ಸರದಿ ಸತ್ಕಾರ್ ಮೀಸೆ ಮಾವನ ಚಮತ್ಕಾರ್..! ಇದ್ರೆ ಹಿಂಗಿರಬೇಕಪ್ಪ ನಮ್ಮ ಲೀಡರ್…

ಬೆಳಗಾವಿ-ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಯಾವ ರಿತಿ ಅನುದಾನ ಮಂಜೂರು ಮಾಡಿಸಿಕೊಳ್ಳಬೇಕು ಎನ್ನವದನ್ನು ಸಂಸದ ಪ್ರಕಾಶ ಹುಕ್ಕೇರಿ ಅರಿಂದ ಕಲಿಯಬೇಕು ಮೀಸೆ ಮಾವ ಎಂಬ ಹೆಸರಿನಿಂದ ಪರಿಚಿತರಾಗಿರುವ ಪ್ರಕಾಶ ಹುಕ್ಕೇರಿ ತಮ್ಮ ಕ್ಷೇತ್ರದ ಹಲವಾರು ಗ್ರಾಮಗಳ ಹಿರಿಯರನ್ನು ಕರೆತಂದು ಸಣ್ಣ ನೀರಾವರಿ ಮಂತ್ರಿಗಳಿ ಸರದಿ ಸತ್ಕಾರ ಮಾಡಿಸಿ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು
ಚಿಕ್ಕೋಡಿ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ 600 ಫೂಟ ಬೋರವೆಲ್ ಕೊರೆಯಿಸಿದರೂ ನೀರು ಸಿಗುತ್ತಿಲ್ಲ ಬೋರವೇಲ್ ಗಳಿಂದ ನೀರಿನ ಸಮಸ್ಯೆ ನಿವಾರಣೆ ಸಾಧ್ಯವೇ ಇಲ್ಲ ಅದಕ್ಕಾಗಿ ತಾಲೂಕಿನಲ್ಲಿ ಯಾತ ನೀರಾವರಿ ಯೋಜನೆಗಳ ಮೂಲಕ ಸಮದ್ಯೆ ನಿವಾರಣೆ ಮಾಡಬೇಕು ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರಕಾಶ ಹುಕ್ಕೇರಿ ಟಿಬಿ ಜಯಚಂದ್ರ ಅವರಲ್ಲಿ ಮನವಿ ಮಾಡಿಕೊಂಡರು
ಪ್ರಕಾಶ ಹುಕ್ಕೇರಿ ಅಂದರೆ ವರ್ಕರ್, ವರ್ಕರ್ ಪ್ರಕಾಶ ಹುಕ್ಕೇರಿ ಅನ್ನೋದು ಜಿಲ್ಲೆಯಲ್ಲಿ ಜನಜನಿತವಾಗಿದೆ ಮೀಸೆ ಮಾವ ಮೀಸೆ ತಿರುವುತ್ತ ಕಚೇರಿ ಕಚೇರಿ ಅಲೆದಾಡಿ ಟೇಬಲ್ ಟೇಬಲ್ ಸುತ್ತಾಡಿ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸುತ್ತಾರೆ ತಮ್ಮ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಿಸುತ್ತಾರೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *