Breaking News
Home / Breaking News / ತಾಯಿ ಅಂಜಲಿ ಖಾನಾಪೂರ ಕ್ಷೇತ್ರವೇ ಇವರ ಖರೇ ಖರೇ ಫ್ಯಾಮಿಲಿ…..!!!

ತಾಯಿ ಅಂಜಲಿ ಖಾನಾಪೂರ ಕ್ಷೇತ್ರವೇ ಇವರ ಖರೇ ಖರೇ ಫ್ಯಾಮಿಲಿ…..!!!

ಬೆಳಗಾವಿ- ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದು,MBBS ಪದವಿ ಪಡೆದು ಡಾಕ್ಟರ್ ಆಗಿ ನಂತರ, ಪೋಲೀಸ್ ಅಧಿಕಾರಿಯ ,ಶ್ರೀಮತಿಯಾಗಿ,ಮನೆಯಲ್ಲಿದ್ದುಕೊಂಡು ಎಂಜಾಯ್ ಮಾಡಬಹುದಿತ್ತು ಆದ್ರೆ ಆ ಅಂಜಲಿತಾಯಿ ಸ್ವಾರ್ಥಸುಖ ಬಯಸದೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಖಾನಾಪೂರ ಕ್ಷೇತ್ರದಲ್ಲಿ ಸೇವೆ ಮಾಡಿ ಅದೇ ಕ್ಷೇತ್ರದ ಶಾಸಕಿಯಾಗಿರುವ ಅಂಜಲಿತಾಯಿಯ ಸೇವೆ,ಅಮೋಘ ಅನನ್ಯ,ಅಪ್ರತಿಮ ಎನ್ನುವದರಲ್ಲಿ ಸಂಶಯವೇ ಇಲ್ಲ

ಅಂಜಲಿ ನಿಂಬಾಳ್ಕರ್ ಖಾನಾಪೂರ ಕ್ಷೇತ್ರವೇ ನನ್ನ ಫ್ಯಾಮಿಲಿ ಎನ್ನುವ ರೀತಿಯಲ್ಲಿ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದಾರೆ.ನಾನು ನಿಮ್ಮವಳು ,ನಿಮ್ಮ ಮನೆಯ ಮಗಳು ಎನ್ನುವದನ್ನು ಶಾಸಕಿ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಜನರಿಗೆ ಸಾಭೀತು ಮಾಡಿ ತೋರಿಸಿದ್ದಾರೆ.

ಸ್ವತಹ ಡಾಕ್ಟರ್ ಆಗಿರುವ ಶಾಸಕಿ ಅಂಜಲಿತಾಯಿ ಖುದ್ದಾಗಿ ನಿಂತು ಖಾನಾಪೂರ ಕ್ಷೇತ್ರದಲ್ಲಿ ಕೊರೋನಾ ಸೊಂಕು ಹರಡದಂತೆ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮಹಾಮಾರಿ ವೈರಸ್ ಕ್ಷೇತ್ರಕ್ಕೆ ಎಂಟ್ರಿ ಕೊಡದಂತೆ ಕ್ಷೇತ್ರದ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ,ಶಾಸಕಿ ಅಂಜಲಿತಾಯಿ ಯಶಸ್ವಿಯಾಗಿದ್ದಾರೆ.

ಖಾನಾಪೂರ ಕ್ಷೇತ್ರ ಬಹುತೇಕ ಅರಣ್ಯ ಪ್ರದೇಶದಲ್ಲಿ ವಿಸ್ತರಿಸಿದೆ.ಈ ಕ್ಷೇತ್ರದ ಕಾಡುವಾಸಿಗಳಿಗೆ ಭೇಟಿ ಆಗೋದೆ ದೊಡ್ಡ ಸಹಾಸದ ಕೆಲಸ ಕ್ಷೇತ್ರದಲ್ಲಿ ನಿರಂತರವಾಗಿ ಸಂಚರಿಸಿ ಕೊರೋನಾ ಮಹಾಮಾರಿ ಬಾರದಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕ್ಷೇತ್ರದ ಶಾಸಕಿಯಾಗಿರುವ ಅಂಜಲಿ ತಾಯಿ ಕ್ಷೇತ್ರವೇ ನನ್ನ ಫ್ಯಾಮಿಲಿ ಎಂದು ನಂಬಿ ಅವರ ಸೇವೆ ಮಾಡುತ್ತಿದ್ದಾರೆ.

ಖಾನಾಪೂರ ಕ್ಷೇತ್ರದಲ್ಲಿ ಜನರಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸುವ ಮಾರ್ಗದರ್ಶನ ಮಾಡುತ್ತಿರುವ ಡಾ ಅಂಜಲಿ ನಿಂಬಾಳ್ಕರ್ ಅಲ್ಪಾವಧಿಯಲ್ಲಿ ಕ್ಷೇತ್ರದ ಜನರ ಮೆಚ್ಚುಗೆ ಗಳಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿಯ ಕುರಿತು ಶ್ರಮಿಸುತ್ತಿರುವ ಅವರು ಅವಧಿ ಮುಗಿಯುವ ಒಳಗಾಗಿ ಅಭಿವೃದ್ಧಿಯ ಮೂಲಕ ಕ್ಷೇತ್ರದ ಚಿತ್ರಣ ಬದಲು ಮಾಡುವ ಸಂಕಲ್ಪ ಮಾಡಿದ್ದಾರೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *