ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಡೆವಲಪ್ಮೆಂಟ್ ಎಕ್ಸಪ್ರೆಸ್…..!!!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನಿನ್ನೆಯಷ್ಟೇ ಹತ್ತು ಹೊಸ ಬಸ್ ಗಳ ಸೇವೆ ಒದಗಿಸಿಕೊಟ್ಟ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ. ಮಹತ್ವದ ಕೂಡು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು

ಇಂದು ಶುಕ್ರವಾರ ದೇಸೂರ ಗ್ರಾಮದಲ್ಲಿ ಅಕ್ಷರಶಃ ಲಕ್ಷ್ಮೀ ವಾರ ಆಗಿತ್ತು ಹಲವಾರು ವರ್ಷಗಳಿಂದ ಹದಗೆಟ್ಟು ಹೋಗಿದ್ದ ನಾಲ್ಕು ಗ್ರಾಮಗಳನ್ನು ಕೂಡಿಸುವ ದೇಸೂರ,ನಂದಿಹಳ್ಳಿ,ಗಜಪತಿ,ಕುಕಡೊಳ್ಳಿ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಾಲ್ಕೂ ಗ್ರಾಮಗಳ ಹಿರಿಯರ ಸಮ್ಮುಖದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು

ಅಂದಾಜು ಮೂರು ಕಿಮೀ ಉದ್ದದ ರಸ್ತೆಯನ್ನು 2 ಕೋಟಿ 20 ಲಕ್ಷ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ

ಹಲವಾರು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನಾಲ್ಕು ಗ್ರಾಮಗಳ ಹಿರಿಯರು ಸತ್ಕರಿಸಿ ಗೌರವಿಸಿದರು

ಹಿರಿಯರ ಸಮ್ಮಾನ ಸ್ವೀಕರಿಸಿ ಮಾತನಾಡಿದ ಹೆಬ್ಬಾಳಕರ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಚುನಾವಣೆಯ ಸಂಧರ್ಭದಲ್ಲಿ ಕೊಟ್ಟ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲು ಶ್ರಮಿಸುತ್ತಿದ್ದೇನೆ ಹಳ್ಳಿ ಹಳ್ಳಿಗೆ ಉತ್ತಮ ರಸ್ತೆ, ಮನೆಮನೆಗೆ ನೀರು ಎಂಬ ಘೋಷಣೆಯನ್ನು ಸಾಕಾರಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೆಬ್ಬಾಳಕರ ಹೇಳಿದರು

ಹಂತ ಹಂತವಾಗಿ ಕ್ಷೇತ್ರದ ಎಲ್ಲ ರಸ್ತೆಗಳ ಸ್ವರೂಪ ಬದಲಾಗಲಿದೆ ಮನೆ ಮನೆಗೆ ನೀರು ಹರಿಯಲಿದೆ ಎಂದು ಹೆಬ್ಬಾಳಕರ ಭರವಸೆ ನೀಡಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *