ಬೆಳಗಾವಿ-ರಾಜ್ಯೋತ್ಸವದ ದಿನ ಈ ಬಾರಿ ಸೈಕಲ್ ರ್ಯಾಲಿ,ಕರಾಳದಿನ ಆಚರಣೆಗೆ ಅನುಮತಿ ಸಿಗೋದಿಲ್ಲ ಎಂದು ಖಾತ್ರಿ ಮಾಡಿಕೊಂಡಿರುವ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ಬಾರಿ ಹೊಸ ಪ್ಲ್ಯಾನ್ ಮಾಡಿಕೊಂಡಿದೆ.
ಬೆಳಗಾವಿಯಲ್ಲಿ ಈ ಬಾರಿ ನಮಗೆ ಕಪ್ಪು ದಿನ ಆಚರಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡುತ್ತಿಲ್ಲ,ನಾವು ಮಾಡುವ ಕೆಲಸ ನೀವು ಮಾಡಿ ಎಂದು ಬೆಳಗಾವಿಯ ಎಂಈಎಸ್ ನಾಯಕರು ಮಹಾರಾಷ್ಟ್ರದ ಎಲ್ಲ ಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದಾರೆ.
ಕರ್ನಾಟಕ ಸರ್ಕಾರ ಬೆಳಗಾವಿಯ ಮರಾಠಿ ಭಾಷಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ,ರಾಜ್ಯೋತ್ಸವದ ದಿನ ನಮಗೆ ಸೈಕಲ್ ರ್ಯಾಲಿ ಹೊರಡಿಸಲು ಅನುಮತಿ ಕೊಡುತ್ತಿಲ್ಲ,ಈ ಬಾರಿ ಮಹಾರಾಷ್ಟ್ರದ ಮಂತ್ರಿಗಳು ,ಮಹಾರಾಷ್ಟ್ರದಲ್ಲಿ ಕಪ್ಪು ದಿನ ಆಚರಿಸಿ,ಕರ್ನಾಟಕ ಸರ್ಕಾರದ ವಿರುದ್ಧ,ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಬೆಳಗಾವಿಯ ಮರಾಠಿಗರಿಗೆ ಬೆಂಬಲಿಸಿ ಎಂದು ಬೆಳಗಾವಿಯ ಎಂಈಎಸ್ ನಾಯಕರು ಮಹಾರಾಷ್ಟ್ರದ ಎಲ್ಲ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ,ಉದ್ಧವ ಠಾಖ್ರೆ,ಶರದ ಪವಾರ ,ಅಜೀತ ಪವಾರ,ಛಗನ್ ಭುಜಬಲ್, ಸೇರಿದಂತೆ ಮಹಾರಾಷ್ಟ್ರದ ಎಲ್ಲ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಮಹಾ ಮಂತ್ರಿಗಳನ್ನು ಪ್ರಚೋದಿಸುವ ಪ್ರಯತ್ನ ವನ್ನು ಮಾಡುತ್ತಿದ್ದಾರೆ.
ಎಂಈಎಸ್ ನಾಯಕ ದೀಪಕ ದಳವಿ ,ಎಂಈಎಸ್ ಯುವ ಅಘಾಡಿಯ ನಾಯಕರು ಪತ್ರ ಚಳುವಳಿಯ ಮೂಲಕ ಮಹಾರಾಷ್ಟ್ರದ ನಾಯಕರನ್ನು ಪ್ರಚೋದಿಸುತ್ತಿದ್ದು,ಈ ಬಾರಿ ಬೆಳಗಾವಿಯ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿ ಮಹಾರಾಷ್ಟ್ರದಲ್ಲಿ ಹೋರಾಟ ಮಾಡಲು ತಯಾರಿ ನಡೆಸಿದೆ.