Breaking News

ಬೆಳಗಾವಿಗೆ ಐಐಐಟಿ ಬರುವದನ್ನು ತಪ್ಪಸಿದವರೇ ಸುರೇಶ್ ಅಂಗಡಿ- ಲಕ್ಷ್ಮೀ ಹೆಬ್ಬಾಳಕರ ಆರೋಪ

ಬೆಳಗಾವಿ-ನುಡಿದಂತೆ ನಡೆದಿದ್ದೇನೆ.ಅಲ್ಪಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ,ಲೋಕಸಭಾ ಚುನಾವಣೆ ನನ್ನ ಗೌರವದ ಪ್ರಶ್ನೆಯಾಗಿದೆ ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಅವರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಲು ಶಕ್ತಿ ಕೊಡಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತದಾರರಲ್ಲಿ ಮನವಿ ಮಾಡಿಕೊಂಡರು

ಬೆಳಗಾವಿ ಗ್ರಾಮೀಣ ಕ್ಷೇತ್ರದ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಸಂಸದ ಸುರೇಶ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡಲಿಲ್ಲ ಬೆಳಗಾವಿಗೆ ಬರಬೇಕಾಗಿದ್ದ ಐಐಐಟಿ ಮತ್ತು ಉಢಾನ್ ಯೋಜನೆಯನ್ನು ಹುಬ್ಬಳ್ಳಿಗೆ ಮಂಜೂರು ಮಾಡಿಸಿ ಎಂದು ಧಾರವಾಡ ಶಾಸಕ ಪ್ರಲ್ಹಾಧ ಜೋಶಿ ಅವರೊಂದಿಗೆ ಕೇಂದ್ರದ ಮಂತ್ರಿಗಳನ್ನು ಭೇಟಿಯಾಗಿ ಮನವಿ ಅರ್ಪಿಸಿರುವ ಸಂಸದ ಸುರೇಶ ಅಂಗಡಿ ಬೆಳಗಾವಿ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಬೆಳಗಾವಿಗೆ ಐಐಐಟಿ ಮತ್ತು ಉಢಾನ್ ತಪ್ಪಿದ್ದು ಸುರೇಶ ಅಂಗಡಿ ಅವರ ಮೋಸದಿಂದ ಎಂದು ಹೆಬ್ಬಾಳಕರ ಆರೋಪಿಸಿದರು

ಹದಿನೈದು ವರ್ಷ ಕ್ಷೇತ್ರದ ಜನ ಸುರೇಶ ಅಂಗಡಿ ಅವರಿಗೆ ಅಧಿಕಾರ ನೀಡಿದ್ದರು ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಒಬ್ಬ ಯುವಕನಿಗೂ ಉದ್ಯೋಗ ಕೊಡಿಸಲಿಲ್ಲ ರೈತರ ಸಾಲ ಮನ್ನಾ ಮಾಡಿ,ಕಳಸಾ ಬಂಡೂರಿ ನಾಲಾ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆಗಳನ್ನು ಬಗೆ ಹರಿಸಿ ಎಂದು ಸುರೇಶ ಅಂಗಡಿ ಒಂದು ಬಾರಿಯೂ ಧ್ವನಿ ಎತ್ತಲಿಲ್ಲ ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡದ ಸುರೇಶ ಅಂಗಡಿ ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು

ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಮಾತನಾಡಿ ಕ್ಷೇತ್ರದ ಜನ ಒಂದು ಬಾರಿ ಸೇವೆ ಮಾಡುವ ಅವಕಾಶ ನೀಡಿದರೆ ಕ್ಷೇತ್ರದ ಸಮÀಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ರೈಲು ಸಂಪರ್ಕ,ಪಂಡರಪೂರ ಮಾದಿಯಲ್ಲಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ, ಕ್ಷೇತ್ರದಲ್ಲಿ ಕೈಗಾರಿಕಳ ಸ್ಥಾಪನೆ,ಸೇರಿದಂತೆ ಜನಪರ ಕಾರ್ಯಗಳನ್ನು ಮಾಡುವದರ ಜೊತೆಗೆ ಕಳಸಾ ಬಂಡೂರಿಗಾಗಿ ಸಂಸತ್ತಿನಲ್ಲಿ ರೈತರ ಧ್ವನಿಯಾಗಿ ಜೆಲಸ ಮಾಡುತ್ತೇನೆ ಎಂದು ಸಾಧುನವರ ಮತದಾರರಿಗೆ ಭರವಸೆ ನೀಡಿದರು
ಕಾಂಗ್ರೆಸ್ ಮುಖಂಡ ಯುವರಾಜ ಕದಂ ಮಾತನಾಡಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕೇವಲ ಒಂದು ವರ್ಷದಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ಕ್ಷೇತ್ರದ ಅಭಿವೃದ್ಧಿಗೆ ತಂದಿದ್ದಾರೆ.ಸಾಧುನವರ ಅವರಿಗೆ ಬೆಂಬಲಿಸುವ ಮೂಲಕ ಲಕ್ಷ್ಮೀ ಹೆಬ್ಬಾಳಕರ ಅವರ ಕೈ ಬಲಪಡಿಸಬೇಕು ಎಂದು ಮತದಾರರರಲ್ಲಿ ಮನವಿ ಮಾಡಿಕೊಂಡರು

Check Also

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.