ಸಂಘ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …