ಬೆಳಗಾವಿ- ಮಗುವಿನ ಮುಖ ತನಗೆ ಹೋಲುತ್ತಿಲ್ಲ ಎಂದು ತನ್ನ ಹೆಂಡತಿಯ ಶೀಲದ ಮೇಲೆ ಅನುಮಾನಪಟ್ಟ ಗಂಡನೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಬೆಳಗಾವಿಯ ಉದ್ಯಮಬಾಗ ಪೋಲೀಸ್ ಠಾಣೆಯ ಮಹಾವೀರ ನಗರದಲ್ಲಿ ನಡೆದಿದೆ
26 ವರ್ಷದ ಶಿಲ್ಪಾ ಬಡಿಗೇರ ಹತ್ಯೆಗೀಡಾದ ದುರ್ದೈವಿಯಾಗಿದ್ದು ಆರೋಪಿ ಗಂಡ ಪ್ರವೀಣ ಬಡಿಗೇರ ಉದ್ಯಮಬಾಗ ಠಾಣೆಯಲ್ಲಿ ಶರಣಾಗಿದ್ದಾನೆ
ಬುಧವಾರ ಬೆಳಿಗ್ಗೆ ಇಬ್ಬರು ಹಾವೇರಿಗೆ ತಮ್ಮ ನೆಂಟರ ಮನೆಗೆ ಹೊರಟಿದ್ದರು ಇಷ್ಟರಲ್ಲಿ ಜಗಳಾಡಿಕೊಂಡ ಪ್ರವೀಣ ನೈಲಾನ್ ಹಗ್ಗದಿಂದ ಶಿಲ್ಪಾಳ ಕುತ್ತಿಗೆ ಬಿಗಿದು ಹತ್ಯೆ ಮಾಡಿ ಪೋಲೀಸರಿಗೆ ಶರಣಾಗಿದ್ದಾನೆ
2015 ರಲ್ಲಿ ಇಬ್ಬರ ವಿವಾಹವಾಗಿತ್ತು 2016 ರಲ್ಲಿ ಗಂಡು ಮಗು ಜನಿಸಿತ್ತು ಈ ಮಗು ತನಗೆ ಹೋಲುತ್ತಿಲ್ಲ ಎಂದು ಪ್ರವೀಣ ತನ್ನ ಹೆಂಡತಿಯ ಜೊತೆ ಆಗಾಗ ಜಗಳಾಡುತ್ತಿದ್ದ ಎಂದು ತಿಳಿದು ಬಂದಿದೆ