Breaking News
Home / Breaking News / ಸಾವರ್ಕರ್ ಅವರನ್ನು “ವೀರ” ಎಂದು ಕರೆಯುವುದು ಸರಿಯಲ್ಲ-ಆಮ್ ಆದ್ಮಿ ಪಾರ್ಟಿ

ಸಾವರ್ಕರ್ ಅವರನ್ನು “ವೀರ” ಎಂದು ಕರೆಯುವುದು ಸರಿಯಲ್ಲ-ಆಮ್ ಆದ್ಮಿ ಪಾರ್ಟಿ

ಬೆಳಗಾವಿ

ಬ್ರಿಟಿಷ್ ರಿಗೆ ಕ್ಷಮೆ ಕೇಳಿರುವ ಸಾವರ್ಕರ್ ಅವರನ್ನು “ವೀರ” ಎಂದು ಕರೆಯುವುದು ಸರಿಯಲ್ಲ ಎಂದು ಆಮ್ ಆದ್ಮಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಸುಮಾರು ಜನ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಕ್ಷಮೆ ಕೇಳಿದ್ದ ವ್ಯಕ್ತಿ ಸಾವರ್ಕರ್ ಅವರಿಗೆ ವೀರ ಎಂದು ಕರೆಯುವುದು ಸರಿಯಲ್ಲ. ಸಾವರ್ಕರ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ‌. ಆದರೆ ಬ್ರಿಟಿಷ್ ರಿಗೆ ಕ್ಷಮೆ ಕೇಳಿದ ವ್ಯಕ್ತಿಯನ್ನು ಹೇಗೆ ವೀರ ಎನ್ನುಲು ಸಾಧ್ಯ ಎಂದು ಪ್ರಶ್ನಿಸಿದರು.

ದೇಶದ ಮುಂದೆ ಮೂರು ರೀತಿಯ ರಾಜಕೀಯ ನಡೆಯುತ್ತಿದೆ. ಕುಟುಂಬ ಪರ ರಾಜಕೀಯ, ಸ್ನೇಹಿತರ ರಾಜಕೀಯ ಹಾಗೂ ಆಪ್ ನಿಂದ ಜನಪರ ರಾಜಕೀಯ ಇದನ್ನು ಭಾರತ ವಾರ್ ರಾಜಕೀಯ ಮಾಡುತ್ತಿದ್ದೇವೆ ಎಂದರು.
ಆಪ್ ನಿಂದ ಮನೆ ಮನೆಗೆ ಹೋಗಿ ಜನರ ಅಭಿಪ್ರಾಯ ಸಂಗ್ತಹಿಸುತ್ತಿದ್ದೇವೆ. ಹತ್ತು ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ‌. ಆದರೆ ನಮ್ಮ ಜನರಿಗೆ ಲಾಭವಾಗಿದೆಯೇ ಎಂದು ಸರ್ವೆ ನಡೆಸುತ್ತಿದ್ದೇವೆ. ಕೇಂದ್ರ ಸರಕಾರ ಎಷ್ಟು ಜನರಿಗೆ ಹಾಗೂ ಯಾರಿಗೆ ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರಶ್ನಿಸಿದರು.ಗುಜರಾತ್ ನಲ್ಲಿ ಮೂರು ಲಕ್ಷ ಕೋಟಿ ಸಾಲ ಮಾಡಿರುವುದು ಯಾವ ಕಾರಣಕ್ಕೆ ಎಂದ ಅವರು, ರಾಜ್ಯದಲ್ಲಿ 40% ಸರಕಾರ ಇನ್ನೊಂದು ಕಡೆ ದೆಹಲಿಯಲ್ಲಿ 0% ಸರಕಾರದ ಅಭಿವೃದ್ಧಿ ಕಾರ್ಯಗಳು ಇದರಲ್ಲಿ ಯಾವ ಸರಕಾರ ಮಹತ್ವದ್ದು ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ದೆಹಲಿಯಲ್ಲಿ ಕಳೆದ ಏಳು ವರ್ಷದಿಂದ ನಯಾಪೈಸೆ ವಿದ್ಯುತ್ ಬೆಲೆ ಏರಿಕೆ ಮಾಡಿಲ್ಲ. ಎಲ್ಲರಿಗೂ ಉಚಿತ ‌ನೀರು ನೀಡುತ್ತಿದ್ದೇವೆ. ಆದರೆ ಕರ್ನಾಟಕದಲ್ಲಿ ಪ್ರತಿ ‌ವರ್ಷ ವಿದ್ಯುತ್ ದರ ಏರಿಕೆ ಮಾಡುತ್ತಾರೆ.ಬೆಳಗಾವಿ ‌ಜಿಲ್ಲೆಯ ಜಾರಕಿಹೊಳಿ ಕುಟುಂಬ ರಾಜ್ಯ ರಾಜಕಾರಣವನ್ನು‌ ಬದಲಾವಣೆ ಮಾಡುವ ತಾಕತ್ತು ಹೊಂದಿದ್ದಾರೆ‌. ಆದರೆ ಬೆಳಗಾವಿಯಲ್ಲಿನ ಸರಕಾರಿ ಶಾಲೆಯ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನೀಷ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ಪ್ರಕರಣ ಸಿಬಿಐ ತನಿಖೆ ಸ್ವಾಗತಿಸುತ್ತೇನೆ ಎಂದ ಪೃಥ್ವಿ ರೆಡ್ಡಿ, ನ್ಯೂಯಾರ್ಕ್ ಟೈಮ್ಸ್ ನಲ್ಲಿ ದೆಹಲಿ ಶಿಕ್ಷ ಣ ಕ್ರಾಂತಿ ಬಗ್ಗೆ ಫುಲ್ ಪೇಜ್ ಆರ್ಟಿಕಲ್ ಬಂದಿದೆ. ಶಿಕ್ಷಣ ಕ್ರಾಂತಿ ತಂದ ವ್ಯಕ್ತಿ ಮೇಲೆ ಸಿಬಿಐ ರೇಡ್ ಮಾಡಿದ್ದಾರೆ. ಹಾಲಿ, ಮಾಜಿ ಶಾಸಕರು ಆಪ್ ಸಂಪರ್ಕದಲ್ಲಿ ಇದ್ದಾರೆ. ಆದರೆ ಡಿ.ಕೆ.ಶಿವಕುಮಾರ್, ಈಶ್ವರಪ್ಪ ಅಂತವರನ್ನು ಪಕ್ಷಕ್ಕೆ ಸೇರಿಸಲ್ಲ ಎಂದರು.ಯಡಿಯೂರಪ್ಪ ಭ್ರಷ್ಟರು ಎಂದು ಅವರ ಪಕ್ಷದವರೇ ಸಿಎಂ ಸ್ಥಾನದಿಂದ ತಗೆದರು. ಈಗ ವೋಟ್ ಬ್ಯಾಂಕ್‌ಗಾಗಿ ಯಡಿಯೂರಪ್ಪಗೆ ಸ್ಥಾನಮಾನ ನೀಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.

ಆಪ್ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಮಾತನಾಡಿ, ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಅವರು, ಬಿಜೆಪಿಯ ಶಾಸಕರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಲ್ಲದೆ ಬೆಳಗಾವಿಯ ಬಿಜೆಪಿ ಶಾಸಕರೊಬ್ಬರು ಕಳೆದ 9 ವರ್ಷಗಳಿಂದ ಭ್ರಷ್ಟಾಚಾರ ಆರೋಪ ಹೊತ್ತಿದ್ದಾರೆ ಅವರು ಮೇಲೆ ಕ್ರಮ ಇಲ್ಲ ಎಂದು ಪ್ರಶ್ನಿಸಿದರು.

ಶಂಕರ ಹೆಗಡೆ, ಸಂಪತಕುಮಾರ ಶೆಟ್ಟಿ,‌ಕ್ಯಾಪ್ಟನ್ ಗಿರೀಶ್, ಅರವಿಂದ ನಡಮಿಂಚಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *