ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರೀಲ್ 18 ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ ಮಾಡಲಿದ್ದಾರೆ
ಬೆಳಗಾವಿ ಜಿಲ್ಲೆಯ ಘಟಪ್ರಭಾ ದಲ್ಲಿ ಎಪ್ರಿಲ್ 18 ರಂದು ವಿಜಯ ಸಂಕಲ್ಪ ಸಮಾವೇಶ ನಡೆಸಲು ಬಿಜೆಪಿ ನಾಯಕರು ನಿರ್ಧರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ
ಸಂಸದ ಸುರೇಶ ಅಂಗಡಿ ಮತ್ತು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭಾದಲ್ಲಿ ಸಮಾವೇಶ ನಡೆಯುವ ಜಾಗೆಯನ್ನು ಪರಿಶೀಲಿಸಿದ್ದಾರೆ.
ಘಟಪ್ರಭಾ ದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಸುವದು ಸೂಕ್ತ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಘಟಕ ರಾಜ್ಯ ಘಟಕಕ್ಕೆ ವರದಿ ಕಳುಹಿಸಿದ್ದು ಮೋದಿ ಕಾರ್ಯಕ್ರಮ ಎಪ್ರಿಲ್ 18 ರಂದು ಘಟಪ್ರಭಾ ದಲ್ಲಿ ನಡೆಯುವದು ಫೈನಲ್ ಆಗಿದೆ ಎಂದು ತಿಳಿದು ಬಂದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ