ಬೆಳಗಾವಿ-ಉತ್ತರ ಕರ್ನಾಟಕದ ಗಡಿಯಲ್ಲಿ ಸ್ವಲ್ಪ ಉತ್ತಮ ಮಳೆಯಾಗಿದೆ ಆದರೆ ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆ ಆಗದೇ ಇರುವದರಿಂದ ಜಲಾಶಯಗಳು ಇನ್ನುವರೆಗೆ ಭರ್ತಿಯಾಗಿಲ್ಲ ಹೀಗಾಗಿ ವಿದ್ಯುತ್ತ ಅಭಾವ ಆಗುವ ಸಾಧ್ಯತೆ ಇದ್ದರೂ ವಿದ್ಯುತ್ತ ದರವನ್ನು ಏರಿಕೆ ಮಾಡುವದಿಲ್ಲ ಏಂದು ಇಂಧನ ಸಚಿವ ಡಿಕೆ ಶಿವಕುಮಾರ ತಿಳಿಸಿದ್ದಾರೆ
ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಜಲಾಶಯಗಳು ಖಾಲಿ ಆಗಿರುವದರಿಂದ ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆ ಆಗುವ ವಿದ್ಯತ್ತನ್ನು ಯೋಗ್ಯ ದರ ನೀಡಿ ಖರಿದಿಸಲು ಚಿಂತನೆ ನಡೆದಿದೆ ಎಂದರು
ರಾಜ್ಯದಲ್ಲಿರುವ ಪರಿಷ್ಕೃತ ಸೋಲಾರ್ ನೀತಿಯನ್ನು ಮೆಚ್ಚಿ ಅನೇಕ ಬಂಡವಾಳ ಶಾಹಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ ಎಂದರು
ಸರ್ಕಾರ ರಾಜ್ಯದಲ್ಲಿ ಯಾವುದೇ ರೀತಿಯ ವಿದ್ಯತ್ತ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಮಾಡಿಕೊಳ್ಳುತ್ತಿದೆ ಎಂದರು
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿವೇಕ ರಾವ ಪಾಟೀಲ ಶ್ಕಾಂಯಾಮ ಘಾಟಗೆ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟ ಚನ್ನರಾಜ ಹಟ್ಟಿಹೊಳಿ ಶಿವಾನಂದ ಡೋಣಿ ,ಭಿಮಗೌಡಾ ಪಾಟಟೀಲ, ರಮೇಶ ಉಟಗಿ, ಮೋಹನ ರೆಡ್ಡಿ ಶಂಕರ ಮುನವಳ್ಳಿ ಸಿಸಿ ಪಾಟೀಲ, ಪಂಚನಗೌಡ್ರ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು
Check Also
ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …