Breaking News

ಗ್ರಾಮೀಣ ಕ್ಷೇತ್ರದ ಜನ ಪುನರ್ ಜನ್ಮ ನೀಡಿದ್ದಾರೆ ಜೀವನ ಪೂರ್ತಿ ಅವರ ಸೇವೆ ಮಾಡುವೆ – ಹೆಬ್ಬಾಳಕರ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಜಾತಿ, ಧರ್ಮ, ಭಾಷೆ, ಪಕ್ಷ ಬೇಧಬಾವ ಮರೆತು ತಮ್ಮನ್ನು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆ ಮಾಡಿ ತಮಗೆ ಅಧಿಕಾರ ನೀಡಿದ್ದು ಜೀವನ ಪೂರ್ತಿ ಅವರ ಸೇವೆ ಮಾಡಿದರು ಅವರ ಋಣ ತಿರುವುಸುವುದಕ್ಕಾಗುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ರವಿವಾರ  ನಗರದ ಧರ್ಮನಾಥ ಭವನದಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಹಾಗೂ ಮುಖಂಡುರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ ತೀರಾ ಹಿಂದುಳಿದ ಕ್ಷೇತ್ರವಾಗಿದೆ. ಈ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಮಾತು ಕೊಟ್ಟಿದ್ದೇನೆ. ಎಲ್ಲ ಬರವಸೆಗಳನ್ನು ಈಡೇರಿಸುವ ಸಂಕಲ್ಪ ಮಾಡಿದ್ದೇನೆ. ಸರಕಾರದ ಎಲ್ಲ ಇಲಾಖೆಗಳ ಸಚಿವರನ್ನು ಭೇಟಿಯಾಗಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಮನವಿ ಮಾಡಿಕೊಂಡಿದ್ದೇನೆ. ಪ್ರತಿಯೊಬ್ಬರು ಸಕಾರಾತ್ಮಕವಾಗಿ ಮನವಿಗೆ ಸ್ಪಂಧಿಸಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರ ಮುಖ್ಯಮಂತ್ರಿಗಳ ಕ್ಷೇತ್ರ ಎಂದು ಭಾವಿಸಿ ನೀವು ತಮ್ಮ ಸಹೋದರಿ ಅಭಿವೃದ್ಧಿ ಬಗ್ಗೆ ಚಿಂತೆ ಮಾಡಬೇಡಿ ಎಂದು ತಮಗೆ ಧೈರ್ಯ ಹೇಳಿದ್ದಾರೆ. ನಿಮ್ಮಲ್ಲೆರ ವಿಶ್ವಾಸವೇ ನನ್ನ ಬಲ, ಎಲ್ಲರ ಸಹಕಾರದಿಂದ ನಿಮ್ಮೇಲ್ಲರ ಕನಸುಗಳನ್ನು ನನಸು ಮಾಡುವ ಕಾಲ ಕೂಡಿ ಬಂದಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ  ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಹೋಗಿದ್ದೆ ಆ ಸಮಯದಲ್ಲಿ ಕೆಲವರು ನನ್ನನು ಸಿದ್ದರಾಮಯ್ಯ ಅವರನ್ನು ಭೇಟಿಯಾಗದಂತೆ ಅಡ್ಡಿ ಪಡಿಸಿದ್ದರು. ಇವತ್ತು ಅವರೆಲ್ಲರು ಎಲ್ಲಿ ಇದ್ದಾರೋ ಅಲ್ಲಿಯೇ ಇದ್ದಾರೆ. ನಿಮ್ಮೆಲ್ಲರ ಆರ್ಶಿವಾದದಿಂದ ನಾನು ಇಂದು ಈ ಮಟ್ಟಕ್ಕೆ ಬೆಳದಿದ್ದೇನೆ. ಅಧಿಕಾರ ಮುಖ್ಯ ಎಂದು ನಾನೇಂದು ಭಾವಿಸಿಲ್ಲ. ಜೀವನ ಪೂರ್ತಿ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ. ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಮಳೆಗಾಲದ ನಂತರ ಪ್ರತಿಯೊಂದು ಗ್ರಾಮದಲ್ಲಿಯೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಮಕ್ಕಳು ಮಳೆ ನೀರಿನಲ್ಲಿ ಕುಳಿತು ಪಾಠ ಕಲಿಯುವ ಪರಿಸ್ಥಿತಿ ಇದೆ. ಇದಕ್ಕಾಗಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಶಾಲೆಗಳ ದುರಸ್ಥಿಗೆ ಅನುದಾನ ನೀಡುವಂತೆ ಅಂಗಲಾಚಿದ್ದೇನೆ. ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ಕ್ಷೇತ್ರದ ಕೆರೆ ತುಂಬಿಸುವ ಯೋಜನೆಯ ಸರ್ವೇ ಕಾರ್ಯ ನಡೆಯುತ್ತಿದೆ ಹೀಗೆ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮೀಸುತ್ತಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.
ಕ್ಷೇತ್ರದ ಮಾಜಿ ಶಾಸಕರು ಕಳೆದ ಹತ್ತು ವರ್ಷಗಳಿಂದ ನನಗೆ ಗ್ರಾಪಂನ ಸದಸ್ಯೆನಾಗುವ ಭಾಗ್ಯ ಇಲ್ಲ ಎಂದು ಚುಚ್ಚಿ ಮಾತನಾಡಿದ್ದರು. ಆದರೆ ನನ್ನ ಹಣೆಬರಹ ನಿಮ್ಮ ಕೈಯಲ್ಲಿತ್ತು. ಮಾಜಿ ಶಾಸಕರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ನನ್ನ ವಿರೋಧಿಗಳಿಗೆ ನೀವೇ ಉತ್ತರ ನೀಡಿದ್ದೀರಾ. ಕ್ಷೇತ್ರದ ಅಭಿವೃದ್ಧಿ ಯಾರೂ ಏಕೆ ಮಾಡಲಿಲ್ಲ ಎಂದು ನಾನು ಚರ್ಚೆ ಮಾಡುವುದಿಲ್ಲ. ನಿವೇಲ್ಲ ಆರ್ಶಿವಾದ ಮಾಡಿದ್ದೀರಾ ನಿಮ್ಮೇಲ್ಲರ ಆಶೆ ಆಕಾಂಕ್ಷೆಗಳನ್ನು ಈಡೇರಿಸುವುದೊಂದೆ ನನ್ನ ಮುಖ್ಯ ಗುರಿಯಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಸಿ.ಸಿ.ಪಾಟೀಲ, ಯುವರಾಜ ಕದಂ, ಯಲ್ಲಪ್ಪ  ಡೆಕೋಳಕರ, ಬಾಪುಗೌಡ ಪಾಟೀಲ, ಅಡಿವೇಶ ಇಟಗಿ ಸೇರಿದಂತೆ ಹಲವಾರು ಜನ ನಾಯಕರು ಮಾತನಾಡಿ, ಶಾಸಕರು ಆಯ್ಕೆಯಾದ ಬಳಿಕ ಜನ ಶಾಸಕರನ್ನು ಸತ್ಕಾರ ಮಾಡುವುದನ್ನು ನೋಡಿದ್ದೇವೆ. ಆದರೆ ಲಕ್ಷ್ಮೀ ಹೆಬ್ಬಾಳಕರ ಅವರು, ಕ್ಷೇತ್ರದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಅಭಿನಂಧನಾ ಸಮಾರಂಭ ಏರ್ಪಡಿಸಿರುವುದು ಹೆಮ್ಮೆ ಎನ್ನಿಸುತ್ತದೆ. ಲಕ್ಷ್ಮೀ ಹೆಬ್ಬಾಳಕರ ಅವರು 25 ವರ್ಷದ ಅಭಿವೃದ್ಧಿಯನ್ನು ಐದೇ ವರ್ಷದಲ್ಲಿ ಮಾಡುವುದಾಗಿ ಭರವಸೆ ನೀಡಿದ್ದರು. ಅವರ ಅಭಿವೃದ್ಧಿಯ ವೇಗ ನೋಡಿದರೆ ಎರಡೇ ವರ್ಷದಲ್ಲಿ 25 ವರ್ಷದ ಮುಂದಿನ ಅಭಿವೃದ್ಧಿಯನ್ನು ಗ್ರಾಮೀಣ ಕ್ಷೇತ್ರ ಕಾಣುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಬೆಳ್ಳಿಯ ಖಡ್ಗವನ್ನು ನೀಡಿ ಸನ್ಮಾನಿಸಿದರು.

ಗ್ರಾಮೀಣ ಕ್ಷೇತ್ರವನ್ನು ಬಿಟ್ಟುಕೊಡಲಾರೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ತಮನ್ನು ಮನೆಯ ಮಗಳೆಂದು ಹಾರೈಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೆಬ್ಬಾಳಕರ ಅವರೇ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಎಂದು ಪ್ರಚಾರ ನಡೆಸಿದ್ದಾರೆ. ಆದರೆ, ನಾನು ಗ್ರಾಮೀಣ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಜನತೆಗೆ ಬರವಸೆ ನೀಡಿದರು.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *