ಬೆಳಗಾವಿ- ಬೆಳಗಾವಿಯಲ್ಲಿ ತಿನಿಸು ಕಟ್ಟೆ ನಿರ್ಮಿಸಿ ರಾಜ್ಯದ ಗಮನ ಸೆಳೆದಿದ್ದ ಶಾಸಕ ಅಭಯ ಪಾಟೀಲ ಈಗ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹಲವು ಕಡೆ ಊಸಾಬರಿ ಕಟ್ಟೆಗಳನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸಂಜೆಯಾದ್ರೆ ಸಾಕು,ಹಳ್ಳೆಯ ಜನ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯೋದನ್ನು ನೋಡಿದ್ದೇವೆ.ಸಿಟಿಯಲ್ಲಿ ಈ ರೀತಿಯ ಹರಟೆ ಹೊಡೆಯಲು ಜಾಗವೇ ಸಿಗೋದಿಲ್ಲ.ರಸ್ತೆ ಬದಿಯಲ್ಲಿ ನಿಂತ್ಕೊಂಡು ಹರಟೆ ಹೊಡೆದ್ರೆ ಪೋಲೀಸರು ಸೀಟಿ ಊದಿ ಓಡಿಸ್ತಾರೆ.ಊರ ಊಸಾಬರಿ ಮಾಡುವವರು ಒಂದು ಕಡೆ ಕುಳಿತು ಊಸಾಬರಿ ಮಾಡಲಿ ಅಂತಾ ಶಾಸಕ ಅಭಯ ಪಾಟೀಲ ತಮ್ಮ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಊಸಾಬರಿ ಕಟ್ಟೆಗಳನ್ನು ನಿರ್ಮಿಸಿ ಊರ ಊಸಾಬರಿ ಮಾಡುವವರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು ದೇಶದಲ್ಲಿ ವಿಭಿನ್ನ ವಿಶಿಷ್ಟವಾಗಿದ್ದು ಈ ರೀತಿಯ ಊಸಾಬರಿ ಮಾಡಿದ್ದು ಅಭಯ ಪಾಟೀಲ ದೇಶದಲ್ಲೇ ಮೊದಲಿಗರು.
ಊಸಾಬರಿ ಕಟ್ಟೆಯನ್ನು ಸ್ವತಃ ಅಭಯ ಪಾಟೀಲರು ಉದ್ಘಾಟಿಸಿ ಊಸಾಬರಿ ಮಾಡೋವ್ರಿಗೆ ಸಮರ್ಪಿಸಿದ್ದಾರೆ. ಹಾಗಾದ್ರೆ ಅಲ್ಲಿ ಇಲ್ಲಿ ನಿಂತು ಉಸಾಬರಿ ಮಾಡಬೇಡಿ ಉಸಾಬರಿ ಮಾಡೋದಿದ್ರೆ ಬೆಳಗಾವಿಯ ಊಸಾಬರಿ ಕಟ್ಟೆಗಳಿಗೆ ಬನ್ನೀ…..
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					