ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಆಪರೇಷನ್ ಹಸ್ತದ ಬ್ರೇಕ್ ಫಾಸ್ಟ್ ಶುರುವಾಗಿದೆ.ಬೆಳಗಾವಿ ಅಖಾಡಕ್ಕಿಳಿದ ಮಾಜಿ ಸಿಎಂ ಜಗದೀಶ ಶೆಟ್ಟರ್,ಬೆಳಗಾವಿಯ ಅತೃಪ್ತ ಬಿಜೆಪಿ ನಾಯಕರ ಸೆಳೆಯಲು ಶೆಟ್ಟರ್ ಮುಂದಾಗಿದ್ದಾರೆ.
ಲಿಂಗಾಯತ ಹಾಗೂ ಮರಾಠಾ ಸಮುದಾಯದ ನಾಯಕರನ್ನೇ ಕಾಂಗ್ರೆಸ್ ಟಾರ್ಗೆಟ್ ಮಾಡಿದೆ.ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾರವಾಡಗೆ ಕಾಂಗ್ರೆಸ್ ಗಾಳ ಹಾಕಿದೆ.ಯಾದವಾಡರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಪರೇಷನ್ ಹಸ್ತ ಆರಂಭಿಸಿದ್ದಾರೆ.
ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ್ ಸಮ್ಮುಖದಲ್ಲಿ ಯಾದವಾಡ ಅವರುಜಗದೀಶ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದು ಮಹಾದೇವಪ್ಪ ಯಾದವಾಡ ಅವರ ಜೊತೆ ಜಗದೀಶ್ ಶೆಟ್ಟರ್ ಸುದೀರ್ಘ ಚರ್ಚೆ ಮಾಡಿದ್ದಾರೆ.
ಅಶೋಕ ಪಟ್ಟಣ್ ಆಪ್ತ ಸತೀಶ್ ಜಿನಗಾರ ನಿವಾಸದಲ್ಲಿ ನಾಯಕರ ಮಧ್ಯೆ ಮಾತುಕತೆ ನಡೆದಿದೆ.ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಮಹಾದೇವಪ್ಪ ಅವರು ಬಿಜೆಪಿ ಅತೃಪ್ತರಲ್ಲಿ ಗುರುತಿಸಿಕೊಂಡಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿದ್ದಾಗ ಎರಡು ದಶಕಗಳಿಂದ ಅವರ ಆಪ್ತರಾಗಿದ್ದ ಯಾದವಾಡ,ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.