Breaking News

ತುಮಕೂರು ಬಳಿ ಭೀಕರ ಅಪಘಾತ ಬೆಳಗಾವಿ ಮೂಲದ ನಾಲ್ವರ ಸಾವು..

ಬೆಳಗಾವಿ- ತುಮಕೂರು ಬಳಿ,ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೆಳಗಾವಿ ನಗರದ ವಡಗಾವಿ ಮೂಲದ ಒಂದೇ ಕುಟುಂಬದ ನಾಲ್ವರು ಮೃತ ಪಟ್ಟಿದ್ದು ಮೂರು ಜನ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ತುಮಕೂರು ಬಳಿ ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೆಳಗಾವಿ ನಗರದ ವಡಗಾವಿ ಪ್ರದೇಶದ ನಿಜಾಮ ಮೋಹಲ್ಲಾ ನಿವಾಸಿಯಾದ,ಸಮಶೋ ಶೇಖ 55 ತಂದೆ,ತಬ್ರೇಜ್ 12 ವರ್ಷ ಮಗ, ಖಲೀಲ್ ಶರೀಪ್ ಹಾಗು ಮಲೀದಾ ಶರೀಪ್ ಇವರು ಮೃತರು ಎಂದು ಗುರುತಿಸಲಾಗಿದೆ.ಮಕ್ಕಳಾದ ರಿಹಾನ್,ರೆಹಮಾನ್ ಮತ್ತು ಮಾಹೆ ಜಬೀನ್ ಈ ಮೂವರು ಮಕ್ಕಳು ಗಾಯಗೊಂಡಿದ್ದು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಶವಗಳನ್ನು ಬೆಳಗಾವಿಗೆ ತರಲಾಗುತ್ತಿದೆ.ವಡಗಾವಿಯ ನಿಜಾಮ್ ಮೋಹಲ್ಲಾ ದಲ್ಲಿ ಸೂತಕದ ಛಾಯೆ ಆವರಿಸಿದೆ.ಬೆಳಗಾವಿಯ ಸಮಶೋ ಶೇಖ ಎಂಬಾತ ತನ್ನ ತಂಗಿ ಹಾಗು ತಂಗಿಯ ಗಂಡ ಹಾಗು ಅವರ ಕುಟುಂಬದವರನ್ನು ತುಮಕೂರಿಗೆ ಬಿಡಲು ಹೋದಾಗ ತುಮಕೂರು ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ.

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *