ಬೆಳಗಾವಿ- ಬೆಳಗಾವಿ ಮಹಾನಗ,ಮೂಡಲಗಿ ತಾಲ್ಲೂಕು, ಚಿಕ್ಕೋಡಿಯ ಯಡೂರಿನಲ್ಲಿ ಚಿರತೆ ಕಾಣಿಸಿಕೊಂಡಿರುವ ಬೆನ್ನಲ್ಲಿಯೇ ಈಗ ಅಥಣಿ ತಾಲ್ಲೂಕಿನಲ್ಲೂ ಚಿರತೆ ಪ್ರತ್ಯಕ್ಷವಾಗಿದೆ.
ಚಿರತೆಯ ಹೆಜ್ಜೆ ಗುರುತಿನ ಚಿತ್ರ…
ಅಥಣಿ ತಾಲ್ಲೂಕಿನ ಶಿರಗುಪ್ಪಿ ಸಮೀಪದ, ಮೊಳವಾಡ ಗ್ರಾಮದ ಹದ್ದಿಯಲ್ಲಿ,ಪ್ರಶಾಂತ ಪಾಟೀಲ ಎಂಬ ರೈತರಿಗೆ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು,ಇಲ್ಲಿ ಚಿರತೆ ಓಡಾಡಿದ ಬಗ್ಗೆ ಚಿರತೆಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದಲ್ಲಿ ಚಿರತೆ ಕಂಡಿರುವ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಡಂಗುರ ಸಾರಿ ,ಗ್ರಾಮದ ಹದ್ದಿಯಲ್ಲಿ ಚಿರತೆ ಬಂದಿದೆ,ಹೊಲಕ್ಕೆ ಹೋಗುವವರು ಎಚ್ಚರಿಕೆ ವಹಿಸುವಂತೆ ಗ್ರಾಮದಲ್ಲಿ ಜಾಗೃತಿ ವಹಿಸಲಾಗಿದೆ.
ಸರಣಿಯಂತೆ ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ನಾಲ್ಕು ಚಿರತೆಗಳ ಜನತಾ ದರ್ಶನವಾಗಿದೆ,ಆದ್ರೆ ಇನ್ನುವರೆಗೆ ಒಂದು ಚಿರತೆಯೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ