Breaking News

ಒಂದೇ ಕ್ಷೇತ್ರದಲ್ಲಿ 42 ಗಾರ್ಡನ್ ಗಳನ್ನು ನಿರ್ಮಿಸಿದ್ದು,ಎಲ್ಲಿ ಯಾರು ಗೊತ್ತಾ??

ಬೆಳಗಾವಿ- ಹೋಲ್ ಸೇಲ್ ವ್ಯಾಪಾರ,ಹೋಲ್ ಸೇಲ್ ಖರೀದಿ, ಯನ್ನು ನಾವು ನೋಡಿದ್ದೇವೆ.ಆದ್ರೆ ಹೋಲ್ ಸೇಲ್ ಡೆವಲಪ್ಮೆಂಟ್ ನೋಡಲು ನಮಗೆ ಶಾಸಕ ಅಭಯ ಪಾಟೀಲರ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮಾತ್ರ ನೋಡಲು ಸಿಗುತ್ತದೆ.ಹೌದು ಇದು ಸತ್ಯ,ಯಾಕಂದ್ರೆ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಒಟ್ಟು 42 ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಬೆಳಗಾವಿ ದಕ್ಷಿಣತಕ್ಷೇತ್ರದ ಯಾವ ಭಾಗದಲ್ಲಿ ಗಾರ್ಡನ್ ಇಲ್ಲ,ಆ ಭಾಗವನ್ನು ಆಯ್ಕೆ ಮಾಡಿ ಅಲ್ಲಿ ಒಟ್ಟು 42 ಉದ್ಯಾನವನಗಳನ್ನು ನಿರ್ಮಿಸಿದ್ದು , 42 ರ ಪೈಕಿ ಇವತ್ತು ಒಂದೇ ದಿನ ಒಟ್ಟು ಒಂಬತ್ತು ಕಡೆಗಳಲ್ಲಿ ಏಕಕಾಲಕ್ಕೆ ಒಂದಾದ ಮೇಲೊಂದು ಗಾರ್ಡನ್ ಉದ್ಘಾಟನೆ ಮಾಡಲಾಗುತ್ತಿದೆ.

ಬೆಳಗಿನ ಜಾವದಿಂದಲೇ ಸೇವಕ ಅಭಯ ಪಾಟೀಲ ಫೀಲ್ಡ್ ಗೆ ಇಳಿಯುತ್ತಾರೆ.ಇದು ಅವರ ಸ್ಪೇಶ್ಯಾಲಿಟಿ, ಇವತ್ತು ಮಂಗಳವಾರ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪಾಲಿಗೆ, ಶುಭ ಮಂಗಳ ಸುಪ್ರಭಾತ, ಈ ಸುದ್ದಿಯ ಜೊತೆ ಅಪ್ಲೋಡ್ ಮಾಡಿರುವ ಪಟ್ಟಿ ನೋಡಿದ್ರೆ ಇವತ್ತು ಎಷ್ಟು ಗಂಟೆಗೆ ಎಲ್ಲಿ ಗಾರ್ಡನ್ ಉದ್ಘಾಟನೆ ಆಗುತ್ತಿದೆ ಅನ್ನೋದು ನಿಮಗೆ ಗೊತ್ತಾಗುತ್ತದೆ.

Check Also

ವ್ಯಾಪಕ‌ ಮಳೆ: ಜು.27 ರಂದು ಶಾಲಾ-ಕಾಲೇಜು‌ ರಜೆ

ಬೆಳಗಾವಿ, ಜು.26(ಕರ್ನಾಟಕ ವಾರ್ತೆ): ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ(ಜುಲೈ 27) ಜಿಲ್ಲೆಯ ರಾಮದುರ್ಗ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳ …

Leave a Reply

Your email address will not be published. Required fields are marked *