Breaking News

ಕಿತ್ತೂರು ಕ್ಷೇತ್ರದಿಂದ ಲಕ್ಷ್ಮೀ ಅಕ್ಕಾ ಇಲೆಕ್ಷನ್ ಗೆ ನಿಲ್ಲೋದು ಪಕ್ಕಾ!!

ಬೆಳಗಾವಿ-ಕಿತ್ತೂರು ಕಾಂಗ್ರೆಸ್‌ನಲ್ಲಿ ಬಂಡಾಯದ ಬಿರುಗಾಳಿ ಬೀಸುವ ಎಲ್ಲ ಲಕ್ಷಣಗಳು ಕಂಡು ಬಂದಿವೆ ಇನಾಮದಾರ್ ಕುಟುಂಬದ ಸೊಸೆ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ದೆ ಮಾಡುವ ಎಲ್ಲ ಸಾಧ್ಯತೆಗಳಿದ್ದು ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ವಿಕ್ರಂ ಇನಾಮದಾರ್ ಅವರನ್ನು ಚುನಾವಣೆಯ ಅಖಾಡಕ್ಕೆ ಇಳಿಸಲು ಇನಾಮದಾರ್ ಅಭಿಮಾನಿಗಳು ಎಲ್ಲ ಸಿದ್ಧತೆಗಳನ್ನು ನಡೆಸಿದ್ದಾರೆ.

ಶುಕ್ರವಾರ ಕಿತ್ತೂರು ಕ್ಷೇತ್ರದ ನೇಗಿನಹಾಳದಲ್ಲಿರುವ ಡಿ.ಬಿ ಇನಾಮದಾರ್ ಮನೆಯಲ್ಲಿ ಅಭಿಮಾನಿಗಳು ಸಭೆ ಸೇರಿ ಈ ಸಭೆಯಲ್ಲಿ ಮಾತನಾಡಿದ ಇನಾಮದಾರ್ ಆಪ್ತ ರಾಜು ಅಂಕಲಗಿ ನಮಗೆ ಪಕ್ಷದ ಟಿಕೆಟ್ ಬೇಕು ಅಂತಾ ಇಲ್ಲ ನಮಗೆ ಟಿಕೆಟ್ ಸಿಗದಿದ್ದರೂ ಇನಾಮದಾರ್ ಕುಟಬದವರನ್ನು ನಿಲ್ಲಿಸೋಣ,ಗೆಲ್ಲಿಸೋಣ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ
ಕಾಂಗ್ರೆಸ್‌ನ ಮೊದಲ ಪಟ್ಟಿ ರೀಲಿಸ್ ಆಗುವ ಒಂದು ದಿನ ಮುನ್ನ ಚನ್ನಮ್ಮನ ಕಿತ್ತೂರಿನಲ್ಲಿ ಈ ಬಾರಿ ಮತ್ತೆ ಕಾಂಗ್ರೆಸ್‌ನಲ್ಲಿ ಬಂಡಾಯದ ಬಿರುಗಾಳಿ ಎಬ್ಬಿಸಿದ್ದಾರೆ.

ಕಿತ್ತೂರಿನ ಧಣಿ, ಮಾಜಿ ಸಚಿವ ಡಿ.ಬಿ.ಇನಾಮದಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಇನಾಮದಾರ ಕುಟುಂಬದ ಕಟ್ಟಾ ಬೆಂಬಲಿಗರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರತೊಡಗಿದ್ದಾರೆ.
ಧಣಿ ಇನಾಮದಾರ ಬೇಕಾದರೆ ರಾಜಕೀಯದಿಂದ ನಿವೃತ್ತಿ ಪಡೆಯಬೇಕು. ಆದರೆ, ಅವರ ಕುಟುಂಬದ ಸದಸ್ಯರೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನೂರಾರು ಬೆಂಬಲಿಗರು, ಕಾರ್ಯಕರ್ತರು ಅವರ ಮನೆಗೆ ತೆರಳಿ, ಒತ್ತಡ ಹೇರಿದರು. ಇನಾಮದಾರ ಅವರ ಪುತ್ರ ವಿಕ್ರಮ್ ಇಲ್ಲವೇ ಅವರ ಸೊಸೆಯನ್ನು ಲಕ್ಷ್ಮೀ ಯನ್ನು ಚುನಾವಣಾ ಕಣಕ್ಕಿಳಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಹಬೀಬ್ ಶಿಲ್ಲೇದಾರ, ಶಂಕರ ಹೊಳಿ ಮೊದಲಾದ ಮುಖಂಡರ ನೇತೃತ್ವದಲ್ಲಿ ಅವರ ಮನೆಯಲ್ಲಿ ಸುಧೀರ್ಘವಾಗಿ ಚರ್ಚೆ ಮಾಡಲಾಯಿತು. ಇನಾಮದಾರ ಕುಟುಂಬದ ಸದಸ್ಯರೇ ಚುನಾವಣಾ ಆಖಾಡಕ್ಕೆ ಧುಮುಕಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಕಿತ್ತೂರಿನ ಟಿಕೆಟ್ ಫೈನಲ್ ಆಗಿಲ್ಲ. ಇನ್ನು ಪೆಂಡಿಂಗ್ ಇದೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ, ಪಕ್ಷದ ಚಿಹ್ನೆ ನಮಗೆ ಅಗತ್ಯ ಇಲ್ಲ. ಪಕ್ಷ ಟಿಕೆಟ್ ನೀಡಲಿ, ಬಿಡಲಿ, ಚುನಾವಣಾ ಕಣಕ್ಕಿಳಿಯುವುದು ಖಚಿತ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದರು.

ಕಾಂಗ್ರೆಸ್‌ನಿಂದ ಬಾಬಾಸಾಹೇಬ ಪಾಟೀಲ ಅವರಿಗೆ ಟಿಕೆಟ್ ನೀಡಿದರೆ, ಇನಾಮದಾರ ಕುಟುಂಬದ ಸದಸ್ಯರು ಸ್ಪರ್ಧಿಸುವುದು ಖಚಿತವಾಗಿದ್ದರೆ, ಇನಾಮದಾರ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಬಾಬಾಸಾಹೇಬ ಪಾಟೀಲ ಬಂಡಾಯ ಎಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈ ಬಾರಿ ಚುನಾವಣೆಯಲ್ಲಿ ಇನಾಮದಾರ ಮತ್ತು ಪಾಟೀಲ ಅವರು ಹಳೆಯ ವೈಷಮ್ಯ ಬಿಟ್ಟು ಒಂದಾಗಿದ್ದಾರೆ ಎಂಬ ಕೂಗು ಕೇಳಿಬಂದಿತ್ತು. ಆದರೆ, ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.

ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ಅವರನ್ನು ಎಲ್ಲರೂ ಲಕ್ಷ್ಮೀ ಅಕ್ಕಾ ಎಂದೇ ಕರೆಯುತ್ತಾರೆ ಈ ಲಕ್ಷ್ಮೀ ಅಕ್ಕಾ ಕಿತ್ತೂರು ಕ್ಷೇತ್ರದಿಂದ ಸ್ಪರ್ದೆ ಮಾಡುವದು ನೂರಕ್ಕೆ ನೂರು ಖಚಿತ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *