ಕೊಟ್ಟ ಕುದುರೆಯನ್ನು ಏರದವ ವೀರ ನೂ ಅಲ್ಲ ಶೂರ ನೂ ಅಲ್ಲ ಡ್ಯಾಶ್..ಡ್ಯಾಶ್ ವೂ ಅಲ್ಲ – ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ-
ಅಥಣಿ ಕ್ಷೇತ್ರದಲ್ಲಿ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅನರ್ಹ ಶಾಸಕರ ವಿರುದ್ಧ ಗುಡುಗು ಸಿಡಿಲು ಮಿಂಚಿನ ವಾಗ್ದಾಳಿ ನಡೆಸಿದ್ದಾರೆ
ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟ್ಟಳ್ಳಿ ಮತ್ತು ಅನರ್ಹ ಶಾಸಕರ ವಿರುದ್ಧ ಗುಡುಗಿದ್ದಾರೆ
ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುತ್ತೇನೆಂಬ ಹೇಳಿದ್ದಾರೆ
ಐವರನ್ನಲ್ಲ ೧೮ ಜನರನ್ನ ಬೇಕಾದ್ರೆ ಮಂತ್ರಿ ಮಾಡಿ ಆದ್ರೆ ಕುಮಟ್ಟಳ್ಳಿಗೆ ಮಾತ್ರ ಪಾಠ ಕಲಿಸಿ ಎಂದು ಹೆಬ್ಬಾಳಕರ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಕುಮಟ್ಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳನಂತಿದ್ದಾರೆ.
2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ.
ಒಳ್ಳೇಯವರು, ಸುಸಂಸ್ಕೃತರು ಇದ್ದಾರೆ ಅಂದಕೊಂಡಿದ್ವಿ ಆದ್ರೆ ಅವರು ದ್ರೋಹ ಮಾಡಿದ್ದಾರೆ.
ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ.
ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನೂ ವಿಷ ಕುಡಿದವರು ಇವರು ಬದುಕುತ್ತಾರಾ?
ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ
ಅಂತಹ ಪಕ್ಷಕ್ಕೆ ಕುಮಟಳ್ಳಿ ದ್ರೋಹ ಮಾಡಿ ಹೋಗಿದ್ದಾರೆ ಎಂದು ಹೆಬ್ಬಾಳಕರ ಆಕ್ರೋಶ ವ್ಯೆಕ್ತಪಡಿಸಿದರು
ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ
ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾ ಹೇಳಿದ್ದಾರೆ.
ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಎಂದು ಪ್ರಶ್ನೆ ಮಾಡಿರುವ ಹೆಬ್ಬಾಳಕರ
ಮಂತ್ರಿಗಳ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು.
*ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ*
ಡ್ಯಾಷ್ ಡ್ಯಾಷ್… ಕೂಡ ಅಲ್ಲ ಎಂದು ಅನರ್ಹರ ವಿರುದ್ಧ ಲೇವಡಿ ಮಾಡಿದ ಹೆಬ್ಬಾಳ್ಕರ್.
ನಾನು ಅನುದಾನ ತಂದಿದ್ದೇನೆ ಅಂತಾ ನಿಮಗ್ಯಾಕೆ ಹೊಟ್ಟೆ ಉರಿ.
ಹೆಣ್ಣು ಮಗಳಾಗಿ 12ನೂರು ಕೋಟಿ ಅನುದಾನ ತಂದಿದ್ದೇನೆ. ನೀವು ಗಂಡಸರಾಗಿ ನಿಮಗೆ ಅನುದಾನ ತರೋಕೆ ಆಗಲಿಲ್ವ.
ಇನ್ನೊಬ್ಬರು ಊಟ ಮಾಡಿದ್ದಾರೆ ಅಂತಾ ನಾವು ಉಪವಾಸ ಇರೋದು ತಪ್ಪು.
*ಇನ್ನೊಬ್ಬರ ದುಡಿದು ಊಟ ಮಾಡಿದಾರೆ ಅಂದ್ರೆ ನಾವು ದುಡಿದು ಊಟ ಮಾಡಬೇಕೆನ್ನುವುದು ಗಂಡಸ್ಥನ*.
ಅದನ್ನು ಬಿಟ್ಟು ಮಳ್ಳನಂಗೆ ಸೋಗು ಹಾಕುವುದು ಕೈ ಮುಗಿಯೋದು ಮಾಡತಾರೆ
ಆದ್ರೆ ಇವರದು ಅತೀ ವಿನಯಂ ಚೋರ್ ಲಕ್ಷಣಂ.
ನನ್ನ ಮಾತು ಬಿರುಸು ಇರಬಹುದು ನಾವು ಕಿತ್ತೂರು ಸಂಗೊಳ್ಳಿ ರಾಯಣ್ಣನ ನಾಡಿನವರು.
ನನ್ನ ಮಾತು ಗುಂಡು ಹೊಡೆದಂಗೆ ಇರಬಹುದು ಆದ್ರೆ ಯಾವತ್ತಿಗೂ ಸತ್ಯ.
ಜಮಖಂಡಿಯಲ್ಲಿ ಆನಂದ ನ್ಯಾಮಗೌಡರ, ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ, ಗುಂಡುಪ್ಲೇಟ್‌ದಲ್ಲಿ ಗೀತಾ ಮಹಾದೇವಪ್ರಸಾದರನ್ನು ಗೆಲ್ಲಿಸಲು ಸಹಾಯ ಮಾಡಿದೆ.
ಈಗ ನಾಲ್ಕನೇಯ ಉಪಚುನಾವಣೆಗೆ ಗಜಾನನ ಮಂಗಸೂಳಿಯವರನ್ನು ಗೆಲ್ಲಿಸಬೇಕಿದೆ.
*ನಾನು ಅಥಣಿ ಜನರಿಗೆ ಏನೂ ಮಾಡಲು ಆಗದಿದ್ರು ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸ್ತೇನಿ*
ನಾನು ಯಾವಾಗಾದ್ರೂ ಏನೇ ಭಾಷೆ ಕೊಟ್ರು ಉಳಿಸಿಕೊಳ್ಳತೇನೆ.
ಬೆಳಗಾವಿ ಜಿಲ್ಲಾ ರಾಜಕಾರಣ ಬದಲಾಗಬೇಕಿದೆ. ಎಂದರು
ಅಥಣಿ ತಾಲೂಕಿನ ಕಕಮರಿ ಗ್ರಾಮದ ಪ್ರಚಾರ ಸಭೆಯಲ್ಲಿ ಹೆಬ್ಬಾಳ್ಕರ್ ಗುಡುಗು ಮಿಂಚಿನ ಭಾಷಣ ಮಾಡಿದ್ದಾರೆ