Breaking News

ಬೆಳಗಾವಿ ಸ್ಪೇಷಲ್ ಸೀತಾಫಲ್

ಬೆಳಗಾವಿ:
ಬೆಳಗಾವಿ ನಗರದ ಎಪಿಎಂಸಿ ರಸ್ತೆ ಈಗ ಸೀತಾಫಲ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಬೆಳಗಾವಿ ನಗರದ ಸುತ್ತಮುತ್ತಲಿನ ಗ್ರಾಮಗಳ ಜನ ತಮ್ಮ ಗ್ರಾಮಗಳಲ್ಲಿ ಬೆಳೆದ ಸೀತಾಫಲಗಳನ್ನು ಇಲ್ಲಿಯೇ ತಂದು ಮಾರಾಟ ಮಾಡುತ್ತಿದ್ದಾರೆ.
ಬೆಳಗಾವಿಯ ಚಿಂದೋಡಿ ಲೀಲಾ ರಂಗ ಮಂದಿರ ದಾಟಿದರೇ ಸಾಕು ಆಜಂ ನಗರದ ರಸ್ತೆಯುದ್ದಕ್ಕೂ ರಸ್ತೆ ಎರಡು ಬದಿಯಲ್ಲಿ ಸೀತಾಫಲ ಮಾರಾಟಗಾರರನ್ನು ಕಾಣಬಹುದು. ಉತ್ತಮ ಗುಣಮಟ್ಟದ ಸೀತಾಫಲಗಳ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಹೀಗಾಗಿ ಗ್ರಾಹಕರು ಸೀತಾಫಲ ಖರೀದಿಸಲು ಬರುವುದು ರೂಡಿಯಾಗಿದೆ.
ಈಗ ಸೀತಾಫಲ ಸೀಜನ್ ಆಗಿರುವುದರಿಂದ ಬಹಳಷ್ಟು ಪ್ರಮಾಣದ ಸೀತಾಫಲಗಳು ಮಾರುಕಟ್ಟೆಗೆ ಬರುತ್ತಿವೆ. ಬೆಳಗಾವಿ ಸಮೀಪದ ಕಂಗ್ರಾಳಿ, ಕಾಕತಿ, ಸೇರಿದಂತೆ ಹಲವಾರು ಗ್ರಾಮಗಳ ಜನ ಸೀತಾಫಲಗಳನ್ನು ಮಾರಾಟ ಮಾಡಲು ಬೆಳಗಾವಿಗೆ ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿಯ ಸ್ಪೇಷಲ್ ಸೀತಾಫಲ್ ಎನ್ನುವ ರೀತಿಯಲ್ಲಿ ನಗರಾಧ್ಯಂತ ಸೀತಾಫಲ್‍ಗಳು ಮಾರಾಟವಾಗುತ್ತದೆ.

Check Also

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳ ಪರಶೀಲನೆ

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ …

Leave a Reply

Your email address will not be published. Required fields are marked *