ಬೆಳಗಾವಿಯಲ್ಲಿ ಮಹಾರಾಷ್ಟ್ರದ ಮಂತ್ರಿ ಅರೆಸ್ಟ…
ಬೆಳಗಾವಿ – ಬೆಳಗಾವಿಯಲ್ಲಿ ಎಂಈಎಸ್ ಆಯೋಜಿಸಿದ್ದ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಹೆಡ್ರಾವಕರ ಅವರನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ
ಹುತಾತ್ಮ ಚೌಕ್ ಬಳಿ ಹೆಡ್ರಾವಕರ ಆಗಮಿಸುತ್ತಿದ್ದಂತೆಯೇ ಬೆಳಗಾವಿ ಮಹಾರಾಷ್ಟ್ರದ ಸಚಿವರನ್ನು ಅರೆಸ್ಟ ಮಾಡಿದ್ದಾರೆ
ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ, ಬರುತ್ತಿದ್ದಾರೆ ಎಂಬ ಮಾಹಿತಿ ಬೆಳಗಾವಿ ಪೋಲೀಸರಿಗೆ ಸಿಕ್ಕಿದ್ದು ಪೋಲೀಸರು ನಗರದಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ
ಎಂಇಎಸ್ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬರುವ ಮಾಹಿತಿ ಆಧರಿಸಿ ಬೆಳಗಾವಿಯ ನಾಲ್ಕೂ ದಿಕ್ಕಿನಲ್ಲಿ ಪೊಲೀಸ್ ಸರ್ಪಗಾವಲು ಮಾಡಲಾಗಿದೆ
ಮಹಾರಾಷ್ಟ್ರ ರಾಜ್ಯದ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಪೊಲೀಸರು ಕೊನೆಗೂ ಮಹಾರಾಷ್ಟ್ರ ಸಚಿವರಿಗೆ ಲಗಾಮು ಹಾಕುವದರಲ್ಲಿ ಯಶಸ್ವಿಯಾಗಿದ್ದಾರೆ
ಎಂಇಎಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹಾರಾಷ್ಟ್ರದ ಶಾಸಕರು ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ಬರುವಿಕೆಗೆ ಪೋಲೀಸರು ಕಾಯುತ್ತಿದ್ದರು
ಹಿಂಡಲಗಾ, ಕಾಕತಿ ಸೇರಿದಂತೆ ಬೆಳಗಾವಿ ನಗರಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಯಲ್ಲಿ ಪೊಲೀಸ್ ಸರ್ಪಗಾವಲು ಮಾಡಲಾಗಿತ್ತು ಮಹಾರಾಷ್ಟ್ರ ಶಾಸಕರಾದ
ಏಕನಾಥ ಪಾಟೀಲ್ ಮಹಾರಾಷ್ಟ್ರದ ಶಿರೋಳ್ ಶಾಸಕ, ಸಚಿವ ರಾಜೇಂದ್ರ ಪಾಟೀಲ್ ಚಂದಗಡ ಶಾಸಕ ರಾಜೇಶ್ ಪಾಟೀಲ್ ಬೆಳಗಾವಿಗೆ ಆಗಮಿಸುತ್ತಾರೆ ಎಂಬ ಮಾಹಿತಿ ಪೋಲೀಸರಿಗೆ ಲಭಿಸಿತ್ತು
ಪ್ರತಿ ವಾಹನ ಚೆಕ್ ಮಾಡಿ ಬಿಡಲಾಗುತ್ತಿತ್ತು ಆದರೂ ಪೋಲೀಸರ ಕಣ್ಣು ತಪ್ಪಿಸಿ ಹುತಾತ್ಮ ಚೌಕ್ ಗೆ ಆಗಮಿಸಿದ ಯಡ್ರಾವಕರ ಅವರನ್ನು ಪೋಲೀಸರು ಬಂಧಿಸಿದರು
ಎಂಇಎಸ್ ಮತ್ತೆ ಶಾಂತಿ ಕದಡುವ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಮಾಡಲಾಗಿದೆ