ಬೆಳಗಾವಿ-ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ನಿವಾಸದಲ್ಲಿ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಿದ್ದರು ನೂರಾರು ಜನ ಸಹೋದರರಿಗೆ ರಾಖಿ ಕಟ್ಟುವದರ ಮೂಲಕ ಹೊಸ ಸಂಪ್ರದಾಯಕ್ಕೆ ಸಾಕ್ಷಿಯಾದರು
ಬೆಳಗಾವಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಜನ ಸಹೋದರರು ಲಕ್ಷ್ಮೀ ಹೆಬ್ಬಾಳಕರ ಅವರಿಂದ ರಾಖಿ ಕಟ್ಟಿಸಿಕೊಳ್ಳುವದರ ಮೂಲಕ ಸಹೋದರ ಸಹೋದರಿಯರ ನಡುವಿನ ಸಂಬಧವನ್ನ ಗಟ್ಟಿಗೊಳಿಸಿದರು
ಸಹೋದರಿ ಲಕ್ಷ್ಮೀ ಹೆಬ್ಬಾಳಕರ ಅವರಿಂದ ರಾಖಿ ಕಟ್ಟಿಸಿಕೊಂಡ ಸಹೋದರರು ಸಹೋದರಿ ಹೆಬ್ಬಾಳಕರ ಅವರಿಗೆ ಪುಸತಕ ಸೇರಿದಂತೆ ಅನೇಕ ದೇವತೆಗಳ ಭಾವಚಿತ್ರಗಳನ್ನು ಉಡುಗರೆಯಾಗಿ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಭಾರತೀಯ ಸಂಸ್ಕøತಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂಸ್ಕøತಿಯಾಗಿದೆ ರಾಖಿ ಕಟ್ಟುವ ಬಾರತೀಯ ಸಂಪ್ರದಾಯ ಸಹೋದರ ಸಹೋದರಿಯರ ನಡುವಿನ ಸಂಬಧವನ್ನು ಗಟ್ಟಿಗೊಳಿಸುವ ವೈಶಿಷ್ಟಪೂರ್ಣ ಸಂಪ್ರದಾಯವಾಗಿದೆ ಈ ಸಂಪ್ರದಾಯದ ಆಚರಣೆಯಲ್ಲಿ ಸಿಗುವ ತೃಪಿ ಯಾವ ಆಚರಣೆಯಲ್ಲಿ ಸಿಗಲಾರದು ಇಂತಹ ಆಚರಣೆಗಳು ಭಾರತದಲ್ಲಿ ಸಹೋದರತ್ವ ಭಾವನೆ ಬೆಳೆಸುವದರ ಜೊತೆಗೆ ಪ್ರಜಾಪ್ರಭುತ್ವ ವ್ಯೆವಸ್ಥೆ ಇನ್ನಷ್ಟು ಬಲಾಡ್ಯವಾಗುದರ ಜೊತೆಗೆ ಎಲ್ಲರಲ್ಲಿ ಭಾಂದವ್ಯ ಬೆಳೆಸುತ್ತದೆ ಎಂದರು
ಸಹೋದರ ಚನ್ನರಾಜ ಹಟ್ಟಹೊಳಿ ಮಾತನಾಡಿ ಇಂತಹ ಸಾಮೂಹಿಕ ಆಚರಣೆ ಖುಷಿ ನೀಡಿದೆ ಈ ರೀತಿಯ ಕಾರ್ಯಕ್ರಮವನ್ನು ಪ್ರತಿ ವರ್ಷ ಆಚರಣೆ ಮಾಡಲಾಗುವದು ಅಣ್ಣ-ತಂಗಿಯ ಸಂಭಂಧವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ಪ್ರೇರಣಾದಾಯಕವಾಗಿದೆ ಎಂದರು
ವಿನಯ ನಾವಲಗಟ್ಟಿ,ರಪೀಕ ಖಾನಾಪುರಿ ರಾಜಾ ಸಲೀಂ ಖಾಶಿಂನವರ ಬಸವರಾಜ ಶೇಗಾವಿ ಸದ್ದಾಮ ಮುಲ್ಲಾ ಮಲ್ಲೇಶ ರಾಮಚನ್ನವರ ಹಾಗು ನಗರದ ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …