Breaking News

ರಾಣಿ ಚನ್ನಮ್ಮನ ಐಕ್ಯ ಸ್ಥಳ ರಾಷ್ಟ್ರೀಯ ಸ್ಮಾರಕವಾಗಲಿ-ಕವಟಗಿಮಠ

ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸುವಂತೆ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದ್ದಾರೆ

ಬೈಲಹೊಂಗಲದಲ್ಲಿರುವ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವಂತೆ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದಿದ್ದೆ ಸರ್ಕಾರ ಕೂಡಲೇ ಸಮಾಧಿ ಅಭಿವೃದ್ದಿಗೆ ಸಮಗ್ರವಾದ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ತಾವು ಮತ್ತು ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಮನವೊಲಿಸಿ ವೀರ ರಾಣಿಯ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಶಿಸುವ ಎಲ್ಲ ಪ್ರಯತ್ನಗಳನ್ನು ಮಾಡುವದಾಗಿ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಭರವಸೆ ನೀಡಿದ್ದಾರೆ

ಸರ್ಕಾರ ಚನ್ನಮ್ಮಾಜಿಯ ಸಮಾಧಿಯ ಅಭಿವೃದ್ದಿಗೆ ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡುವದಾಗಿ ಹೇಳಿದೆ ಆದರೆ ರಾಜ್ಯ ಸರ್ಕಾರ ಸಮಾಧಿ ಸ್ಥಳದ ಅಭಿವೃದ್ದಿಗೆ ಆಕರ್ಷಕವಾದ ನೀಲ ನಕ್ಷೆ ಸಿದ್ಧ ಪಡಿಸಿ ಸಮಗ್ರವಾದ ಯೋಜನೆ ರೂಪಿಸಿದರೆ ಕೇಂದ್ರ ಸರ್ಕಾರದಿಂದಲೂ ಅನುದಾನ ಬಿಡಗಡೆ ಮಾಡುವಂತೆ ಪ್ರಯತ್ನಿಸುತ್ತೇವೆ

ರಾಜ್ಯ ಸರ್ಕಾರ ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಕೇಂದ್ರದ ಪುರಾತತ್ವ  ಮತ್ತು ಸರ್ವೇಕ್ಷಣಾ ಇಲಾಖೆಗೆ ಕೂಡಲೇ ಪ್ರಸ್ರಾವನೆ ಸಲ್ಲಿಸಬೇಕು ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಸಂಸದ ಸುರೇಶ ಅಂಗಡಿ.ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವೀರ ರಾಣಿಯ ಐಕ್ಯ ಸ್ಥಳಕ್ಕೆ ರಾಷ್ಟ್ರೀಯ ಮಾನ್ಯತೆ ದೊರಕಿಸಿ ಕೊಡುತ್ತೇವೆ ಎಂದು ಕವಡಗಿಮಠ ಹೇಳಿದರು

ಖಾನಾಪೂರ ತಾಲೂಕಿನ ನೇರಸಾ,ಶಿರೋಳಿ ಗ್ರಾಮಗಳು ಭೀಮಘಡ ಅಭಯಾರಣ್ಯದಲ್ಲಿವೆ ಈ ಎರಡೂ ಗ್ರಾಮದ ಜನರ ಬದುಕು ಹಗ್ಗದ ಮೇಲಿನ ನಡುಗೆ ಯಾಗಿದೆ ಈ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಪರಿಷತ್ತಿನಲ್ಲಿ ಹೋರಾಟ ಮಾಡಿದ್ದೆ ಸರಕಾರ ಇದಕ್ಕೆ ಸ್ಪಂದಿಸಿ ಮಾರ್ಚದೊಳಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವದಾಗಿ ಹೇಳಿದೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ರಾಜು ಜಿಕ್ಕನಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *