Breaking News

ನಾಳೆ ಹುಟ್ಟು ಹಬ್ಬ ಇಲ್ಲ, ಮತದಾನದ ದಿನವೇ ಲಕ್ಷ್ಮೀ ಹೆಬ್ಬಾಳಕರ ಜನ್ಮ ದಿನ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜನ್ಮ ದಿನ ನಾಳೆ ಫೆಬ್ರುವರಿ 14 ಆದರೆ ಲಕ್ಷ್ಮೀ ಹೆಬ್ನಾಳಕರ ನಾಳೆ ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ ವಿಧಾಸಭೆ ಚುನಾವಣೆಯ ಮತದಾನದ ದಿನ ಮೇ 12 ರಂದು ಜನ್ಮ ದಿನ ಆಚರಿಸುವಂತೆ ಅಭಿಮಾನಿಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿಕೊಂಡಿದ್ದಾರೆ

ಲಕ್ಷ್ಮೀ ಹೆಬ್ಬಾಳಕರ ವಿಧಾಸಭೆ ಚುನಾವಣೆಯಲ್ಲಿ ಗೆದ್ದು ಶಾಸಕಿಯಾದ ತಕ್ಷಣ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಇಂದು ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದಾರೆ ಮೇ 12 ನನ್ನ ಜನ್ಮ ದಿನ ಎಂದು ಘೋಷಣೆ ಮಾಡಿದ್ದರು ಈಗ ನಾಳೆ ಫೆಬ್ರವರಿ 14 ಅವರ ಜನ್ಮ ದಿನವಾದರೂ ಅವರು ಜನ್ಮ ದಿನ ಆಚರಿಸಿಕೊಳ್ಳದೇ ಮೇ 12 ರಂದು ಜನ್ಮ ದಿನ ಆಚರಿಸಲು ನಿರ್ಧರಿಸಿದ್ದಾರೆ

ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ಯುವರಾಜ ಕದಂ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಮತದಾರರ ಮೇಲೆ ಅತೀವ ವಿಶ್ವಾಸ ಮತ್ತು ಪ್ರೇಮ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಶ್ವಾಸದ ದ್ಯೋತಕವಾಗಿ ಜನ್ಮ ದಿನ ಆಚರಿಸುತ್ತಿರುವದು ಸಂತಸದ ಸಂಗತಿ ನಾಳೆ ಲಕ್ಷ್ಮೀ ಹೆಬ್ಬಾಳಕರ ಅವರ ಹುಟ್ಡು ಹಬ್ಬ ಇಲ್ಲ ಮೇ ,12 ರಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರು ಸೇರಿ ಜನ್ಮ ದಿನ ಆಚರಿಸೋಣ ಎಂದು ಯುವರಾಜ ಕದಂ ಮನವಿ ಮಾಡಿಕೊಂಡಿದ್ದಾರೆ

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *