- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರ ಗಮನಕ್ಕೆ……..
ಬೆಳಗಾವಿ-ಮಕ್ಕಳಿದ್ದರೂ ತಾಯಿ ತನ್ನ ಮನೆಯಲ್ಲಿ ಒಂಟಿಯಾಗಿದ್ದಳು ಒಬ್ಬ ಮಗ ಆಗಾಗ ಆಹಾರ ಸಾಮುಗ್ರಿಗಳನ್ನು ಆಗಾಗ ತಾಯಿಗೆ ಕೊಟ್ಟು ಹೋಗುತ್ತಿದ್ದ ಆದ್ರೆ ಇನ್ನೊಬ್ಬ ಮಗ ಬಂದು ತಾಯಿ ವಾಸವಾಗಿದ್ದ ಮನೆಯನ್ನು ತನ್ನ ಹೆಂಡತಿ ಮಕ್ಕಳ ಹೆಸರಿನಲ್ಲಿ ಬರೆಯಿಸಿಕೊಂಡು ತಾಯಿ ವಾಸವಾಗಿದ್ದ ಮನೆಯನ್ನು ಧ್ವಂಸ ಮಾಡಿದ್ದಾನೆ ಜಿಟಿ,ಜಿಟಿ ಸುರಿಯುತ್ತಿರುವ ಮಳೆಯಲ್ಲಿ ಆ ತಾಯಿ ಈಗ ಬೀದಿಪಾಲಾಗಿದ್ದು, ಯಾರಾದ್ರು ಇದ್ರೆ ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಸುರಿಸಿದ್ದಾಳೆ ಈ ಘಟನೆ ನಡೆದಿದ್ದು ಬೆಳಗಾವಿ ನಗರದಲ್ಲಿ.
ತಮ್ಮ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ಮುಪ್ಪಿನ ಕಾಲಕ್ಕೆ ತಮಗೆ ಆಸರೆಯಾಗುತ್ತಾರೆಂದು ಬಹುತೇಕ ಎಲ್ಲ ತಂದೆ – ತಾಯಿಗಳು ಬೆಟ್ಟದಷ್ಟು ಭರವೆ,ಕನಸು,ಆಸೆಗಳನ್ನ ಇಟ್ಟುಕೊಡಿರುತ್ತಾರೆ. ಆದರೆ, ಬೆಳಗಾವಿಯಲ್ಲೊಬ್ಬ ಕಿಚಕ ಮಗ ಮಾಡಿದ ಕೆಲಸಕ್ಕೆ ವೃದ್ಧ ತಾಯಿ ಬೀದಿಪಾಲಾಗಿದ್ದಾಳೆ.
ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಯ ವಸ್ತುಗಳ ಕಣ್ಣೀರು ಹಾಕುತ್ತಾ ಮಗ ವಿರುದ್ಧ ಹಿಡಿಶಾಪ ಹಾಕ್ತಿರುವ ವೃದ್ಧೆ ಈ ಎಲ್ಲ ದೃಶ್ಯ ಕಂಡುಬಂದಿದ್ದು ಬೆಳಗಾವಿಯ ಆನಗೋಳ ಪ್ರದೇಶದ ಶಿವಶಕ್ತಿ ನಗರದಲ್ಲಿ. 80ವರ್ಷದ ವೃದ್ಧೆಯ ಹೆಸರು ಶಾಂತಾಬಾಯಿ ಸಾತೇರಿ ಅಂತಾ.ಶಾಂತಾಬಾಯಿಗೆ ಮೂವರು ಗಂಡು ಮಕ್ಕಳಿದ್ದರೂ ಎಲ್ಲರೂ ಕೂಡ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.ಕಳೆದ ಹತ್ತು ವರ್ಷಗಳ ಹಿಂದೆ ಶಾಂತಾಬಾಯಿ ಪತಿ ತೀರಿಕೊಂಡಿದ್ದಾರೆ.ಆಗಿನಿಂದಲೂ ಅಜ್ಜಿ ಒಬ್ಬಳೆ ಮನೆಯಲ್ಲಿ ವಾಸ ಮಾಡುತ್ತಾ ಮೂರನೇ ಮಗ ಮತ್ತು ಮೊದಲನೆ ಅಜ್ಜಿಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಕೊಡಿಸುತ್ತಿದ್ದರಂತೆ. ಅದರಿಂದಲೇ ಜೀವನ ಸಾಗಿಸುತ್ತಿದ್ದ ಶಾಂತಾಬಾಯಿಗೆ ಎರಡನೇ ಮಗ ಚಾಂಗದೇವ ಎಂಬಾತ ವಿಲನ್ ಆಗಿದ್ದಾನೆ.
ಕಾರಣ ತಾಯಿಯ ಹೆಸರಿನಲ್ಲಿ ಮನೆ ಇತ್ತು. ಹಾಗಾಗಿ ಮನೆಯನ್ನ ಹೇಗಾದರೂ ಮಾಡಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂದು ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದ ಹೊಸ ಮನೆ ನಿರ್ಮಾಣ ಮಾಡುವ ಬಗ್ಗೆ ತಾಯಿಯ ಮತ್ತು ತಮ್ಮ ಸಹೋದರರ ಮುಂದೆ ಪ್ರಸ್ತಾಪ ಇಡುತ್ತಾನೆ. ಬಳಿಕ ಅವರನ್ನ ಪುಸಲಾಯಿಸಿ ತನ್ನ ಹೆಸರಿಗೆ ಮನೆ ಜಾಗೆ ವರ್ಗಾವಣೆಗೆ ಮಾಡಿಕೊಂಡು ಕೆಲವೇ ದಿನಗಳಲ್ಲಿ ಆತ ಅದನ್ನು ತನ್ನ ಪತ್ನಿ ಹೆಸರಿಗೆ ಮಾಡಿ ಮೂವರಿಗೂ ಮೋಸ ಮಾಡಿದ್ದಾನೆ.ಅಷ್ಟೇ ಅಲ್ಲದೇ ತಾಯಿ ವಾಸಿಸುತ್ತಿದ್ದ ಮನೆಯನ್ನು ಬಿಡಬೇಕದು ಚಾಂಗದೇವ ಆಗಾಗ ಮನೆಗೆ ಬಂದು ತಾಯಿಗೆ ಕಿರುಕುಳ ಕೊಟ್ಟಿದ್ದನಂತೆ.
ಇನ್ನೂ ತಾಯಿ ಶಾಂತಾಬಾಯಿ ಜತೆಗೆ ಆಗಾಗ ಗಲಾಟೆ ಮಾಡುತ್ತಿದ್ದ ಚಾಂಗದೇವ ರಾತ್ರೋರಾತ್ರಿ ಮನೆಗೆ ನುಗ್ಗಿ ಹೆತ್ತ ತಾಯಿಯ ಇರುತ್ತಿದ್ದ ಮನೆಯನ್ನೇ ಧ್ವಂಸಗೊಳಿಸಿ ದುಷ್ಟ ಮಗ ಚಾಂಗದೇವ ವಿಕೃತಿ ಮೆರೆದಿದ್ದಾನೆ. 80ವರ್ಷದ ತಾಯಿಗೆ ಆಶ್ರಯ ಆಗಬೇಕಿದ್ದ ಮಗ ಆಶ್ರಯವೂ ಆಗದೇ ಇರೋದೊಂದು ಸಿಮೆಂಟಿನ ಶೆಡ್ಡಿನ ಮನೆಯನ್ನೇ ಒಡೆದುಹಾಕಿ ಅಮಾನವೀಯವಾಗಿ ವರ್ತನೆ ಮಾಡಿದ್ದಾನೆ. ಸದ್ಯ ಬೆಳಗಾವಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಸದ್ಯ ವಾಸಿಸಲು ಮನೆ ಇರದೇ ವೃದ್ಧ ತಾಯಿಯ ಬದಕು ಬೀದಿಗೆ ಬಂದಿದೆ.ನ್ಯಾಯಕ್ಕಾಗಿ ಆಗ್ರಹಿಸಿ ವೃದ್ಧೆ ಶಾಂತಾಬಾಯಿ ಈಗ ಬೆಳಗಾವಿಯ ಉದ್ಯಮಭಾಗ ಪೊಲೀಸರ ಮೊರೆ ಹೋಗಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ ರೋಷನ್ ಅವರು ಕೂಡಲೇ ತಾಯಿಯ ನೆರವಿಗೆ ಧಾವಿಸಬೇಕಾಗಿದೆ. ಈ ತಾಯಿಯ ಮಗ ಮಾಡಿರುವ ಮನೆಯ ಖರೀಧಿ,ವರ್ಗಾವಣೆ, ಎಲ್ಲವುಗಳನ್ನು ರದ್ದು ಮಾಡುವದು ಅಗತ್ಯವಾಗಿದೆ.