ಬೆಳಗಾವಿ- ಬೆಳಗಾವಿ ಗಡಿಭಾಗದಲ್ಲಿ ಹಾಗೂ, ರಾಜ್ಯದ ಇತರ ಪ್ರದೇಶಗಳಲ್ಲಿ ಲಕ್ಷಾಂತರ ಮರಾಠಾ ಸಮಾಜದವರು,ಕನ್ನಡ ನೆಲ,ಜಲ,ಭಾಷೆಗೆ ಗೌರವ ಕೊಟ್ಟು,ಬದುಕುತ್ತಿದ್ದಾರೆ,ಎಲ್ಲ ಮರಾಠಾ ಸಮಾಜದ ಬಾಂಧವರು ಕನ್ನಡ ವಿರೋಧಿಗಳು ಅಲ್ಲ,ಹೀಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ವಿರೋಧ ಮಾಡುವದು ಸರಿಯಲ್ಲ.
ಕರ್ನಾಟಕದಲ್ಲಿರುವ ಮರಾಠಾ ಸಮಾಜದವರು,ಜಾತಿಯಿಂದ ಮರಾಠಾ ಆಗಿದ್ದರೂ ಅವರೆಲ್ಲರೂ ಮಾತನಾಡುವದು,ಕನ್ನಡ ,ಬೆಳಗಾವಿಯಲ್ಲಿಎಂ ಈ ಎಸ್,ಮತ್ತು ಶಿವಸೇನೆಯ ನಾಯಕರು ಮತ್ತು ಕಾರ್ಯಕರ್ತರನ್ನು ಹೊರತುಪಡಿಸಿದರೆ,ಉಳಿದವರು,ಕನ್ನಡ ಪ್ರೇಮಿಗಳೇ ಆಗಿದ್ದು ಅವರೆಲ್ಲರೂ ಕನ್ನಡ ನೆಲಕ್ಕೆ ಗೌರವ ಕೊಟ್ಟು,ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.
ಹಲವಾರು ದಶಕಗಳಿಂದ ಕನ್ನಡಿಗರು ಮತ್ತು ಮರಾಠಾ ಸಮಾಜದವರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ,ಆದ್ರೆ ಮಹಾರಾಷ್ಟ್ರ ಏಕೀಕರಣ ಸಮೀತಿ ಮತ್ತು ಶಿವಸೇನೆ ಮಾತ್ರ ನಮ್ಮ ವಿರೋಧಿಗಳು ,ಕನ್ನಡಿಗರಾದ ನಾವು,ಎಂಈಎಸ್ ಮತ್ತು ಶಿವಸೇನೆಯನ್ನು ವಿರೋಧ ಮಾಡುತ್ತಲೇ ಬಂದಿದ್ದೇವೆ ಈಗಲೂ ಅವರನ್ನು ವಿರೋಧ ಮಾಡುತ್ತೇವೆ ಅದರಲ್ಲಿ ಎರಡು ಮಾತಿಲ್ಲ.
ಬೆಳಗಾವಿ ನಗರದಲ್ಲಿ ಅಷ್ಟೇ ಮರಾಠಾ ಸಮಾಜದವರು ಇದ್ದಾರೆ,ಜೊತೆಗೆ ಸವದತ್ತಿ,ರಾಮದುರ್ಗ,ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ಮರಾಠಾ ಸಮಾಜದವರು ನೆಲೆಸಿದ್ದಾರೆ,ಎಂಈ ಎಸ್ ಮತ್ತು ಶಿವಸೇನೆ ಮಾಡಿದ ತಪ್ಪಿಗೆ ನಾವು ಸರ್ವ ಮರಾಠಾ ಸಮಾಜಕ್ಕೆ ಶಿಕ್ಷೆ ನೀಡುವದು ಸರಿಯಲ್ಲ.
ಸಿಎಂ ಯಡಿಯೂರಪ್ಪ ಮತ್ತು ಸಿದ್ರಾಮಯ್ಯ ಮಾಡಿದ ಮಹಾ ತಪ್ಪು…..
ಬೆಳಗಾವಿಯ ಕನ್ನಡಿಗರು ಕಳೆದ ಐದು ವರ್ಷಗಳಿಂದ ಬೆಳಗಾವಿಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಪ್ರತಿ ವರ್ಷ ಒಂದು ಕೋಟಿ ಅನುದಾನ ಕೊಡಿ ಎಂದು ಬೇಡಿಕೆ ಮಂಡಿಸುತ್ತಲೇ ಬಂದಿದ್ದಾರೆ,ಆದ್ರೆ ಹಿಂದಿನ ಮುಖ್ಯಮಂತ್ರಿ ಸಿದ್ರಾಮಯ್ಯ ,ಮತ್ತು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರೂ ಸ್ಪಂದಿಸಲಿಲ್ಲ,ಕನ್ನಡಿಗರ ಬೇಡಿಕೆಗೆ ಸ್ಪಂದಿಸದ ಯಡಿಯೂರಪ್ಪನವರು,ಮರಾಠಾ ಸಮಾಜಕ್ಕೆ 50 ಕೋಟಿ ಕೊಟ್ರಲ್ಲ ,ಅನ್ನೋದೆ ಕನ್ನಡಿಗರ ಆಕ್ರೋಶವಾಗಿದೆ,ಕನ್ನಡದ ಉತ್ಸವ ಆಚರಣೆಗೆ ಬಿಡಿಗಾಸು ಕೊಡದ ಸಿಎಂ,ಮರಾಠಾ ಸಮಾಜಕ್ಕೆ 50 ಕೋಟಿ ಘೋಷಣೆ ಮಾಡಿದ್ದಾರೆ,ಕನ್ನಡಿಗರನ್ನು ಕಡೆಗಣಿಸಿ ,ಉಪ ಚುನಾವಣೆಯಲ್ಲಿ ಮರಾಠಾ ಸಮಾಜದ ಮತಗಳನ್ನು ಗಿಟ್ಟಿಸಲು ಗಿಮೀಕ್ ಮಾಡಿದ್ದಾರೆ ಅನ್ನೋದು ವಿರೋಧ ಪಕ್ಷಗಳ ಆಕ್ರೋಶವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳಗಾವಿ ಗಡಿಭಾಗದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿಶೇಷ ಅನುದಾನ ಕೊಡುವದಾಗಿ ಘೋಷಣೆ ಮಾಡಲಿ,ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಉದ್ಯೋಗದಲ್ಲಿ ಶೇ 16 ರಷ್ಟು ಮೀಸಲಾತಿ ಕೊಟ್ಟಂತೆ ಕರ್ನಾಟಕದಲ್ಲೂ ಕನ್ನಡಿಗರಿಗೆ ಮೀಸಲಾತಿ ಕೊಡಲಿ ಅನ್ನೋದು,ಕನ್ನಡಿಗರ ಒತ್ತಾಯವಾಗಿದೆ .
ಪ್ರಾಧಿಕಾರ, ಎಂಈಎಸ್ ಬಾಯಿ ಬಂದ್ ಮಾಡಲಿದೆ.
ಮಹಾರಾಷ್ಟ್ರ ಏಕೀಕರಣ ಸಮೀತಿ ಕಳೆದ ಆರು ದಶಕಕಗಳಿಂದ ಬೆಳಗಾವಿ ಗಡಿಭಾಗದಲ್ಲಿ,ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಲೇ ಬಂದಿದೆ,ಕರ್ನಾಟಕ ಸರ್ಕಾರ ಮರಾಠಿ ಭಾಷಿಕರಿಗೆ ಯಾವುದೇ ಸವಲತ್ತು ಕೊಡುತ್ತಿಲ್ಲ,ಅನ್ಯಾಯ ಮಾಡುತ್ತಿದೆ ಎಂದು ಬೋಂಬಡಿ ಹೊಡಿಯುತ್ತಲೇ ಬಂದಿದೆ.ಇದೇ ವಿಷಯವಮ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟಿಗೆ ಹೋಗಿದೆ. ಕರ್ನಾಟಕ ಸರ್ಕಾರ ಮರಾಠಿ ಭಾಷಿಕರ ಏಳಿಗೆಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ,ಸಮಾಜದ ಏಳಿಗೆಗೆ ಪ್ರತ್ಯೇಕವಾಗಿ,50 ಕೋಟಿ ಅನುದಾನ ಕೊಟ್ಟಿದೆ ಎಂದು ಸುಪ್ರೀಂ ಕೋರ್ಟಿನಲ್ಲಿ ಪ್ರತಿಪಾದಿಸಲು ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆ ಪ್ರಮುಖ ಅಸ್ತ್ರವಾಗಲಿದೆ.