Breaking News
Home / Breaking News / ಶಾಸಕ ಸಂಜಯ ಪಾಟೀಲ ವಿರುದ್ಧ ಸಚಿವ ರಮೇಶ ಜಾರಕಿಹೊಳಿ ಆಕ್ರೋಶ

ಶಾಸಕ ಸಂಜಯ ಪಾಟೀಲ ವಿರುದ್ಧ ಸಚಿವ ರಮೇಶ ಜಾರಕಿಹೊಳಿ ಆಕ್ರೋಶ

ಬೆಳಗಾವಿ ಸಚಿವರ ಮನೆ ಮೇಲೆ ಐಟಿ ದಾಳಿ ನಡೆದ ನಂತರ ರಾಜೀನಾಮೆ ನೀಡಿದ್ರೆ ಇಡೀ ಸಂಪುಟ ಈಗಾಗಲೇ ಖಾಲಿಯಾಗುತ್ತಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಇನ್ನೂ ಸಚಿವ ರಮೇಶ್ ಜಾರಕಿಹೊಳಿ ಗಣರಾಜ್ಯೋತ್ಸವ ಸಂದರ್ಭದಲ್ಲಿಯೆ ಬಿಜೆಪಿ ಶಾಸಕ ಸಂಜಯ ಪಾಟೀಲ್ ಜತೆಗೆ ಐಟಿ  ದಾಳಿ ವಿಚಾರವಾಗಿ ಮಾತನಾಡಿದ್ದಾರೆ. ನಿನೇ ಐಟಿ ರೇಡ್ ಗೆ ಕಾರಣ ಎಂದು ಸಚಿವರು ಸಂಜಯ ವಿರುದ್ಧ ವಾಗ್ವಾಳಿ ನಡೆಸಿದ್ದಾರೆ.

ನಾನು ಯಾರದೋ ವೈಯಕ್ತಿಕ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡುವದಿಲ್ಲ ಆದ್ರೇ ನೀನು ವೈಯಕ್ತಿಕ ವ್ಯೆವಹಾರ ಕುರಿತು ಆರೋಪ ಮಾಡಿರುವದು ಸರಿಯಲ್ಲ ಐಟಿ ದಾಳಿ ಮಾಡಲು ನಿನೇ ಕಾರಣ ಶನಿ ನಿನ್ನಿ ಹೇಗಲೇರಿದೆ ಆದರೂ ನೀ ಈ ತೆರೆನಾದ ರಾಜಕಾರಣ ಮಾಡಬಾರದಿತ್ತು ಎಂದು ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ್ ತರಾಟೆಗೆ ತೆಗೆದುಕೊಂಡ ಸಚಿವ ಜಾರಕಿಹೋಳಿ. ಸಂಜಯ ಪಾಟೀಲ ವಿರುದ್ಧದ ತಮ್ಮ ಆಕ್ರೋಶವನ್ನು ಹೊರ ಹಾಕಿದರು

ಇದಕ್ಕೆ ಉತ್ತರ ನೀಡಿದ ಸಂಜಯ ಸರ್ ನನ್ನ ಬೆಂಬಲಿಗೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದು ನಿಜ ಆದರೆ ನಿಮ್ಮ ವಿರುದ್ಧ ನಾನು ಯಾರಿಗೂ ದೂರು ನೀಡಿಲ್ಲ   ಸರ್ ನನಗೆ ರಾಜಕೀಯ ಅನಿವಾರ್ಯವಲ್ಲ ನನ್ನ ಉದ್ಯಮ ಸಹ ಇದೆ ಎಂದು ಹೇಳಿದ್ದಾರೆ. ಇದಾದ ಬಳಿಕ ಮಾದ್ಯಮಗಳ ಜತೆಗೆ ಮಾತನಾಡಿ ಸಚಿವ ರಮೇಶ್ ಜಾರಕಿಹೊಳಿ, ಈಗಾಗಲೇ ಮಂತ್ರಿ ಕನಸು ಕಂಡವರಿಗೆ ನಿರಾಶೆಯಾಗಿದೆ. ಎಂದರು

 

About BGAdmin

Check Also

ಬೆಳಗಾವಿಯಲ್ಲಿ, 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ

ಬೆಳಗಾವಿ-ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ, ಈವರೆಗೂ 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ ಮಾಡಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ