ಬೆಳಗಾವಿ- ಬೆಳಗಾವಿಯ ಹನುಮಾನ ನಗರದಲ್ಲಿರು ಸರ್ಕಾರಿ ನಾಲೆಯ ಒತ್ತುವರಿ ಕುರಿತು ಕೂಡಲೇ ದಾಖಲೆಗಳನ್ನು ಒದಗಿಸುವಂತೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಪಾಲಿಕೆ ಹಾಗು ಬುಡಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ನಗರದ ಪ್ರವಾಸಿ ಮಂದಿರದಲ್ಲಿ ಪಾಲಿಕೆ ಬುಡಾ.ಹಾಗು ಒಳಚರಂಡಿ ಇಲಾಖೆಗಳ ಪ್ರಗತಿ ಪರಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು
ಮುಖ್ಯಮಂತ್ರಿಯ ಸ್ಪಷ್ಠ ನಿರ್ಧೇಶನವಿದ್ದು ಯಾವದೇ ರೀತಿಯ ಪ್ರಭಾವ ಇದ್ದರೂ ಎಲ್ಲ ಬಗೆಯ ಅಕ್ರಮ ಅತಿಕ್ರಮಣಗಳನ್ನು ಮುಲಾಜಿಲ್ಲದೇ ತೆರವುಗೊಳಿಸುವುದಾಗಿ ಸಚಿವ ರೋಷನ್ ಬೇಗ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಕಾಲುವೆ, ನಾಲಾಗಳನ್ನು ಅತಿಕ್ರಮಿಸಿ ಕಟ್ಟಡ ಕಟ್ಟಿರುವ, ಪುಟ್ಪಾತ್ ಅತಿಕ್ರಮಣ ಎಲ್ಲವನ್ನೂ ತೆರವುಗೊಳಿಸಲಾಗುವುದು ಎಂದು ಸಚಿವ ಸ್ಪಷ್ಟನೆ.ನೀಡಿದ್ದಾರೆ
ಕೆಯುಐಡಿಎಪ್ ಸಿ, ಬುಡಾ, ಪಾಲಿಕೆ, ನೀರು ಪೂರೈಕೆ ಮಂಡಲಿಯೊಂದಿಗೆ ಸಭೆ.
ರಾಜ್ಯದ ೫೦೦, ಹಾಗೂ ಕೇಂದ್ರದ ೫೦೦ ಕೋಟಿ ಸಹಭಾಗಿತ್ವದಡಿ ಸ್ಮಾರ್ಟ್ ಯೋಜನೆ ಜಾರಿಗೆ. ಅಮೃತ ಸೋಡಿಗೆ ಬೆಳಗಾವಿ ಭಾಜನವಾಗಿದೆ. ಸಿವೇಜ್ ಟ್ರೀಟ್ಮೆಂಟ್ ಮೆಂಟ್ ಪ್ಲಾಂಟ್ ಯೋಜನೆ ಅಭಿವೃದ್ದಿ ಪಡಿಸಲಾಗುವುದು. ೨೪*೭ ನೀರು ಸರಬರಾಜು ೧೦ ವಾರ್ಡ್ಗೆ ಕೊಡಲಾಗುತ್ತಿದ್ದು. ೨೦೨೬ ವೇಳೆಗೆ ೬೬೩ ಕೋಟಿ ವೆಚ್ಚದಲ್ಲಿ ಎಲ್ಲ ವಾರ್ಡ್ ಗಳಿಗೆ ನಿರಂತರ ನೀರು ಪೂರೈಕೆ. ೩೭೦ ಕೋಟಿ ವೆಚ್ಚದಲ್ಲಿ ಕರೆಂಟ್ ಲೈನಿಂಗ್, ವಾಣಿಜ್ಯ ಸಂಕೀರ್ಣ, ಹಾಕಿ ಸ್ಟೇಡಿಯಂ, ೧೫ ಉದ್ಯಾನವನ, ಒಂದು ಕ್ರಿಕೇಟ್ ಮೈದಾನ, ಆರ್ಟ್ ಗ್ಯಾಲರಿ ಎಲ್ಲವೂ ಬರಲಿದೆ. ಜತೆಗೆ ೧೦೦ ಕೋಟಿ ಹೆಚ್ಚುವರಿ ಸಿಎಂ ಅವರಿಂದ ಅನುದಾನ. ನಗರದಲ್ಲಿ೮೪ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ.
೩೮೬೩ ಕೋಟಿ ಒಟ್ಟು ಸ್ಮಾರ್ಟ್ ಸಿಟಿ ಯೋಜನಾ ವೆಚ್ಚವಾಗಿದೆ. ಬೆಳಗಾವಿ ನಗರಕ್ಕೆ ೨೮.೬೪ ಕೋಟಿ ಬೆಳಗಾವಿಗೆ ಕೊಡಲಾಗುವುದು. ಸಮುದಾಯ ಶೌಚಾಲಯ ನಗರದಲ್ಲಿ ನಾಲ್ವತ್ತು ಕಟ್ಟಿಸಲಾಗುವುದು. ಎಲ್ ಇ ಡಿ ಲೈಟ್ಸ್ ೩೪ ಕೋಟಿ ವೆಚ್ಚದಲ್ಲಿ ಬೀದಿ ದೀಪ ಹಾಕಿಸಿ ಖಾಸಗಿ ಕಂಪನಿ ನಿರ್ವಹಣೆ ಮಾಡುತ್ತಾರೆ.ಎಂದು ತಿಳಿಸಿದ್ದಾರೆ
ಪತ್ರಿಕಾ ಗೋಷ್ಠಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾಧಕಾರಿ ಜೈರಾಮ್ ಪಾಲಿಕೆ ಆಯುಕ್ತ ಜಿ ಪ್ರಭು ಇದ್ದರು
Check Also
ಗುರುವಾರ ಬೆಳಗಾವಿಗೆ ಕೇಂದ್ರ ರೇಲ್ವೆ ಸಚಿವ ಸೋಮಣ್ಣ
ಬೆಳಗಾವಿ -ಗುರುವಾರ ದಿನಾಂಕ 14 ರಂದು ಕೇಂದ್ರದ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ 9 …