ಬೆಳಗಾವಿ -ರಾಜ್ಯದಲ್ಲಿ ಸುಮಾರು 13 ಸಾವಿರ ಎಕರೆ ಕೈಗಾರಿಕಾ ಪ್ರದೇಶ ಯಾವುದೇ ಕೈಗಾರಿಕೆಗಳಿಲ್ಲದೆ ಖಾಲಿ ಬಿದ್ದಿದೆ. ಯಾವ ಉದ್ದೇಶಕ್ಕಾಗಿ ಭೂಮಿ ಪಡೆಯಲಾಗಿತ್ತೋ ಅದು ಈಡೇರಿಲ್ಲ. ಅನೇಕ ಉದ್ಯಮಿಗಳು ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆದುಕೊಂಡಿದ್ದರೂ ಆನಂತರ ಯಾವುದೇ ಕೈಗಾರಿಕೆಗಳನ್ನು ಆರಂಭಿಸಿಲ್ಲ. ಇಂತಹ ನಿವೇಶನಗಳನ್ನು ಸರಕಾರ ಮರಳಿ ತನ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ ಬೃಹತ್ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ಬೆಳಗಾವಿ ಜಿಲ್ಲಾದಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾದ್ಯಮಗಳ ಜತೆ ಮಾತನಾಡಿದ ಅವರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಉದ್ದೇಶದಿಂದ ಪಡೆದುಕೊಂಡ ಸಾವಿರಾರು ಎಕರೆ ಭೂಮಿ ಯಾವುದೇ ಕೈಗಾರಿಕೆಗಳಿಲ್ಲದೆ ಖಾಲಿ ಬಿದ್ದಿದೆ. ಈ ಭೂಮಿಯನ್ನು ಮರಳಿ ಪಡೆದುಕೊಂಡು ಆಸಕ್ತ ಉದ್ಯಮಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಿದ್ದು ಶೀಘ್ರವೇ ಇದನ್ನು ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವದು ಎಂದು ಬೃಹತ್ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ಅತೀ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳಿಂದ ತುಂಬಿರುವ ಬೆಂಗಳೂರಿನಿಂದ ಹೊರ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರಕಾರ ಪೂರಕವಾದ ವಾತಾವರಣ ಸೃಷ್ಟಿಮಾಡಿದ್ದು ಉದ್ಯಮ ಸ್ಥಾಪನೆ ಮಾಡಲು ಬರುವವರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ತ್ವರಿತ ಗತಿಯಲ್ಲಿ ಒದಗಿಸಿಕೊಡಲಿದೆ ಎಂದು ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ಬೆಳಗಾವಿ ಜಿಲ್ಲೆ ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದ 675 ಉದ್ಯಮಿಗಳು 3000 ರೂ ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದಕ್ಕೆ ಪೂರಕವಾಗಿ ಕಿತ್ತೂರ ಬಳಿ ಸುಮಾರು 430 ಎಕರೆ ಪ್ರದೇಶ ಹಾಗೂ ನಿಪ್ಪಾಣಿ ಬಳಿ 848 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆಸಕ್ತಿ ವಹಿಸಿ ಮಹಾರಾಷ್ಟ್ರದ ಕೆಲ ಉದ್ಯಮಿಗಳು ತಮ್ಮ ಜೊತೆ ಸಭೆ ನಡೆಸಿದ್ದರು. ಅದರೆ ಇದಾದ ನಂತರ ಅವರು ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿಲ್ಲ. ಈಗಲೂ ಅಲ್ಲಿನ ಉದ್ಯಮಿಗಳು ಆಸಕ್ತಿ ತೋರಿಸಿದರೆ ಕರ್ನಾಟಕ ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವದು ಎಂದು ಸಚಿವರು ಹೇಳಿದರು.
ಕೈಗಾರಿಕೆಗಳಿಗೆ ಜಾಗವನ್ನು ಸ್ವಾ„ೀನ ಪಡಿಸಿಕೊಳ್ಳುವ ಮುನ್ನ ಕೆಲವು ನಿಯಮಗಳನ್ನು ಪಾಲಿಸುವದನ್ನು
ಕಡ್ಡಾಯಗೊಳಿಸಲಾಗಿದೆ. ಅದರಲ್ಲಿ ಫಲವತ್ತಾದ ಭೂಮಿಯನ್ನು ಯಾವದೇ ಕಾರಣಕ್ಕೂ ಸ್ವಾ„ೀನಪಡಿಸಿಕೊಳ್ಳಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಬೆಳಗಾವಿಯ ಉದ್ಯಮಿಗಳಿಗೆ ವಿಶೇಷವಾಗಿ ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಪ್ತು ಮಾಡುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಇಲ್ಲಿ ವಿದೇಶಿ ವ್ಯಾಪಾರ ನಿರ್ದೆಶನಾಲಯ (ಡಿಜಿಎಫ್‍ಟಿ) ಕಚೇರಿಯನ್ನು ಸ್ಥಾಪಿಸಲು ನಿರ್ಧರಿಸಿದ್ದು ಇದಕ್ಕಾಗಿ ಆಟೋನಗರದಲ್ಲಿ ಜಾಗವನ್ನು ಗುರುತಿಸಲಾಗಿದೆ. ಕೇಂದ್ರ ಸ್ಥಾಪನೆಗೆ ಬೇಕಾದ ಅಗತ್ಯ ಜಾಗವನ್ನು ನೀಡಲಾಗುವದು ಎಂದು ಈಗಾಗಲೇ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ ಅವರಿಗೆ ತಿಳಿಸಲಾಗಿದೆ ಎಂದರು.