Breaking News

ಶೀಘ್ರದಲ್ಲಿಯೇ ಬೆಳಗಾವಿ ಜಿಲ್ಲೆಯಿಂದ ಸರ್ವಪಕ್ಷ ನಿಯೋಗ-ರಮೇಶ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಹಾಗು ಪ್ರಧಾನಿಗಳ ಬಳಿ ಜಿಲ್ಲೆಯಿಂದ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತಿಳಿಸಿದರು

ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಂದು ಮೇವು ಬ್ಯಾಂಕ್ ತೆರೆಯಲಾಗಿದೆ ಒಂದು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಜಿಲ್ಲೆಯ ಹನ್ನೊಂದು ತಾಲೂಕಗಳಲ್ಲಿ ಕುಡಿಯು ನೀರು ಮತ್ತು ಮೇವಿನ ಸಮಸ್ಯೆ ಬಗೆಹರಿಸಲು ಹನ್ನೆರಡು ಕೋಟಿ ಅನುದಾನ ಲಭ್ಯವಿದೆ ಎಂದು ಸಚಿವರು ತಿಳಿಸಿದರು

ಈಗಾಗಲೇ ಹಲವಾರು ತಾಲೂಕುಗಳಲ್ಲಿ ಸಭೆ ನಡೆಸಿ ಬರಪರಿಹಾರ ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಿದ್ದೇನೆ ಈಗ ಉಳಿದಿರುವ ತಾಲೂಕುಗಳಿಗೆ ಭೇಟಿ ಕೊಟ್ಟು ಸಭೆ ನಡೆಸುತ್ರೇನೆ ಎಂದು ತಿಳಿಸಿದ ಸಚಿವರು  ಜನೇವರಿ ೨೮ ರಂದು ಬೆಳಗಾವಿಯ ಸರ್ಕ್ಯಟ್ ಹೌಸ್ ನಲ್ಲಿ ಒಂದು ದಿನ ಜನತಾದರ್ಶನ ನಡೆಸಿ ಜಿಲ್ಲೆಯ ಜನರ ಅಹವಾಲು ಸ್ವೀಕರಿಸುವದಾಗಿ ಸಚಿವ ರಮೇಶ ತಿಳಿಸಿದರು

ಜನತಾ ದರ್ಶನದಲ್ಲಿ ಅಹವಾಲು ಸ್ವೀರಿಸಿ ಸಾಧ್ಯವಾದಲ್ಲಿ ಸ್ಥಳದಲ್ಲಿ ಬಗೆಹರಿಸುತ್ತೇವೆ ಉಳಿದವುಗಳನ್ನು ತಿಂಗಳಲ್ಲಿ ಬಗೆಹರಿಸುವ ಕ್ರಮ ಕೈಗೊಳ್ಳುತ್ತೇವೆ ಎಂದು ರಮೇಶ ಜಾರಕಿಹೊಳಿ ತಿಳಿಸಿದರು

ಐಟಿ ದಾಳಿ ಕುರಿತು ಮಾದ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ನನ್ನ ರಾಜೀನಾಮೆ ಯಾರು ಕೇಳಿಲ್ಲ.
ಐಟಿ ದಾಳಿ ನಡೆದ ಸಚಿವರು ರಾಜೀನಾಮೆ ನೀಡಿದ್ರೆ.‌ಇಡೀ ಸಚಿವ ಸಂಪುಟ ಖಾಲಿಯಾಗುತ್ತಿತ್ತು. ಸಚಿವ ರಮೇಶ ಜಾರಕಿಹೊಳಿ ಹೇಳಿದರು ದಾಳಿ ಕುರಿತು ಹೆಚ್ವಿನ ಮಾಹಿತಿ ನೀಡಲು ನಿರಾಕರಿದಿದರು

 

Check Also

ಎಸ್ ಎಂ ಕೃಷ್ಣ ನಿಧನ, ನಾಳೆ ಸರ್ಕಾರಿ ರಜೆ ಘೋಷಣೆ,

ಎಸ್​ಎಂ ಕೃಷ್ಣ ನಿಧನ: ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಸರ್ಕಾರಿ ರಜೆ ಘೋಷಣೆ, ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ …

Leave a Reply

Your email address will not be published. Required fields are marked *