ಬೆಳಗಾವಿ ಸುದ್ದಿ
*ಬೆಳಗಾವಿ:-* ಬೆಳಗಾವಿ ಕ್ಷೇತ್ರದಲ್ಲಿ ಎರಡು ನಾಮಪತ್ರಗಳು ತಿರಸ್ಕ್ರತವಾಗಿವೆ ಒಟ್ಟು 76 ನಾಮಪತ್ರಗಳು ಸಲ್ಲಿಕೆಯಾಗಿದ್ದು ಇವುಗಳಲ್ಲಿ 74 ನಾಮಪತ್ರಗಳು ಕ್ರಮಬದ್ದವಾಗಿದ್ದು ಎರಡು ನಾಮಪತ್ರಗಳು ತಿರಸ್ಕ್ರತಗೋಂಡಿವೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101 ಎಂಇಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಘೋಷಿಸಿದ್ದರು ಆದರೆ ಎಂಇಎಸ್ಸಿನ ನೂರಾಒಂದರ ಕನಸು ಕೋನೆಗು ಮೂರಾಬಟ್ಟೆಯಾಯಿತು.
ಬೈಲಹೋಂಗಲದ ದಯಾನಂದ ಗುರುಪುತ್ರಯ್ಯಾ ಚಿಕ್ಕಮಠ ಹಾಗೂ ಬೆಳಗಾವಿಯ ಚವಾಟಗಲ್ಲಿಯ ಖುರ್ಷಿದಾಬಾನು ಅಸ್ಲಂ ನದಾಫ್ ಈ ಇಬ್ಬರ ನಾಮಪತ್ರಗಳು ತಿರಸ್ಕ್ರತ ಗೋಂಡಿವೆ.