Breaking News

ಗಣತಂತ್ರ ವ್ಯವಸ್ಥೆ ಗೆ ತೊಂದರೆಯುಂಟು ಮಾಡುವ ದುಷ್ಟಶಕ್ತಿಗಳ ವಿರುದ್ದ ನಿರ್ಲಕ್ಷಣ್ಯ ಕ್ರಮಕ್ಕೆ ಸರ್ಕಾರ ಬದ್ದ : ರಮೇಶ ಜಾರಕಿಹೊಳಿ

ಬೆಳಗಾವಿ-

ಗಣತಂತ್ರ ವ್ಯವಸ್ಥೆ ಗೆ ತೊಂದರೆಯುಂಟು ಮಾಡುವ ದುಷ್ಟಶಕ್ತಿಗಳ ವಿರುದ್ದ ನಿರ್ಲಕ್ಷಣ್ಯ ಕ್ರಮಕ್ಕೆ ಸರ್ಕಾರ ಬದ್ದ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಜಿಲ್ಲಾ ಕ್ರೀಡಾಂಗಣ ದಲ್ಲಿ ೬೮ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ಸಮುದಾಯದವರು ಪರಸ್ಪರ ಅರ್ಥ ಮಾಡಿಕೊಂಡು ಬದುಕುತ್ತಿದ್ದಾರೆ. ಜಿಲ್ಲೆಯ ಜನರು ಅನಾಚಾರವನ್ನು ಪ್ರಶ್ನಿಸುವ ಮನೋಧರ್ಮ ಹೊಂದಿದವರಾಗಿರುವುದರಿಂದ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ೨೦೧೬ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಶೇಕಡಾ ೮೩ ರಷ್ಟು ಮಳೆಯ ಕೊರತೆಯಾಗಿದೆ. ಮಳೆಯ ವೈಫಲ್ಯದಿಂದ ಕಳೆದ ಮೂರು ವರ್ಷ ಗಳಿಂದ ಬರವನ್ನು ಎದುರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತ ಸಮುದಾಯ ಕ್ಕೆ ಸೂಕ್ತ ಆರ್ಥಿಕ ಭದ್ರತೆ ಕಲ್ಪಿಸಲು ಬೆಳೆವಿಮೆಗೆ ಆದ್ಯತೆ ನೀಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಸುಮಾರು ೨.೧೧ ಲಕ್ಷ ರೈತರನ್ನು ಬೆಳೆ ವಿಮೆಗೆ ಒಳಪಡಿಸಲಾಗಿದೆ, ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗೆ ೨೦೧೬-೧೭ ನೇ ಸಾಲಿಗೆ ೫೯.೪೨ ಕೋಟಿ ಅನುದಾನ ನಿಗದಿಪಡೆಸಲಾಗಿದ್ದು, ಇದುವರೆಗೆ ೫೮.೨೩ ಕೋಟಿ ಖರ್ಚು ಮಾಡಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯ ೫ನೇ ಹಂತದಲ್ಲಿ ಜಿಲ್ಲೆಗೆ ಒಟ್ಟು ೯೪.೨೨ ಕೋಟಿ ಅನುದಾನ ನಿಗದಿಪಡೆಸಲಾಗಿದೆ. ಇದಕ್ಕೆ ೧೨೪ ಗ್ರಾಮ ಗಳನ್ನು ಆಯ್ಕೆ ಮಾಡಲಾಗಿದ್ದು, ನೂರು ಗ್ರಾಮಗಳಲ್ಲಿ ಕಾಮಗಾರಿ ಮುಗಿದಿದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೬-೧೭ನೇ ಸಾಲಿನಲ್ಲಿ ೬೧.೭೮ ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ೧.೫೭ ಲಕ್ಷ ಕುಟುಂಬ ಗಳಿಗೆ ಉದ್ಯೋಗ ಒದಗಿಸಲಾಗಿದೆ.
ನಗರೋತ್ಥಾನ ಎರಡನೇ ಹಂತದ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗಾಗಿ ಬೆಳಗಾವಿ ಜಿಲ್ಲೆಯ ೧೬ ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾದ ಒಟ್ಟು ೧೪೫ ಕಾಮಗಾರಿಗಳಲ್ಲಿ ೧೧೫ ಕಾಮಗಾರಿ ಗಳು ಪೂರ್ಣ ಗೊಂಡಿದ್ದು ಆರು ಕಾಮಗಾರಿಗಳು ಪ್ರಗತಿ ಯಲ್ಲಿ ವೆ. ಬಿಡುಗಡೆಯಾದ ಅನುದಾನ ೯೫. ೯೮ ಕೋಟಿಗಳಲ್ಲಿ ೮೭. ೫೮ ಕೋಟಿ ಖರ್ಚು ಆಗಿದೆ ಎಂದು ತಿಳಿಸಿದ್ದಾರೆ.

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *