Breaking News

ನನ್ನ ರುಂಡ ಸಹ ಕಾಂಗ್ರೆಸ್ಸಿಗೆ ಹೋಗಲ್ಲ -ರಮೇಶ್ ಜಾರಕಿಹೊಳಿ

ಬೆಳಗಾವಿ-ಮತ್ತೆ ಡಿಸಿಎಂ ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಗೋಕಾಕ್ ಸಾಹುಕಾರ್ ನನ್ನ ರುಂಡ ಸಹ ಅಲ್ಲಿಗೆ ಹೋಗೋಲ್ಲ,ಅದು ಇಲ್ಲೇ,ಬಿಜೆಪಿಯಲ್ಲೇ ಉಳಿಯುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಅಥಣಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಆಪರೇಷನ್ ಹಸ್ತದ ಮೂಲ ಉದ್ದೇಶ ಏಕೆ ಶುರುವಾಯ್ತು ಕೇಳಿ ಎಂದ ರಮೇಶ್ ಜಾರಕಿಹೊಳಿ,ಕಾಂಗ್ರೆಸ್ ಪಕ್ಷದ 25 ರಿಂದ 30 ಹಿರಿಯ ಶಾಸಕರು ಮುಂದಿನ ನಿರ್ಣಯಕ್ಕೆ ಸೇರೋರಿದ್ರು ಕಾಂಗ್ರೆಸ್ ವಿರುದ್ಧ ಬಂಡಾಯ ಸಾರುವ ಹೆದರಿಕೆಯಿಂದ ಕಾಂಗ್ರೆಸ್ ನಾಯಕರು,ಅದನ್ನ ಮರೆಮಾಚಲು ಈಗ ಮಹಾ ನಾಯಕ ಮಾಡಿದ ಕುತಂತ್ರವೇ ಆಪರೇಷನ್ ಹಸ್ತ ಆಗಿದೆ.ಇದು ಆಪರೇಷನ್ ಹಸ್ತ ಅಲ್ಲ, ನನಗೆ ಎಲ್ಲ ಗೊತ್ತಿದೆ ಅಂದ್ರು ರಮೇಶ್ ಜಾರಕಿಹೊಳಿ.

*ಅವರ ಪಕ್ಷದಲ್ಲಿ 25 ರಿಂದ 30 ಶಾಸಕರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಸೇರೋರಿದ್ರು,ಆಪರೇಷನ್ ಹಸ್ತ ಅಂತಾ ಪೋಸ್ ಕೊಡುವ ನಾಯಕ ತನ್ನ ಪಕ್ಷಕ್ಕೆ ಅವಮಾನ ಆಗುತ್ತೆ ಅಂತಾ ಮಾಡಿದ ನಾಟಕವೇ ಆಪರೇಷನ್ ಹಸ್ತವಾಗಿದೆ.ಸಿಎಂಗೆ ಪತ್ರ ಬರೆದು ಬಳಿಕ ಎಲ್ಲರೂ ಸೇರೋರಿದ್ದರು,ಅವರು ಹೆದರಲಿ, ಅಂತಾ ಬಿಜೆಪಿಯಿಂದ ಅವರು ಬರ್ತಿದ್ದಾರೆ,ಇವರು ಬರ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ನಾಟಕ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.

ಕಾಂಗ್ರೆಸ್ ನಾಯಕರು,
ದೃಷ್ಟಿ ಬೇರೆಡೆ ಸೆಳೆಯಲು ನಾಟಕ ಮಾಡುತ್ತಿದ್ದಾರೆ,ಆಪರೇಷನ್ ಹಸ್ತ ಮಾಡೋರು ಮೂರ್ಖರು, ಹೋಗೋರು ಮೂರ್ಖರು,ಫಲಿತಾಂಶ ಬಳಿಕ ಆರು ತಿಂಗಳ ರಾಜ್ಯ ಸರ್ಕಾರ ಬಗ್ಗೆ ಮಾತನಾಡಬಾರದು ಅಂದುಕೊಂಡಿದ್ದೆ, ಈಗ ಮೂರು ತಿಂಗಳಾಗಿದೆ.ನಾವು ಮಾಡಿದಾಗ ಅರ್ಥ ಇತ್ತು, ಸರ್ಕಾರಕ್ಕೆ ಬಹುಮತ ಇರಲಿಲ್ಲ, ಅದು ನಮ್ಮ ಸ್ವಂತ ನಿರ್ಣಯ.ಯಾರೂ ಬಿಜೆಪಿಯವರು ನಮಗೆ ಆಹ್ವಾನ ನೀಡಿರಲಿಲ್ಲ‌.ಕಾಂಗ್ರೆಸ್ ನಲ್ಲಿ ಆದ ಅನ್ಯಾಯದಿಂದ ಹೊರಬಂದಿದ್ವಿ,ಆಪರೇಷನ್ ಕಮಲ ಏನಲ್ಲ, ನಾವು ಸ್ವತಃ ಮನಃಪೂರ್ವಕವಾಗಿ ಹೋಗಿ ಯಶಸ್ಸು ಕಂಡಿದ್ದೇವೆ.ಆದ್ರೆ ಈಗಿನ ಬಗ್ಗೆ ಸರ್ಕಾರಕ್ಕೆ ಶೋಭೆ ತರಲ್ಲ.ಎಂದು ರಮೇಶ್ ಜಾರಕಿಹೊಳಿ ಅವರು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸಿಎಂ ಸಿದ್ದರಾಮಯ್ಯ ಬಗ್ಗೆ ಗೋಕಾಕ್ ಸಾಹುಕಾರ್ ಸಾಫ್ಟ್ ಕಾರ್ನರ್ ತೋರಿಸಿದ್ರು.ಬರಗಾಲ ಘೋಷಣೆಗೆ ರಾಜ್ಯ ಸರ್ಕಾರ ಹಿಂದೇಟು ವಿಚಾರ,ಸರ್ಕಾರಕ್ಕೆ ಅವರದ್ದೇ ಆದ ವಿಚಾರ ಇರುತ್ತೆ,ಸಿದ್ದರಾಮಯ್ಯರವರ ಬಗ್ಗೆ ಗೌರವ ಇದೆ, ಒಳ್ಳೆಯ ನಿರ್ಣಯ ತಗೆದುಕೊಳ್ಳುವ ಆಸೆ ಇದೆ,2013 ರಿಂದ 2018ರಲ್ಲಿ ನಾನು ಅವರ ಜೊತೆಗೆ ಸಚಿವನಾಗಿದ್ದಾಗ ನೋಡಿದ ಸಿದ್ದರಾಮಯ್ಯ ಕಾಣುತ್ತಿಲ್ಲ.ಅವರಿಗೆ ಫ್ರೀ ಹ್ಯಾಂಡ್ ಇದ್ದಿದ್ದು ಕಾಣುತ್ತಿಲ್ಲ, ಸಿದ್ದರಾಮಯ್ಯ ಮುಖದಲ್ಲಿ ಖುಷಿ ಇಲ್ಲ.2013ರಲ್ಲಿ ನೋಡಿದ ಸಿದ್ದರಾಮಯ್ಯರಲ್ಲಿ 2023ರಲ್ಲಿ ನೋಡಲಾಗುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.

ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೆ ಶೋಭಾ ಕರಂದ್ಲಾಜೆ ಪರೋಕ್ಷ ಆಹ್ವಾನ ವಿಚಾರ,ಅವರೆಲ್ಲ ಸ್ವಯಂಘೋಷಿತ ಲೀಡರ್‌ಗಳು, ತಾವು ತಾವೇ ಮಾಧ್ಯಮಗಳಲ್ಲಿ ಹಾಕಿಸುತ್ತಾರೆ,ನಮಗೇನೂ ಜರೂರತ್ ಇಲ್ಲ, ಇಂತಹ ಪ್ರಮಾಣದಲ್ಲಿ ಅಸಹ್ಯ ಮಾಡಿದವರನ್ನ ತಗೋಂದ್ರೆ ನಾಯಕರಿಗೆ ಬಿಟ್ಟ ವಿಚಾರ,ಪಕ್ಷಕ್ಕೆ ತಗೊಂಡ್ರೆ ಸ್ವಾಗತ ಎಂದ ರಮೇಶ್ ಜಾರಕಿಹೊಳಿ ಹೇಳಿದ್ರು.

ಕಾಂಗ್ರೆಸ್ ಪಕ್ಷಕ್ಕೆ ಮರಳಿ ಹೋಗುತ್ತಿರಾ ಎಂದು ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ರಮೇಶ್ ಜಾರಕಿಹೊಳಿ,ನನ್ನ ರುಂಡ ಸಹ ಹೋಗಲ್ಲ ಅಲ್ಲಿ, ಇಲ್ಲೇ ಉಳಿಯೋದು,ಬಿಜೆಪಿಯಲ್ಲೇ ಎಂಡ್ ನನ್ನ ರಾಜಕಾರಣ,ಎಂದು ರಮೇಶ್ ಜಾರಕಿಹೊಳಿ ಪಕ್ಷ ನಿಷ್ಠೆ ತೋರಿಸಿದ್ದಾರೆ.

ಸತೀಶ್ ಜಾರಕಿಹೊಳಿ ಮಗಳಿಗೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಕೊಟ್ರೆ ನೀವು ಸ್ಪರ್ಧೆ ಮಾಡ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ.ನನ್ನ ಮಗಳಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಪರ ಕೆಲಸ ಮಾಡುವೆ ಎಂದ ರಮೇಶ್ ಜಾರಕಿಹೊಳಿ ಹೇಳಿದ್ರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.