Breaking News

ಹಿಂಡಲಗಾ ಕಾರಾಗೃಹದಿಂದ ೧೭ ಕೈದಿಗಳ ಬಿಡುಗಡೆ

ಬೆಳಗಾವಿ: ಸನ್ನಡತೆ ಆಧಾರದ ಮೇರೆಗೆ ಜೈಲಿನಿಂದ ಬಿಡುಗಡೆಹೊಂದಿರುವ ಕೈದಿಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಸನ್ನಡತೆ ಆಧಾರದ ಮೇಲೆ ೧೭ ಕೈದಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸನ್ನಡತೆ ಆಧಾರದಲ್ಲಿ ಬಿಡುಗಡೆ ಹೊಂದಿರುವ ಕೈದಿಗಳು ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸಬೇಕು. ಯಾವುದೇ ಕೆಟ್ಟಗಳಿಕೆಯಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿ ಜೈಲುವಾಸ ಅನುಭವಿಸಿದ್ದೀರಿ. ಆದರೆ, ಕೆಲವರು ಯಾವುದೇ ಅಪರಾಧ ಮಾಡದೇ ಇದ್ದರೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಜೈಲಿನಿಂದ ಬಿಡುಗಡೆಹೊಂದಿರುವ ಕೈದಿಗಳು ಸಮಾಜದ ಮುಖ್ಯ ವಾಹನಿಗೆ ಬರಬೇಕು. ಮನೆ ಮಂದಿ, ನೆರೆಹೊರೆಯವರೊಂದಿಗೆ ಸಾಮಾನ್ಯರಂತೆ ಜೀವನ ನಡೆಸಬೇಕು. ಜೈಲಿನಲ್ಲಿನ ಕಲ್ಪನೆಯನ್ನು ಮರೆತುಬಿಡಬೇಕು ಎಂದು ಹೇಳಿದರು

ಜಿಲ್ಲಾಧಿಕಾರಿ ಎನ. ಜಯರಾಂ ಮಾತನಾಡಿ,ಜೈಲಿನಲ್ಲಿದ್ದುಕೊಂಡು ತಮ್ಮ ನುಡಿ, ನಡೆಯಲ್ಲಿ ಸುಧಾರಣೆಯಾಗಿರುವವರನ್ನು ರಾಜ್ಯ ಸರ್ಕಾರ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿ, ಸಮಾಜದಲ್ಲಿ ಬದುಕಲು ಅವಕಾಶ ಕಲ್ಪಿಸಿದೆ. ಸಮಾಜದ ಮುಖ್ಯವಾಹನಿಗೆ ಸೇರುವ ಮೂಲಕ ಆತ್ಮವಿಶ್ವಾಸದಿಂದ ಜೀವನ ಸಾಗಿಸಬೇಕು. ಎಲ್ಲರೂ ಸಕಾರಾತ್ಮಕವಾಗಿ ಯೋಚನೆ ಮಾಡಬೇಕು ಎಂದು ಕರೆ ನೀಡಿದರು

೧೯೯೭ರಿಂದ ಹಿಂಡಲಗಾ ಕೇಂದ್ರ ಜೈಲಿನಲ್ಲಿದ್ದೆ. ಇದೀಗ ನನಗೆ ಅಕ್ಷರಶಃ ಪುನರ್ಜನ್ಮ ಸಿಕ್ಕಂತಾಗಿದೆ. ಇನ್ನು ಮುಂದೆ ಋಷಿಯಿಂದ ಜೀವನ ಸಾಗಿಸುತ್ತೇನೆ. ಜೈಲಿನಲ್ಲಿದ್ದ  ದಿನಗಳು ಸಾಕಷ್ಟು ಪಾಠ ಕಲಿಸಿವೆ ಎಂದು ಚಿಕ್ಕೋಡಿ ತಾಲೂಕಿನ ಅಜ್ಜಪ್ಪ ಭೀರಪ್ಪ ಮೊಳಗಿ ತಮ್ಮ ಅನುಭವವನ್ನು ಹಂಚಿಕೊಂಡರು. ಕೊಲೆ ಪ್ರಕರಣದಲ್ಲಿ ನಾನು ೧೩ ವರ್ಷಗಳಿಂದ ಜೈಲುವಾಸ ಅನುಭವಿಸಿದ್ದೇನೆ. ನನ್ನ ತಪ್ಪಿನ ಅರಿವಾಗಿದೆ. ಇನ್ನು ಮುಂದೆ ಇಂತಹ ತಪ್ಪನ್ನು ಎಂದಿಗೂ ಮಾಡುವುದಿಲ್ಲ. ನನಗೆ ಪುನರ್ಜನ್ಮ ಸಿಕ್ಕಂತಾಗಿದೆ. ಒಳ್ಳೆಯ ಜೀವನವನ್ನು ನಡೆಸುತ್ತೇನೆ ಎಂದು ಸುಧೀರ ಕಮತೆ ಹೇಳಿದರು.

ಇದೇ ಸಂದರ್ಭದಲ್ಲಿ ೧೭ ಕೈದಿಗಳಿಗೆ ಬಿಡುಗಡೆ ಪತ್ರ ವಿತರಿಸಲಾಯಿತು.  ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ, ಡಿಸಿಪಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಕೇಂದ್ರ ಕಾರಾಗೃಹ ಸಲಹಾ ಸಮಿತಿ ಸದಸ್ಯರಾದ ವಿಜಯಮೋರೆ, ಸಿದ್ದನಗೌಡ ಪಾಟೀಲ, ಕವಿತಾ ಕಾಂಬಳೆ, ಸರಳಾ ಹಿರೇಕರ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ, ಸಹಾಯಕ ಅಧೀಕ್ಷಕ ಪಿ.ವಿ. ಮೂಲಿಮನಿ ಮೊದಲಾದವರು ಇದ್ದರು.

ಬಿಡುಗಡೆಗೊಂಡ ಕೈದಿಗಳು:

ನಜ್ಮಾ ಶೇಖಹುಸೇನ, ನಾಗಪ್ಪ ಪಡಗಿ, ರಾಯಪ್ಪ ಮೊಳಗಿ, ಭೀರಪ್ಪ ಕಲ್ಲಪ್ಪ ಚೌಗಲಾ, ಕಲ್ಲಪ್ಪ ಬಾಳಪ್ಪ ಹರಕೆ, ಅಜ್ಜಪ್ಪ ಮೊಳಗಿ, ಸಾಧು ಪೂಜಾರಿ, ಕೃಷ್ಣಾನಂದ ಬಾಡಕರ, ಎಚ್.ಎಂ.ಚಂದ್ರಶೇಖರ, ಸಾವುದಅಹ್ಮದ ಅಬ್ದುಲ ಖಾದರ,ಪರಸಪ್ಪ ತಳವಾರ, ಎಂ.ಎನ. ಚಂದ್ರಶೇಖರ, ರಿಯಾಜ ಶರೀಪಸಾಬ, ಚಂದ್ರಕಾಂತ ನಾಗರಾಳೆ, ಸುಧೀರ ಕಮತೆ, ತುಕಾರಾಮ ಶೇಡಬಾಳೆ ಮತ್ತು ಸುಬ್ರಮಣಿ.

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.