ಬೆಳಗಾವಿ ಜಿಲ್ಲಾ ಮಂತ್ರಿಗಳ ಕಾರು ಅಪಘಾತ ರಮೇಶ ಜಾರಕಿಹೊಳಿ ಅವರಿಗೆ ಸಣ್ಣ ಪುಟ್ಟ ಗಾಯ

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಕಾರು ಹಲಗಾ ಸಮೀಪ ಅಪಘಾತಕ್ಕೀಡಾಗಿದ್ದು ರಮೇಶ ಜಾರಕಿಹೊಳಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ

ಅಧಿವೇಶನದ ಕಲಾಪಗಳನ್ನು ಮುಗಿಸಿಕೊಂಡು ನಗರಕ್ಕೆ ಮರಳುತ್ತಿರುವಾಗ ಹಲಗಾ ಸಮೀಪ ಪ್ಯಾಸೆಂಜರ್ ಟಿಂಪೋ ಒಂದು ಮಂತ್ರಿಗಳ ಕಾರಿಗೆ ಡಿಕ್ಕಿ ಹೊಡೆದಿದೆ ಈ ಅಪಘಾತದಲ್ಲಿ ರಮೇಶ ಜಾರಕಿಹೊಳಿ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಸುರಕ್ಷಿತವಾಗಿದ್ದಾರೆ ಲೆಕ್ ವ್ಯುವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ

ಅಪಘಾತ ಸಂಭವಿಸಿದ ಬಳಿಕ ಪೋಲೀಸರು ಸ್ಥಳಕ್ಕಾಗಮಿಸಿ ಸಚಿವರನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು  ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿದರು

Check Also

ಕುರಿ ಹಿಂಡಿನ ಚಲನವಲನ ಮನೆಯಲ್ಲೇ ಇದ್ದ ವಿಲನ್….!!!

ಬೆಳಗಾವಿ- ಒಬ್ಬ ವ್ಯಕ್ತಿಯ ಕೊಲೆ ನಡೆದಾಗ ಆರೋಪಿಗಳನ್ನು ಪತ್ತೆ ಮಾಡುವದು ಸುಲಭವಲ್ಲ, ಪೋಲೀಸರು ಈ ವಿಚಾರದಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ …

Leave a Reply

Your email address will not be published. Required fields are marked *