Home / Breaking News / ಎರಡೂವರೆ ಕೋಟಿಯಲ್ಲಿ ಮೂರು ಮೂರ್ತಿ,ಲೋಕೋಪಯೋಗಿ ಮಂತ್ರಿಗೆ ಕೀರ್ತಿ!!

ಎರಡೂವರೆ ಕೋಟಿಯಲ್ಲಿ ಮೂರು ಮೂರ್ತಿ,ಲೋಕೋಪಯೋಗಿ ಮಂತ್ರಿಗೆ ಕೀರ್ತಿ!!

ಬೆಳಗಾವಿ-ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಮೆ ಪೊಲಿಟಿಕ್ಸ್ ಮುಂದುವರೆದಿದೆ.ಛತ್ರಪತಿ ಶಿವಾಜಿ, ವಿಶ್ವಜ್ಯೋತಿ ಬಸವೇಶ್ವರ, ಸಂಭಾಜೀ ಮಹಾರಾಜರ ಪುತ್ಥಳಿ ಆಯ್ತು,ಈಗ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಿದ್ದು

ಲಬೆಳಗಾವಿಯ ಸುವರ್ಣಸೌಧ ಎದುರು ತಲೆ ಎತ್ತಿರುವ ಮೂವರು ಮಹನೀಯರ ‌ಪುತ್ಥಳಿಗಳು ನಾಳೆ ಅನಾವರಣ ಮಾಡಲಾಗುತ್ತಿದೆ.ಮೂವರು ಮಹನೀಯರ ಪುತ್ಥಳಿಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ನಾಳೆ ಬೆಳಗ್ಗೆ 11 ಕ್ಕೆ ಬೆಳಗಾವಿಗೆ ಆಗಮಿಸಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸುತ್ತಾರೆ.ಬೊಮ್ಮಾಯಿಗೆ ಉಸ್ತುವಾರಿ ಸಚಿವ ಗೋವಿಂದ ‌ಕಾರಜೋಳ, ಲೋಕೋಪಯೋಗಿ ‌ಸಚಿವ ಸಿಸಿ ಪಾಟೀಲ ಸಾಥ್ ನೀಡಲಿದ್ದಾರೆ.ಕಳೆದ ಚಳಿಗಾಲ ಅಧಿವೇಶನ ವೇಳೆ ಮಹನೀಯರ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ಸಿಎಂ,
ಮೂರೇ ತಿಂಗಳ ಅವಧಿಯಲ್ಲಿ ಮೂವರು ಮಹನೀಯರ ಪುತ್ಥಳಿ ನಿರ್ಮಿಸಿರುವ ಲೋಕೋಪಯೋಗಿ ಇಲಾಖೆ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

1 ಕೋಟಿ 8 ಲಕ್ಷ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಪಂಚಲೋಹ ಕಂಚಿನ ಪುತ್ಥಳಿ,72 ಲಕ್ಷ ವೆಚ್ಚದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ
ಪಂಚಲೋಹ ಕಂಚಿನ ಪುತ್ಥಳಿ,72 ಲಕ್ಷ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಂಚಲೋಹ ಕಂಚಿನ ಪುತ್ಥಳಿ ನಿರ್ಮಾಣಒಟ್ಟು 2 ಕೋಟಿ 52 ಲಕ್ಷ ‌ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಹನೀಯರ ಪುತ್ಥಳಿಬಳಿಕ ಗೋಕಾಕ್ ಕ್ಷೇತ್ರಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿರುವ ಸಿಎಂ
ನಾಳೆ ಮುಖ್ಯಮಂತ್ರಿ ಕಾರ್ಯಕ್ರಮದ ಮಾಹಿತಿ ನೀಡಿದ ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸಂಜಯ್ ಪಾಟೀಲ

Check Also

ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆ ಫಸ್ಟ್ ಮೀಟೀಂಗ್..!!

ಬೆಳಗಾವಿ- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ,ಬೆಳಗಾವಿ ಜಿಲ್ಲೆಯಿಂದ ಇಬ್ಬರು ಮಂತ್ರಿಗಳಾಗಿದ್ದಾರೆ.ಈ ಇಬ್ವರು ಮಂತ್ರಿಗಳು ನಾಳೆ ಮಂಗಳವಾರ ಬೆಳಗಾವಿಯ ಸುವರ್ಣ …

Leave a Reply

Your email address will not be published. Required fields are marked *