ಗೋವಾದಿಂದ ಅಕ್ರಮವಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತೆಲಂಗಾಣಕ್ಕೆ ಸಿನಿಮೀಯ ರೀತಿಯಲ್ಲಿ ತೆಲಂಗಾಣ ಚುನಾವಣೆಗೆ ಹಂಚಿಕೆ ಮಾಡಲು ದುಬಾರಿ ಬೆಲೆಯ ಮದ್ಯದ ಬಾಟಲಿ ಇಟ್ಟುಕೊಂಡು ತೆರಳುತ್ತಿದ್ದ ಲಾರಿಯನ್ನು ಮಂಗಳವಾರ ಅಬಕಾರಿ ಇಲಾಖೆಯ ಅಧಿಕಾರಿಗಳು ಹಿರೇಬಾಗೇವಾಡಿ ಟೋಲ್ ಗೆಟ್ ಬಳಿ ವಶಕ್ಕೆ ಪಡೆದಿದ್ದಾರೆ.
ಕಳೆದ ಬಾರಿ ಪುಷ್ಪ ಸಿನಿಮಾ ಮಾದರಿಯಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಈಗ ಹೊಸ ತಂತ್ರಜ್ಞಾನ ಬಳಸಿ ಟ್ರಾನ್ಸಪರಬರ್ಮ್ ನಲ್ಲಿ ದುಬಾರಿ ಮದ್ಯದ ಬಾಟಲಿ ಇಟ್ಟು ತೆಲಂಗಾಣಕ್ಕೆ ತೆಗೆದುಕೊಂಡು ಹೋಗುವ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದಾಗ ಎಂ.ಎಚ್.43 ವೈ 2976 ಏಕಾಏಕಿ ಬಂದ್ ಆಗುವಂತೆ ಎಲ್ಲೋ ಒಂದು ಕಡೆ ಇದ್ದ ತಂಡ ಕಂಟ್ರೋಲ್ ಮಾಡಿರುವ ಶಂಕೆಯನ್ನು ಅಬಕಾರಿ ಇಲಾಖೆಯ ಅಧಿಕಾರಿ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಮಹಾರಾಷ್ಟ್ರದ ಬೀಡ ತಾಲೂಕಿನ ಶ್ರೀನಿವಾಸ ಎಂಬ ವಾಹನ ಚಾಲಕನನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
———-
ವಿಜಯಕುಮಾರ ಹಿರೇಮಠ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಳೆದ 15 ದಿನದಿಂದ ಈ ಲಾರಿಯನ್ನು ಹುಡುಕಾಟ ನಡೆಸುತ್ತಿದ್ದೇವು. ಇದರ ಹಿಂದೆ ದೊಡ್ಡ ಜಾಲ ಇದ್ದು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು.
– ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತ