ಬೆಳಗಾವಿ- ಮೀಸೆ ಮಾವ ಅಂದ್ರೆ.ಯಾರಪ್ಪ ಅಂತಾ ನಿಮಗೆ ಕುತೂಹಲ ಆಗಿರಬೇಕಲ್ಲ .ಬಡವರ ಪರವಾಗಿ ಪ್ರತಿಯೊಂದು ಸಭೆಯಲ್ಲಿ ತೋಳೇರಿಸಿಕೊಂಡು ಮೀಸೆ ತಿರವಿ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದು ಕೊಳ್ಳುವ ಬಡವರ ಬಂಧುವೇ ಸಂಸದ ಪ್ರಕಾಶ ಹುಕ್ಕೇರಿ
ಯಾವದೇ ಸಭೆಗೆ ಬರುವಾಗ ಅವರು ಪ್ರತಿಯೊಂದು ಇಲಾಖೆಗಳ ಅಂಕಿ ಅಂಶಗಳ ಸಮೇತ ಸಭೆಗೆ ಬರ್ತಾರೆ ಅಧಿಕಾರಿಗಳ ನೀರು ಇಳಸ್ತಾರೆ..ಅವರೇ ನಮ್ಮ ಮೀಸೆ ಮಾವ ಪ್ರಕಾಶ ಹುಕ್ಕೇರಿ
ಅವರು ಸಭೆಗೆ ಬಂದರೆ ಅಧಿಕಾರಿಗಳಿಗೆ ನಡುಕ ಹುಟ್ಟುತ್ತದೆ ಈ ಮೀಸೆ ಮಾವ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಬಡವರ ಪರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಸಭೆಯಲ್ಲಿ,ಕುಡಿಯುವ ನೀರು,ಬಹು ಗ್ರಾಮಗಳ ನೀರಿನ ಯೋಜನೆ ,ರೇಶನ್ ಕಾರ್ಡ,ಶೌಚಾಲಯಗಳ ನಿರ್ಮಾಣ, ಅಂಗನವಾಡಿ ಕೇಂದ್ರಗಳ ನಿರ್ಮಾಣ, ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಭೆಯಲ್ಲಿ ಮಿಂಚಿದ್ದೇ ಮಿಂಚಿದ್ದು
ನಮ್ಮ ಮೀಸೆ ಮಾವ ಸಭೆಯಲ್ಲಿ ಆಗಾಗ ಪ್ಲೀಸ್ ಅಂಡರ್ ಸ್ಟ್ಯಾಂಡ್ ಮಾಯ್ ವರ್ಡ ಅಂತಾ ಇಂಗ್ಲೀಷ್ ನಲ್ಲಿ ಡೈಲಾಗ್ ಹೊಡೆದು ಎಲ್ಲರ ಗಮನ ಸೆಳೆದರು ಯಾಕೋ..ಏನೋ ಜಿಲ್ಲಾ ಮಂತ್ರಿಗಳು ಸಭೆಯಲ್ಲಿ ಮೌನರಾಗಿದ್ದರು
ಲಕ್ಷ್ಮಣ್ ಸವದಿ ಕೂಡಾ ಅನೇಕ ವಿಷಯಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ