ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕಣ್ಣಿನ ನಂಜು, ಮದ್ರಾಸ್ ಐಯ್, ಹಳ್ಳಿಯ ಭಾಷೆಯಲ್ಲಿ ಇದಕ್ಕೆ ಕಣ್ಣು ನೋವು ಅಂತಾನೆ ಕರೀತಾರೆ ಈ ಸಾಂಕ್ರಾಮಿಕ ವೈರಸ್ ಈಗ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ವೈರಸ್ ನ ಲಕ್ಷಣಗಳು
ಕಣ್ಣು ಕೆಂಪಾಗುವದು ಕಣ್ಣು ಚುಚ್ಚುವದು.ಕಣ್ಣಿನಿಂದ ನೀರು ಮತ್ತು ಪಿಚ್ಚು ಬರುವದು,ನಂತರ ಜ್ವರ ಬರುವದು ಈ ರೀತಿಯ ಲಕ್ಷಣ ಗಳಿದ್ದು ಮದ್ರಾಸ್ ಐ ವೈರಸ್ ಸಹಜವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಹರಡುತ್ತದೆ.ಇದು ಸಾಂಕ್ರಾಮಿಕವಾಗಿದ್ದು ಸಾರ್ವಜನಿಕರು ಆತಂಕಪಡಬೇಕಾಗಿಲ್ಲ.ಆದ್ರೆ ಮುಂಜಾಗ್ರತೆ ವಹಿಸುವಂತೆ ಆರೋಗ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಮದ್ರಾಸ್ ಐಯ್,ಕಣ್ಣು ನೋವಿನಿಂದ ಬಾಧಿತರಾದವರು ಕೈ ವಸ್ತ್ರ,ಟಾವೆಲ್ ಹಾಗೂ ಹಾಸಿಗೆಯನ್ನು ಪ್ರತ್ಯೇಕವಾಗಿ ಇಡುವದು,ಬಿಸಿ ನೀರಿನಿಂದ ಕೈ ತೊಳೆಯುವುದು,ಕೈ ಹಾಗು ದೈಹಿಕ ಸ್ವಚ್ಛತೆ ಕಾಪಾಡುವದು,ವೈದ್ಯರ ಸಲಹೆಯಂತೆ ಔಷಧೋಪಚಾರ ಮಾಡಿಕೊಳ್ಳಬೇಕು.ವೈದ್ಯರ ಸಲಹೆ ಇಲ್ಲದೇ ಸ್ವಂತ ಬುದ್ಧಿ ಉಪಯೋಗಿಸಿ ಔಷಧೋಪಚಾರ ಮಾಡಿಕೊಳ್ಳಬಾರದು,ಸೊಂಕಿತ ಮಕ್ಕಳಿಗೆ ಶಾಲೆಗೆ ಕಳಿಸಬಾರದು,ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಾ ಆರೋಗ್ಯಾಧಿಕಾರಿಗಳು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮದ್ರಾಸ್ ಐಯ್ ವೈರಸ್ ಕುರಿತು ಶಾಲೆಗಳಲ್ಲಿ ಜಾಗೃತಿ ಮೂಡಿಸುವಂತೆ,ಈ ಕುರಿತು ಮುಂಜಾಗ್ರತೆ ವಹಿಸುವಂತೆ ಪತ್ರ ಬರೆದಿದ್ದಾರೆ.