Breaking News

ಕ್ಷೇತ್ರದ ಭರವಸೆಗಳನ್ನು ಈಡೇರಿಸುವವರೆಗೆ ಒಂದು ಕ್ಷಣವೂ ಸುಮ್ಮನಿರಲಾರೆ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು ದೇಸೂರ ಹಾಗು ನಂದಿಹಳ್ಳಿ ಗ್ರಾಮವನ್ನು ಸಂಪರ್ಕಿಸುವ ಮುಖ್ಯ ಸೇತುವೆ ಕಾಮಗಾರಿಗೆ 40 ಲಕ್ಷ ರೂ ಅನುದಾನವನ್ನು ಮಂಜೂರು ಮಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಭಾನುವಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು

ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಅಭಿವೃದ್ಧಿ ಯ ಸಂಕಲ್ಪ ಮಾಡಿರುವ ಲಕ್ಷ್ಮೀ ಹೆಬ್ಬಾಳಕರ ಲೋಕೋಪಯೋಗಿ ಇಲಾಖೆಯಿಂದ 40 ಲಕ್ಷ ರೂ ಅನುದಾನ ಮಂಜೂರು ಮಾಡಿಸಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿರುವ ಅವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿದ್ದಾರೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ನಂದಿಹಳ್ಳಿ ಗ್ರಾಮದಲ್ಲಿ
ಸೇತುವೆ ಕಾಮಗಾರಿಗೆ ಪೂಜೆ ನೇರವೇರಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಗ್ರಾಮೀಣ ಕ್ಷೇತ್ರ ತೀರಾ ಹಿಂದುಳಿದ ಕ್ಷೇತ್ರವಾಗಿದೆ ಕ್ಷೇತ್ರದಲ್ಲಿ ಹತ್ತು ಹಲವಾರು ಸಮಸ್ಯೆಗಳಿವೆ ಚುನಾವಣೆಯ ಸಂಧರ್ಭದಲ್ಲಿ ಕ್ಷೇತ್ರದ ಜನರಿಗೆ ಹಲವಾರು ಭರವಸೆಗಳನ್ನು ನೀಡಿದ್ದೇನೆ ಎಲ್ಲ ಭರವಸೆಗಳನ್ನು ಈಡೇರಿಸುವ ಸಂಕಲ್ಪದೊಂದಿಗೆ ಶ್ರಮಿಸುತ್ತಿದ್ದೇನೆ ಹಲವಾರು ಕಾಮಗಾರಿಗಳ ಮಂಜೂರಾತಿಗಾಗಿ ಸಮಂಧಿಸಿದ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು

ಚುನಾವಣೆಯ ಸಂಧರ್ಭದಲ್ಲಿ ಮನೆಮನೆಗೆ ನೀರು ಹಳ್ಳಿ ಹಳ್ಳಿಗೆ ಉತ್ತಮ ರಸ್ತೆ ಎನ್ನುವ ಘೋಷವಾಕ್ಯದೊಂದಿಗೆ ಕ್ಷೇತ್ರದ ಜನರಿಗೆ ವಾಗ್ದಾನ ಮಾಡಿದ್ದೆ ಕ್ಷೇತ್ರದ 80 ಕೆರೆಗಳನ್ನು ವಿವಿಧ ಜಲದ ಮೂಲಗಳಿಂದ ತುಂಬಿಸುವ ಯೋಜನೆ ರೂಪಿಸಲಾಗಿದೆ ನೀರಾವರಿ ಇಲಾಖೆಯ ಅಧಿಕಾರಿಗಳ ಕ್ಷೇತ್ರದಲ್ಲಿ ಯೋಜನೆಯ ಸರ್ವೆ ಕಾರ್ಯವನ್ನು ಆರಂಭಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು

ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳ ಸಮೀಕ್ಷೆ ಮಾಡಿ ಪ್ರಸ್ತಾವನೆಗಳನ್ನು ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಿದ ನಂತರ ಲೋಕೋಪಯೋಗಿ ಇಲಾಖೆಯ ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನ ತಂದು ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವವರೆಗೂ ಒಂದು ಕ್ಷಣವೂ ಸುಮ್ಮನೇ ಕೂರುವದಿಲ್ಲ ಎಂದು ಲಕ್ಷ್ಮೀ ಹೆಬ್ವಾಳಕರ ಕ್ಷೇತ್ರದ ಜನರಿಗೆ ವಾಗ್ದಾನ ಮಾಡಿದರು
ಕ್ಷೇತ್ರದ ಶಾಲೆಗಳ ದುರಸ್ಥಿಗೆ ಶಿಕ್ಷಣ ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ ಚುನಾವಣೆಯ ಸಂಧರ್ಭದಲ್ಲಿ ಕ್ಷೇತ್ರದ ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು

ಸಿಸಿ ಪಾಟೀಲ ಯುವರಾಜ ಕದಂ ಸೇರಿದಂತೆ ನಂದಿಹಳ್ಳಿ ದೇಸೂರ ಗ್ರಾಮದ ಹಿರಿಯರು ಉಪಸ್ಥಿತರಿದ್ದರು

Check Also

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.