ಬೆಳಗಾವಿ: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಬೋರ್ಡ್ ಅಧ್ಯಕ್ಷರಾಗಿದ್ದ ಐಎಎಸ್ ಅಧಿಕಾರಿ ಎನ್ ಜಯರಾಮ್ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಜಯರಾಮ್ ಎನ್. 2004 ಬ್ಯಾಚ್ ಐಎಎಸ್ ಅಧಿಕಾರಿ. ಅವರು ಬೆಳಗಾವಿ ಜಿಲ್ಲೆ ಜೊತೆಗೆ ಅವಿನಭಾವ ನಂಟು ಹೊಂದಿದ್ದಾರೆ. ಸುಮಾರು ನಾಲ್ಕು ವರ್ಷಗಳ ಸುಧೀರ್ಘ ಅವಧಿಯವರೆಗೆ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜಯರಾಮ್ ಈ ವೇಳೆ ಜಿಲ್ಲೆಯ ಎಲ್ಲ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸಿಧ್ದರು. ಜನಸಾಮಾನ್ಯರು ಸಮಶ್ಯೆ ಹೇಳಿಕೊಂಡು ಡಿಸಿ ಕಚೇರಿಗೆ ಬಂದರೆ ತ್ವರಿತವಾಗಿ ಸ್ಪಂದಿಸುತ್ತಿದ್ದ ಅವರ ಕಾರ್ಯವೈಖರಿಯಿಂದ ಜನಸಾಮಾನ್ಯರಿಂದಲೂ ಬೇಷ್ ಎನಿಸಿಕೊಂಡಿದ್ದರು.
ಅವರು ಬೆಳಗಾವಿ ಜೊತೆಗೆ ಉತ್ತಮ ನಂಟು ಹೊಂದಿರುವ ಕಾರಣ ಮುಂಬರುವ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಗೆ ಹೆಚ್ಚಿನ ಅನುಕೂಲ ಆಗಬಹುದು ಎನ್ನುವ ವಿಶ್ವಾಸ ಮೂಡಿದೆ.ಎನ್ ಜಯರಾಮ್ ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಸಂಧರ್ಭದಲ್ಲಿ ಅವರ ಕನ್ನಡಪರ ಕಾಳಜಿ,ಅವರು ಕೈಗೊಂಡ ಕನ್ನಡಪರ ನಿರ್ಣಯಗಳು ಗಡಿನಾಡು ಗುಡಿಯಲ್ಲಿ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸಿದ್ದು ಸತ್ಯ.