Breaking News
Home / Breaking News / ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಕಿಟ್ ಕೊಟ್ಟ ಸಿಎಂ!!

ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಕಿಟ್ ಕೊಟ್ಟ ಸಿಎಂ!!

 

ಬೆಂಗಳೂರು, ): ಸಮಾಜ‌ ಸುಧಾರಣೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪತ್ರಕರ್ತರ ವೃತ್ತಿಗೆ ಅನುಕೂಲವಾಗುವಂತಹ ಲ್ಯಾಪ್‌ಟಾಪ್, ಕ್ಯಾಮೆರಾ ಮತ್ತಿತರ ಅಗತ್ಯ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡಲಾಗಿದ್ದು, ಇವುಗಳನ್ನು ಬಳಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸೋಮವಾರ (ಮಾ.27) ನಡೆದ‌ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಪತ್ರಕರ್ತರಿಗೆ ಮಾಧ್ಯಮ‌ ಕಿಟ್ ವಿತರಿಸಿ ಅವರು ಮಾತನಾಡಿದರು.

ಪತ್ರಕರ್ತರು ಮಾಹಿತಿ ಸಂಗ್ರಹದ ಜತೆಗೆ ವಿಚಾರಸಂಗ್ರಹವನ್ನೂ ಹೆಚ್ಚಿಸಿಕೊಂಡು ಜನೋಪಯೋಗಿ ಮಾಹಿತಿಯನ್ನು ನೀಡಬೇಕು.
ಇದನ್ನು ಬಳಸಿಕೊಂಡು ಇನ್ನಷ್ಟು ‌ಪರಿಣಾಮಕಾರಿ‌ ಕೆಲಸ ಸಮಾಜ ಹಾಗೂ ವ್ಯವಸ್ಥೆಯ ಅಂಕುಡೊಂಕು ತಿದ್ದುವ ಕೆಲಸವನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಓಬಿಸಿ ಪತ್ರಕರ್ತರಿಗೆ ವೃತ್ತಿಗೆ ಸಹಕಾರಿಯಾಗುವಂತಹ ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತಿತರ ಗುಣಮಟ್ಟದ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ. ರಾಜ್ಯ ಎಲ್ಲ ಜಿಲ್ಲೆಗಳ ಒಟ್ಟು 605 ಜನರಿಗೆ ಅಗತ್ಯ ಸಲಕರಣೆಯನ್ನು ನೀಡಲಾಗುತ್ತಿದೆ.

ಹಿಂದೆ ಯಾವುದೇ ಸರಕಾರ ಈ ರೀತಿಯ ಮಾಧ್ಯಮ ಕಿಟ್ ನೀಡಿರಲಿಲ್ಲ. ಈ ಸಲಕರಣೆಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಕೇಂದ್ರ ಸರಕಾರದ ಮಾಜಿ ಸಚಿವರಾದ ಡಿ.ವಿ.ಸದಾನಂದಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ, ಜಂಟಿ ನಿರ್ದೇಶಕರಾದ ಡಿ..ಪಿ.ಮುರುಳೀಧರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

ಆಯವ್ಯಯದಲ್ಲಿ ಘೋಷಿಸಿದಂತೆ ಹಿಂದುಳಿದ ವರ್ಗಗಳ ‌ಪತ್ರಕರ್ತರಿಗೆ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಮಾಧ್ಯಮ ಕಿಟ್ ವಿತರಿಸಿದರು.
**

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *