ಪಾಲಿಕೆ ಅಧಿಕಾರಿಗಳಿಂದ ಇಂದು ನಗರದ ದರಬಾರ್ ಗಲ್ಲಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಆರಂಭ.
ಮರಾಠಾ ಮಂಡಳ ಕಾಲೇಜಿನಿಂದ, ಚವಾಟ ಗಲ್ಲಿ, ದರಬಾರ ಗಲ್ಲಿ, ಬೆಂಡು ಬಜಾರ್, ಆಜಾದ್ ಗಲ್ಲಿ ಮೂಲಕ ಕರ್ನಾಟಕ ಚೌಕ್ ವರೆಗೆ ಮುಂದುವರೆಯಲಿದೆ.
ಶನಿವಾರ ಬೆಳಿಗ್ಗೆ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಅಗಲೀಕರಣ ಕಾಮಗಾರಿ ಆರಂಭಿಸಲಾಯಿತು. ಈ ಹಿಂದೆ ಪಾಲಿಕೆ ಅಧಿಕಾರಿಗಳು ಅಗಲೀಕರಣಕ್ಕೆ ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಶಾಸಕ ಫಿರೋಜ್ ಸೇಠ್ ವ್ಯಾಪಾರಿಗಳ ಸಭೆಯಲ್ಲಿ ಕರೆದು ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈಗ ತೆರವು ಕಾರ್ಯಾಚರಣೆಗೆ ಆರಂಭಿಸಲಾಗಿದೆ. ಮಹಾನಗರ ಪಾಲಿಕೆ ಆಯುಕ್ತ ಜಿ. ಪ್ರಭು, ಅಭಿಯಂತರರಾದ ಆರ್. ಎಸ್. ನಾಯಕ ಸೇರಿದಂತೆ ಇತರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …