Breaking News

ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ ಪುತ್ರನ ಆಸ್ತಿ ಎಷ್ಟು ಗೊತ್ತಾ..???

ಲಕ್ಷ್ಮೀ ಪುತ್ರ ಮೃಣಾಲ್ ಆಸ್ತಿ 13 ಕೋಟಿ….!!

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ ನಾಮಪತ್ರದ ಜೊತೆ ಸಲ್ಲಿಸಿದ ದಾಖಲೆಗಳ ಪ್ರಕಾರ ಅವರ ಬಳಿ ₹13.63 ಕೋಟಿ ಮೌಲ್ಯದ ಆಸ್ತಿ ಇದೆ.

₹10.01 ಕೋಟಿ ಮೌಲ್ಯದ ಚರಾಸ್ತಿ, ₹3.62 ಕೋಟಿ ಸ್ಥಿರಾಸ್ತಿ ಇದೆ. ₹4.20 ಕೋಟಿ ಮೌಲ್ಯದ ವಿವಿಧ ಶೇರ್‌ಗಳಿವೆ. ₹6.16 ಕೋಟಿ ಸಾಲ ಮಾಡಿರುವ ಅವರ ಬಳಿ ಯಾವುದೇ ವಾಹನವಿಲ್ಲ. ಪತ್ನಿ ಹಿತಾ ಬಳಿ ₹23.55 ಲಕ್ಷ, ಒಂದು ವರ್ಷದ ಪುತ್ರಿ ಐರಾ ಹೆಸರಲ್ಲೂ ₹7.85 ಲಕ್ಷದ ಆಸ್ತಿ ಇದೆ. ಅವರ ತಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕೂಡ ಕೋಟ್ಯಧೀಶೆ. ಆದರೆ, ಮೃಣಾಲ್ ಆಸ್ತಿಯಲ್ಲಿ ತಾಯಿ ಯಾವುದೇ ಆಸ್ತಿ ಅಂಶಗಳನ್ನು ಸೇರಿಸಿಲ್ಲ.

ಗಮನಾರ್ಹ ಅಂಶವೆಂದರೆ; ಹೆಬ್ಬಾಳಕರ ಕುಟುಂಬಕ್ಕೇ ಸೇರಿದ ಸವದತ್ತಿಯ ಹರ್ಷ ಶುಗರ್ಸ್‌ ಲಿಮಿಟೆಡ್‌ಗೆ ₹3.66 ಕೋಟಿ, ಹರ್ಷ ಬಿಲ್ಡರ್‌ ಮತ್ತು ಡೆವಲಪರ್ಸ್‌ಗೆ ₹17.70 ಲಕ್ಷ, ಸಂಬಂಧಿ ಗಿರಿಜಾ ಹಟ್ಟಿಹೊಳಿ ಅವರಿಗೆ ₹27.15 ಲಕ್ಷ ಸೇರಿದಂತೆ ಹಲವರಿಗೆ ₹4 ಕೋಟಿಗೂ ಅಧಿಕ ಸಾಲ ನೀಡಿದ್ದಾರೆ.

ಮೃಣಾಲ್‌ ಅವರ ವಾರ್ಷಿಕ ಆದಾಯ 2022–23ರಲ್ಲಿ ₹29.31 ಲಕ್ಷ ಇದೆ. 2019–20ರಲ್ಲಿ ₹11.69 ಲಕ್ಷ ಇತ್ತು. ಮೂರು ವರ್ಷದಲ್ಲಿ ಮೂರು ಪಟ್ಟು ಆದಾಯ ಹೆಚ್ಚಿಸಿಕೊಂಡಿದ್ದರೆ.

ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಆಸ್ತಿ ವಿವರ

ಒಟ್ಟು ಆಸ್ತಿಯ ಮೌಲ್ಯ;₹13.63 ಕೋಟಿ
ನಗದು;₹1.72 ಲಕ್ಷ
ಒಟ್ಟು ಚರಾಸ್ತಿ;₹10.01 ಕೋಟಿ
ಸ್ಥಿರಾಸ್ತಿ;₹3.62 ಕೋಟಿ
ವಾಹನ; ಇಲ್ಲ
ಚಿನ್ನ;₹3.78 ಲಕ್ಷ (150 ಗ್ರಾಂ)
ಬೆಳ್ಳಿ; ಇಲ್ಲ
ಸಾಲ;₹6.16 ಕೋಟಿ
ಶೇರ್‌ಗಳು; ₹4.20 ಕೋಟಿ ಮೌಲ್ಯ
ಅಪರಾಧ ಪ್ರಕರಣ; ಇಲ್ಲ
ಪತ್ನಿ ಹಿತಾ ಅವರ ಆಸ್ತಿ
ಒಟ್ಟು ಆಸ್ತಿಯ ಮೌಲ್ಯ;₹23.55 ಲಕ್ಷ
ನಗದು;₹46,200
ಒಟ್ಟು ಚರಾಸ್ತಿ;₹23.55 ಲಕ್ಷ
ಸ್ಥಿರಾಸ್ತಿ; ಇಲ್ಲ
ವಾಹನ; ಇಲ್ಲ
ಚಿನ್ನ;₹12.50 ಲಕ್ಷ
ಬೆಳ್ಳಿ;₹2.15 ಲಕ್ಷ
ಸಾಲ;ಇಲ್ಲ
ಪುತ್ರಿ ಐರಾ ಬಳಿಯ ಚಿನ್ನ–ಬೆಳ್ಳಿ;₹7.85 ಲಕ್ಷ ಮೌಲ್ಯ

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *