Breaking News

ಸೈನಿಕರ ದೇಶ ಸೇವೆಗೆ ಲಕ್ಷ್ಮೀ ಹೆಬ್ಬಾಳಕರ ಸಲಾಂ..

ಬೆಳಗಾವಿ- ಅನೇಕ ಜನ ನಾಯಕರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಳ್ಳುತ್ತಾರೆ ಆದರೆ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಿರಾರು ಜನ ಸೈನಿಕರನ್ನು ಸನ್ಮಾನಿಸಿ ಅವರ ದೇಶ ಸೇವೆಗೆ ಸೇವಾ ಪುರಸ್ಕಾರ ನೀಡಿ ಗೌರವಿಸುವದರ ಮೂಲಕ ಜವಾನರಿಗೆ ಗೌರವ ಸಮರ್ಪಿಸುವ ಮೂಲಕ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಸಾವಿರಾರು ಜನ ಸೈನಿಕರು ಹಾಗು ಅಭಿಮಾನಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ ಕೇಕ್ ಕತ್ತರಿಸಿ ಜನ್ಮ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಸಾವಿರಾರು ಜನ ಅಭಿಮಾನಿಗಳು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಹೂಗುಚ್ಛ ನೀಡಿ ಶುಭಕೋರಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಫಿರೋಜ್ ಸೇಠ ಇವತ್ತು ನಮ್ಮ ನಮ್ಮ ಮಗಳ ಜನ್ಮದಿನ ಎಲ್ಲರ ರಕ್ಷಣೆ ಮಾಡುವ ಸೈನಿಕರು ಹಾಗು ಎಲ್ಲರ ಹೊಟ್ಟೆ ತುಂಬಿಸುವ ರೈತರ ಸಮ್ಮುಖದಲ್ಲಿ ಅವರನ್ನು ಗೌರವಿಸುವ ಮೂಲಕ ಜನ್ಮ ದಿನ ಆಚರಿಸಿದ್ದು ಹೆಮ್ಮೆಯ ಸಂಗತಿ ಎಂದರು

ಮುಂಬರುವ ಹತ್ತು ದಿನಗಳಲ್ಲಿ ಬೆಳಗಾವಿ ನೆಲದಲ್ಲಿ ದೇಶದ ಅತೀ ಎತ್ತರದ ರಾಷ್ಟ್ರ ಧ್ವಜ ಹಾರಾಡಲಿದೆ ಈ ನೆಲದ ಹೆಮ್ಮೆಯ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸೈನಿಕರಿಗೆ ಆಮಂತ್ರಿಸುತ್ತೇನೆ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ರಾಮಯ್ಯ ಬರಲಿದ್ದಾರೆ ಎಂದು ಶಾಸಕ ಸೇಠ ಹೇಳಿದರು

ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಲಕ್ಷ್ಮೀ ಹೆಬ್ಬಾಳಕರ ನನ್ನ ಮಗಳ ಸಮಾನ ನಿಮ್ಮ ಮಗಳು ಮತ್ತು ಸಹೋದರಿ ಯಾಗಿರುವ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಶಾಸಕ ಸೇಠ ಮನವಿ ಮಾಡಿಕೊಂಡರು

ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಅವರು ಮಾತನಾಡಿ, ಇಂದು ಲಕ್ಷ್ಮೀ ತಾಯಿಯವರೆಗೆ ಖಡ್ಗವನ್ನು ನೀಡಿ ಹುಟ್ಟು ಹಬ್ಬದಂದು ಶುಭ ಕೋರಲಾಗಿದೆ. ಕಾರಣ ಕ್ಷೇತ್ರದಲ್ಲಿರುವ ದುಷ್ಟ ಶಕ್ತಿಗಳನ್ನು ಸದೆ ಬಡೆಯಲು ಹೋರಾಟ ಮಾಡಬೇಕು.
ಇಂದು ಗ್ರಾಮೀಣ ಕ್ಷೇತ್ರದಲ್ಲಿ ತಾಂಡವಾಡುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ, ಕ್ಣೇತ್ರದ ಸಮಗ್ರ ಅಭಿವೃದ್ದಿಗೆ ಲಕ್ಷ್ಮೀ ಹೆಬ್ಬಾಳಕರ್ ಗೆಲವು ಅಗತ್ಯ ಎಂದು ಹೇಳಿದರು.

೪ ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹಾಗೂ ಗ್ರಾಮೀಣ ಕ್ಷೇತ್ರದ ಅನ್ನದಾತರನ್ನು ಸನ್ಮಾನಿಸುವ ಮೂಲಕ ಜೈ ಜವಾನ ಜೈ ಕಿಸಾನ ಎಂಬ ಜೈ ಘೋಷಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಅವರು, ಈ ರೀತಿ ಆಚರಣೆ ಚುನಾವಣೆ ಮುನ್ನ ಆಚರಿಸುವುದರಿಂದ ಇದನ್ನು ರಾಜಕೀಯವಾಗಿ ತೆಗೆದುಕೊಳ್ಳುತ್ತಾರೆ ಬೇಡ ಎಂದು ಅಭಿಮಾನಿಗಳಿಗೆ ಹೇಳಿದ್ದೆ, ಆದರೆ ಇವತ್ತು ಸೈನಿಕರನ್ನು ಸನ್ಮಾನಿಸುತ್ತಿರುವುದು ನನ್ನ ಪುಣ್ಯ.

ದೇಶ ಸೈನಿಕರ ತ್ಯಾಗ ಬಲಿದಾನದಿಂದ ನಾವೇಲ್ಲರು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಸೈನಿಕರ ಆ ತ್ಯಾಗ ಬಲಿದಾನದ ಹಿಂದೆ ಒಂದು ದುಃಖವಿದೆ. ಆ ದುಃಖಕ್ಕೆ ನನ್ನದೊಂದು ಸಲಾಂ ಎಂದು ಹೆಬ್ಬಾಳಕರ ಸೈನಿಕರ ಸೇವೆಗೆ ಗೌರವ ಸಮರ್ಪಿಸಿದರು.

ರಾಜಕಿಯವಾಗಿ ನನ್ನ ಕೈಯಲ್ಲಿ ಅಧಿಕಾರವಿಲ್ಲ. ಅಧಿಕಾರವಿದ್ದರೆ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಬಹುದು. ದೇಶ ಸೇವೆ ಮಾಡುತ್ತಿದ್ದ ಸೈನಿಕರ ಸುಃಖ ದುಃಖಗಳಲ್ಲಿ ನಾನೆಂದಿಗೂ ಅವರ ಜೊತೆಯಾಗಿರುತ್ತನೆ.

ನಾನು ರೈತನ ಮಗಳು ರೈತ ದೇಶದ ಬೆನ್ನೆಲುಬು ಅನ್ನದಾತನ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಇಂದು ಜನ್ಮದಿನದ ನಿಮಿತ್ಯ ಸಾಕಷ್ಟು ಅಭಿಮಾನಿಗಳು ರಕ್ತದಾನ ಮಾಡಿದ್ದಾರೆ. ನಿಮ್ಮೆಲ್ಲರ ಅಭಿಮಾನಕ್ಕೆ ಗೌರವ ತರುತ್ತೇನೆ. ಎಂದು ಹೆಬ್ಬಾಳಕರ ಹೇಳಿದರು

Check Also

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.